ಹದಿಹರೆಯದಲ್ಲಿ ದಾರಿತಪ್ಪಿದರೆ ಆರೋಗ್ಯ ಹಾಳು

| Published : Jan 15 2025, 12:46 AM IST

ಸಾರಾಂಶ

ಹದಿಹರೆಯದ ಮಕ್ಕಳು ದಾರಿತಪ್ಪಿ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳಬಾರದು ಎಂದು ಶ್ರವಣಬೆಳಗೊಳ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ಎ. ಬಿ. ಚೌಗಲೇ ಮಕ್ಕಳಿಗೆ ತಿಳಿ ಹೇಳಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹಾಗೂ ಇಂದಿರಾಗಾಂಧಿ ವಸತಿ ಶಾಲೆ ಸಂಯುಕ್ತ ಆಶ್ರಯದಲ್ಲಿ, ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ದುಶ್ಚಟಕ್ಕೆ ಬಲಿಯಾಗಬಾರದು, ಉತ್ತಮ ಸ್ನೇಹಿತರ ಸಂಪಾದನೆ ಮಾಡಿ, ಪುಸ್ತಕಗಳನ್ನೇ ಸ್ನೇಹಿತರನ್ನಾಗಿ ಮಾಡಿಕೊಳ್ಳಿ, ದುಶ್ಚಟಗಳಿಗೆ ಬಲಿಯಾಗಿ ದಾರಿ ತಪ್ಪಿದರೆ ಕುಟುಂಬ, ಸಮಾಜಕ್ಕೆ, ಕಳಂಕವಾಗುತ್ತೀರ. ಅತಿಯಾದ ಮೊಬೈಲ್ ಬಳಕೆ ಕೂಡ ದುಶ್ಚಟವಾಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಹದಿಹರೆಯದ ಮಕ್ಕಳು ದಾರಿತಪ್ಪಿ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳಬಾರದು ಎಂದು ಶ್ರವಣಬೆಳಗೊಳ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ಎ. ಬಿ. ಚೌಗಲೇ ಮಕ್ಕಳಿಗೆ ತಿಳಿ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹಾಗೂ ಇಂದಿರಾಗಾಂಧಿ ವಸತಿ ಶಾಲೆ ಸಂಯುಕ್ತ ಆಶ್ರಯದಲ್ಲಿ, ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ದುಶ್ಚಟಕ್ಕೆ ಬಲಿಯಾಗಬಾರದು, ಉತ್ತಮ ಸ್ನೇಹಿತರ ಸಂಪಾದನೆ ಮಾಡಿ, ಪುಸ್ತಕಗಳನ್ನೇ ಸ್ನೇಹಿತರನ್ನಾಗಿ ಮಾಡಿಕೊಳ್ಳಿ, ದುಶ್ಚಟಗಳಿಗೆ ಬಲಿಯಾಗಿ ದಾರಿ ತಪ್ಪಿದರೆ ಕುಟುಂಬ, ಸಮಾಜಕ್ಕೆ, ಕಳಂಕವಾಗುತ್ತೀರ. ಅತಿಯಾದ ಮೊಬೈಲ್ ಬಳಕೆ ಕೂಡ ದುಶ್ಚಟವಾಗುತ್ತದೆ ಎಂದರು.

ತಾಲೂಕು ಪತ್ರಿಕಾ ವಿತರಕರ ಒಕ್ಕೂಟದ ಕಾರ್ಯದರ್ಶಿ ಎ. ಎಂ. ಜಯರಾಮ್ ಮಾತನಾಡಿ, ಸುಂದರವಾದ ಬಾಲ್ಯ ಜೀವನವನ್ನ ಅನುಭವಿಸಬೇಕು, ದುಶ್ಚಟಗಳಿಗೆ ಬಲಿಯಾಗಿ ನಿಮ್ಮ ಹಣ ಯೌವನ, ಆರೋಗ್ಯ ಬಾಳ್ವೆಯನ್ನ ಹಾಳು ಮಾಡಿಕೊಳ್ಳಬೇಡಿ, ಯುವಕರು ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವುದು ಹೆಚ್ಚಾಗುತ್ತಿದೆ, ಯುವಶಕ್ತಿ ದೇಶದ ಆಸ್ತಿ ಆಗಬೇಕು, ಯುವ ಜನಾಂಗದ ಪ್ರತಿಭೆ ವ್ಯರ್ಥವಾಗಬಾರದು, ಸದೃಢ ಭಾರತ ಕಟ್ಟುವಲ್ಲಿ ಯುವಕರ ಪಾತ್ರ ಪ್ರಮುಖವಾದದ್ದು. ಉನ್ನತ ಶಿಕ್ಷಣ ಪಡೆಯುವ ಮೂಲಕ ಕುಟುಂಬಕ್ಕೆ ಸಮಾಜಕ್ಕೆ ಗೌರವ ತನ್ನಿ ದುಶ್ಚಟಗಳು ಸ್ನೇಹ ಸಂಬಂಧ, ಬಾಂಧವ್ಯ ಹಣ ಆರೋಗ್ಯ ಹಾಳು ಮಾಡುತ್ತದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ರಾಘವೇಂದ್ರ ಪೂಜಾರಿ ಪ್ರಾಸ್ತಾವಿಕ ನುಡಿ ಆಡಿ, ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಮಕ್ಕಳಲ್ಲಿ ನೈತಿಕತೆ ಸಂಸ್ಕಾರ ಮೂಡಿಸುವ ದುಶ್ಚಟಗಳಿಂದ ದೂರಮಾಡುವ ಜಾಗೃತಿ ಮೂಡಿಸುವ ಉಪನ್ಯಾಸ ಕಾರ್ಯಕ್ರಮಗಳು ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿಜ್ಞೆ ಮೂಲಕ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯ ಇದಾಗಿದೆ ಎಂದರು.

ನಿಲಯಪಾಲಕ ಮಹೇಶ್, ಶಿಕ್ಷಕರಾದ ಶಿವರಾಜು, ತಾರಾ ಶೈಲಜಾ ಗ್ರಾಮ ಅಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಸೌಮ್ಯ ಪ್ರೇಮ ಮುಂತಾದವರಿದ್ದರು.

ಕಾರ್ಯಕ್ರಮದಲ್ಲಿ ಅತಿಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ನೀಡಲಾಯಿತು.