ಸರ್ಕಾರಿ ಶಾಲೆಯಲ್ಲಿ ಓದಿದರೆ ಅಧಿಕಾರಿಗಳಾಗುತ್ತಾರೆ

| Published : Apr 05 2025, 12:49 AM IST

ಸರ್ಕಾರಿ ಶಾಲೆಯಲ್ಲಿ ಓದಿದರೆ ಅಧಿಕಾರಿಗಳಾಗುತ್ತಾರೆ
Share this Article
  • FB
  • TW
  • Linkdin
  • Email

ಸಾರಾಂಶ

ಖಾಸಗಿ ಶಾಲೆಗಳಲ್ಲಿ ಓದಲು ಲಕ್ಷಾಂತರ ರೂಪಾಯಿ ಹಣ ಖರ್ಚಾಗುತ್ತದೆ, ಆದರೆ ಸರ್ಕಾರಿ ಶಾಲೆಗಳಲ್ಲಿ ಎಲ್ಲವೂ ಉಚಿತ ಮಧ್ಯಾಹ್ನ ಬಿಸಿಯೂಟ,ಬಟ್ಟೆ, ಪುಸ್ತಕ,ಪ್ರತಿದಿನ ಮೊಟ್ಟೆ, ಬಾಳೆಹಣ್ಣು, ಹಾಗೂ ಮಕ್ಕಳಿಗೆ ಪಾಠ ಮಾಡಲು ಉನ್ನತ ಮಟ್ಟದ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಆದ್ದರಿಂದ ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಬೇಕು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸರ್ಕಾರಿ ಶಾಲೆಗಳಲ್ಲಿ ಓದಿದಂತಹ ಮಕ್ಕಳು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು, ರಾಜಕಾರಣಿಗಳಾಗಿದ್ದಾರೆ. ಆದರೆ ಖಾಸಗಿ ಶಾಲೆಗಳಲ್ಲಿ ಓದಿದಂತಹ ಮಕ್ಕಳು ಗುಮಾಸ್ತರಾಗಿದ್ದಾರೆ. ಆದ್ದರಿಂದ ಮಕ್ಕಳೇ ನಿರ್ಧರಿಸಿ ನೀವು ಅಧಿಕಾರಿಗಳಾಗಬೇಕಾ ಇಲ್ಲ ಗುಮಾಸ್ತರಾಗಬೇಕ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹೇಳಿದರು. ತಾಲೂಕಿನ ಕಾಮಸಮುದ್ರ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನವೀಕೃತ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಸಿಲುಕಿದ್ದಾರೆ.ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹವನ್ನು ಬಿಟ್ಟು ಸರ್ಕಾರಿ ಶಾಲೆಗಳಿಗೆ ದಾಖಲಿಸುವಂತೆ ಮನವಿ ಮಾಡಿದರು.

ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯ ಖಾಸಗಿ ಶಾಲೆಗಳಲ್ಲಿ ಓದಲು ಲಕ್ಷಾಂತರ ರೂಪಾಯಿ ಹಣ ಖರ್ಚಾಗುತ್ತದೆ, ಆದರೆ ಸರ್ಕಾರಿ ಶಾಲೆಗಳಲ್ಲಿ ಎಲ್ಲವೂ ಉಚಿತ ಮಧ್ಯಾಹ್ನ ಬಿಸಿಯೂಟ,ಬಟ್ಟೆ, ಪುಸ್ತಕ,ಪ್ರತಿದಿನ ಮೊಟ್ಟೆ, ಬಾಳೆಹಣ್ಣು, ಹಾಗೂ ಮಕ್ಕಳಿಗೆ ಪಾಠ ಮಾಡಲು ಉನ್ನತ ಮಟ್ಟದ ಶಿಕ್ಷಕರನ್ನು ನೀಡುತ್ತೇವೆ, ಅದಕ್ಕೆ ವಿದ್ಯಾರ್ಥಿಗಳು ಸಹ ತಮ್ಮ ಅಕ್ಕಪಕ್ಕದ ಮನೆಗಳಲ್ಲಿ ಖಾಸಗಿ ಶಾಲೆಗಳಿಗೆ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ತಿಳಿಹೇಳಿ ಸರ್ಕಾರಿ ಶಾಲೆಗೆ ದಾಖಲಾಗುವಂತೆ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾದರಿ ಶಾಲೆಗಳನ್ನು ತೆರೆಯಲು ಸರ್ಕಾರ ಸಿದ್ದವಾಗಿದೆ,ಗ್ರಾಪಂಃ ಸ್ಥಳ ನೀಡಿದರೆ 3ಕೋಟಿ ವೆಚ್ಚದಲ್ಲಿ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿರುವ ಮಾದರಿ ಸರ್ಕಾರಿ ಶಾಲೆಯನ್ನು ತೆರೆಯಲಾಗುವುದು, ಆಗ ಯಾವ ಮಗುವೂ ಖಾಸಗಿ ಶಾಲೆ ಕಡೆ ಮುಖ ಮಾಡುವುದಿಲ್ಲವೆಂದರು.

ಈ ವೇಳೆ ಅಧ್ಯಕ್ಷರು ಗ್ರಾ.ಪಂ ಆದಿನಾರಾಯಣ, ಪುರಸಭೆ ಅಧ್ಯಕ್ಷ ಗೋವಿಂದ,ಮಾಜಿ ತಾ.ಪಂ.ಸದಸ್ಯ ಜೆಸಿಬಿ ನಾರಾಯಣಪ್ಪ,ಪುರಸಭೆ ಸದಸ್ಯ ವೆಂಕಟೇಶ್, ಐನೋರಹೊಸಹಳ್ಳಿ ಗ್ರಾ.ಪಂ ಅಧ್ಯಕ್ಷ ಮಂಜುನಾಥ, ದೋಣಿಮಡಗು ಗ್ರಾ.ಪಂ ಅಧ್ಯಕ್ಷೆ ಮಂಜುಳ ಎಸ್.ಕೆ.ಜಯಣ್ಣ,ಕೇತಗಾನಹಳ್ಳಿ ಮಂಜುಳ ಕೆ.ಜಿ.ಶ್ರೀನಿವಾಸ,.ತೊಪ್ಪನಹಳ್ಳಿ ಅಧ್ಯಕ್ಷರು ಗ್ರಾ.ಪಂ ಪ್ರಭಾಕರ ರೆಡ್ಡಿ, ಕೆ.ಟಿ.ರಂಗನಾಥನಾಯ್ಡು,ಬಲಮಂದೆ ಅಧ್ಯಕ್ಷೆ ಸರಸ್ವತಿ ರಾಮಶೆಟ್ಟಿ, ಪಿ.ಡಿ.ಓ ವಾಣಿ.ಸಿ.ಎಂ, ಶಿಕ್ಷಕರ ಸಂಘದ ಅಧ್ಯಕ್ಷ ಆಂಜನೇಯಗೌಡ , ಸಮನ್ವಯ ಶಿಕ್ಷಣಾಧಿಕಾರಿ ನಾರಾಯಣಸ್ವಾಮಿ,ಉಪಾಧ್ಯಕ್ಷೆ ಗುಲ್ವಾಜ್ ಮುನೀರ್ ಮುಖ್ಯೋಪಾಧ್ಯಾಯ ಕೆ ಜಿ ಶ್ರೀನಿವಾಸ್,ಮುನಿನಾರಾಯಣ,