ದೃಢ ನಿರ್ಧಾರ, ಸಾಧಿಸುವ ಛಲವಿದ್ದರೆ ಯಶಸ್ಸು ಖಚಿತ

| Published : Mar 20 2024, 01:24 AM IST

ದೃಢ ನಿರ್ಧಾರ, ಸಾಧಿಸುವ ಛಲವಿದ್ದರೆ ಯಶಸ್ಸು ಖಚಿತ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರು ಅಡುಗೆ ಮನೆಗಷ್ಟೇ ಸೀಮಿತವಾಗಿಲ್ಲ. ಸವಾಲುಗಳನ್ನು ಮೆಟ್ಟಿ ಕೌಟುಂಬಿಕ ಹಾಗೂ ವೃತ್ತಿ ಬದುಕು ಎರಡನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.

ಹುಬ್ಬಳ್ಳಿ:

ದೃಢ ನಿರ್ಧಾರ, ಸಾಧಿಸುವ ಛಲ ಹಾಗೂ ಸ್ವ ಪ್ರಯತ್ನದಿಂದ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹು-ಧಾ ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹೇಳಿದರು.

ಇಲ್ಲಿನ ನಗರ ಸಾರಿಗೆ ಬಸ್ ಘಟಕದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಿಳೆಯರು ಅಡುಗೆ ಮನೆಗಷ್ಟೇ ಸೀಮಿತವಾಗಿಲ್ಲ. ಸವಾಲುಗಳನ್ನು ಮೆಟ್ಟಿ ಕೌಟುಂಬಿಕ ಹಾಗೂ ವೃತ್ತಿ ಬದುಕು ಎರಡನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಸಾರಿಗೆ ಸಂಸ್ಥೆಯಲ್ಲಿ ಹೆಚ್ಚೂ ಕಡಿಮೆ ಎಲ್ಲ ಹಂತದ ಹುದ್ದೆಗಳಲ್ಲಿ ಮಹಿಳೆಯರಿದ್ದಾರೆ. ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಐವರು ಡಿಪೋ ಮ್ಯಾನೇಜರ್‌ಗಳಲ್ಲಿ ಮೂವರು ಮಹಿಳೆಯರಿದ್ದಾರೆ. ನಿರ್ವಾಹಕರು, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿಗೆ ಕರ್ತವ್ಯ ನಿಯೋಜನೆಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಮಹಿಳಾ ಉದ್ಯಮಿ ಜಿ. ದೇವಕಿ ಯೋಗಾನಂದ ಹಾಗೂ ಚುಟುಕು ಸಾಹಿತಿ ಗದಗದ ಶೋಭಾ ಬಸವರಾಜ ಮೇಟಿ, ಭರತ ನಾಟ್ಯ ಕಲಾವಿದೆ ಪ್ರಣತಿ ಯಾದವಾಡ, ಸಂಸ್ಥೆಯ ಸಾಧಕ ಮಹಿಳಾ ನೌಕರರಾದ ವನಜಾಕ್ಷಿ ಬಣಕಾರ, ಮಂಜುಳಾ ಸಿಂದ್ಯೆ, ಸವಿತಾ ಮಂಕಣಿ, ಅಕ್ಕಮಹಾದೇವಿ ಹುಲ್ಲಂಬಿ, ಅನಸೂಯಾ ಮಡಿವಾಳರ ಹಾಗೂ ಕವಿತಾ ಬಳ್ಳಾರಿ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಪಿ.ವೈ. ನಾಯಕ‌, ಘಟಕ ವ್ಯವಸ್ಥಾಪಕ ವಿನಾಯಕ ಸಾಲಿಮಠ ಮತ್ತಿತರರು ಮಾತನಾಡಿದರು. ಘಟಕದ ಪ್ರತಿಭಾ ಚರಂತಿಮಠ, ಅನ್ನಪೂರ್ಣ, ಸುಮಿತ್ರಾ, ಸಾವಿತ್ರಿ ಸುಚಿತ್ರ, ವಿದ್ಯಾ ಸೇರಿದಂತೆ ಅಧಿಕಾರಿಗಳು, ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ಚಾಲಕರು, ನಿರ್ವಾಹಕರು, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿಗಳು ಇದ್ದರು.