ಉತ್ತಮ ಯೋಜನೆ ರೂಪಿಸಿಕೊಂಡರೆ ಪರೀಕ್ಷೆಯಲ್ಲಿ ಯಶಸ್ಸು

| Published : Feb 13 2024, 12:45 AM IST

ಉತ್ತಮ ಯೋಜನೆ ರೂಪಿಸಿಕೊಂಡರೆ ಪರೀಕ್ಷೆಯಲ್ಲಿ ಯಶಸ್ಸು
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಉತ್ತಮ ಯೋಜನೆ ರೂಪಿಸಿಕೊಂಡರೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಶಾಲಾ ಶಿಕ್ಷಣ ಪದವಿ ಪೂರ್ವ ಇಲಾಖೆಯ ಉಪನಿರ್ದೇಶಕ ಜಿ.ಎನ್. ಕುರ್ತಕೋಟಿ ಹೇಳಿದರು.

ಡಂಬಳ: ವಿದ್ಯಾರ್ಥಿಗಳು ಉತ್ತಮ ಯೋಜನೆ ರೂಪಿಸಿಕೊಂಡರೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಶಾಲಾ ಶಿಕ್ಷಣ ಪದವಿ ಪೂರ್ವ ಇಲಾಖೆಯ ಉಪನಿರ್ದೇಶಕ ಜಿ.ಎನ್. ಕುರ್ತಕೋಟಿ ಹೇಳಿದರು.ಇಲ್ಲಿಯ ಜಗದ್ಗುರು ತೋಂಟದಾರ್ಯ ಪದವಿ ಪೂರ್ವ ಮಹಾವಿದ್ಯಾಲಯಲ್ಲಿ ಇತ್ತೀಚೆಗೆ ಏರ್ಪಡಿಸಿದ ಇಂಗ್ಲಿಷ್ ವಿಷಯದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಇಂಗ್ಲಿಷ್ ಎನ್ನುವುದು ಕಬ್ಬಿಣದ ಕಡಲೆಯಲ್ಲ, ಅತ್ಯಂತ ಸರಳ ಭಾಷೆ. ಇಂಗ್ಲಿಷ್ ಹಾಗೂ ಅರ್ಥಶಾಸ್ತ್ರ ವಿಷಯಗಳ ಕಾರ್ಯಾಗಾರ ನಡೆಸುವುದು ಅಗತ್ಯ ಎಂದು ಅವರು ಹೇಳಿದರು.ಡಂಬಳದ ಜಗದ್ಗುರು ತೋಂಟದಾರ್ಯ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಬಿ. ಮಡಿವಾಳರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಬೇಕು ಎಂದು ಅವರು ಹೇಳಿದರು.ಜಿಲ್ಲಾ ಆಂಗ್ಲ ಭಾಷಾ ಉಪನ್ಯಾಸಕರ ವೇದಿಕೆ ಕಾರ್ಯದರ್ಶಿ ರಮಾಕಾಂತ್ ದೊಡ್ಡಮನಿ ಮಾತನಾಡಿ, ನಮ್ಮ ವೇದಿಕೆ ರಾಜ್ಯದಲ್ಲಿಯೇ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ, ಇದು ವಿದ್ಯಾರ್ಥಿಗಳಿಗೆ ಗುಣಾತ್ಮಕ ಹಾಗೂ ಪರಿಣಾಮಕಾರಿಯಾಗಿ ಕಲಿಸಲು ಸಹಕಾರಿಯಾಗಿದೆ ಎಂದರು.ಸಂಸ್ಥೆಯ ಸ್ಥಾನಿಕ ಆಡಳಿತಾಧಿಕಾರಿ ಜಿ.ವಿ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಇಂಗ್ಲಿಷ್ ವಿಷಯದ ಸಂಪನ್ಮೂಲ ವ್ಯಕ್ತಿಗಳಾಗಿ ಗದಗ ಕೆ.ವಿ.ಎಸ್.ಆರ್. ಕಾಲೇಜು ಉಪನ್ಯಾಸಕ ಶಶಿಧರ ಕುರಿ, ಗದಗ ಸರ್ಕಾರಿ ಪಪೂ ಕಾಲೇಜು ಉಪನ್ಯಾಸಕ ಶ್ರೀನಿವಾಸ ಬಡಿಗೇರ, ಲಕ್ಕುಂಡಿಯ ಬಾ.ಹೋ. ಪಾಟೀಲ ಪಪೂ ಕಾಲೇಜು ಉಪನ್ಯಾಸಕ ರಾಜು ಚವಡಿ, ಭಾಗವಹಿಸಿ, ಇಂಗ್ಲಿಷ್ ವಿಷಯದ ಸರಳತೆ ಹಾಗೂ ಪ್ರಶ್ನೆಪತ್ರಿಕೆ ಬಿಡಿಸುವ ಕಾರ್ಯಾಗಾರವನ್ನು ನಡೆಸಿಕೊಟ್ಟರು.ಪ್ರಾಚಾರ್ಯ ವಿ.ಎಂ. ಪಾಟೀಲ, ರಮಾಕಾಂತ್ ದೊಡ್ಡಮನಿ, ಹಿರೇವಡ್ಡಟ್ಟಿ ಸರ್ಕಾರಿ ಪಪೂ ಕಾಲೇಜು ಹಿರಿಯ ಉಪನ್ಯಾಸಕ ಹನುಮಂತಪ್ಪ ಪೂಜಾರ, ಪೇಠಾಲೂರ ಹಾಲಶಿವಾಯೋಗೇಶ್ವರ ಪಪೂ ಕಾಲೇಜು ಉಪನ್ಯಾಸಕಿ ಶ್ರೀದೇವಿ ಚಿಲಕಾಂತಮಠ, ಜ.ತೋ. ಅವಳಿ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಬಿ.ಕೆ. ನಿಂಬನಗೌಡರ, ಶಂಕರ ಕಲ್ಲಿಗನೂರ, ನಂದಕುಮಾರ ಹೂಗಾರ, ಮಂಜುನಾಥ ರಾಮಜಿ ಹಾಗೂ ಉಪನ್ಯಾಸಕಿ ಶ್ವೇತಾ ಮುಳಗುಂದ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ಪಿ.ಕೆ. ತಳವಾರ ಕಾರ್ಯಕ್ರಮ ನಿರೂಪಿಸಿದರು. ಶ್ವೇತಾ ಸಿ. ಮಂಜುನಾಥ ವಂದಿಸಿದರು.