ಸಾರಾಂಶ
ನೀವು ಹಾಗೇ ಸುಮ್ಮನೆ ಬಂದು ಹೋಗಬೇಡ್ರಿ, ನಮಗೊಂದು ಏನಾದ್ರೂ ಪರಿಹಾರ ಕೊಡಿಸುವುದಿದ್ರ ಮಾತಾಡಿಸ್ರಿ, ಯಾಕಂದ್ರ ನಿಮ್ಮಂತರವು ನಮ್ಗೆ ಸಾಕಷ್ಟು ಜನ ಅಧಿಕಾರಿಗಳು ಬಂದು ಹೋಗ್ಯಾರಿ. ಆದ್ರ ಏನೂ ಪ್ರಯೋಜನವಾಗಿಲ್ಲ. ನಾವು ಈಗಾಗಲೇ ನೀರಲ್ಲಿ ಮುಳಗಿ ಹೋಗಿ ಬಿಟ್ಟಿವ್ರಿ. ನಮ್ಮ ಬದುಕು ಹೇಗೆ ಕಟ್ಟಿಕೊಳ್ಳಬೇಕು ಎಂಬುವುದು ನಮ್ಗ ಗೊತೈತ್ರಿ. ನೀವು ಏನಾದ್ರೂ ಮಾಡುವದಿದ್ರ ಹೇಳ್ರಿ. ಇಲ್ಲದಿದ್ರ ಹೋಗಿಬಿಡ್ರಿ ಎಂದು ಕಡ್ಡಿ ಮುರಿದಂತೆ ನಿರಾಶ್ರಿತರು ಅಧಿಕಾರಿಗಳಿಗೆ ನೇರವಾಗಿ ಮಾತನಾಡಿದಾಗ ಅಧಿಕಾರಿಗಳಿಗೆ ಏನೂ ತೋಚದಂತಾಯಿತು.
ಕನ್ನಡಪ್ರಭ ವಾರ್ತೆ ಮುಧೋಳ
ನೀವು ಹಾಗೇ ಸುಮ್ಮನೆ ಬಂದು ಹೋಗಬೇಡ್ರಿ, ನಮಗೊಂದು ಏನಾದ್ರೂ ಪರಿಹಾರ ಕೊಡಿಸುವುದಿದ್ರ ಮಾತಾಡಿಸ್ರಿ, ಯಾಕಂದ್ರ ನಿಮ್ಮಂತರವು ನಮ್ಗೆ ಸಾಕಷ್ಟು ಜನ ಅಧಿಕಾರಿಗಳು ಬಂದು ಹೋಗ್ಯಾರಿ. ಆದ್ರ ಏನೂ ಪ್ರಯೋಜನವಾಗಿಲ್ಲ. ನಾವು ಈಗಾಗಲೇ ನೀರಲ್ಲಿ ಮುಳಗಿ ಹೋಗಿ ಬಿಟ್ಟಿವ್ರಿ. ನಮ್ಮ ಬದುಕು ಹೇಗೆ ಕಟ್ಟಿಕೊಳ್ಳಬೇಕು ಎಂಬುವುದು ನಮ್ಗ ಗೊತೈತ್ರಿ. ನೀವು ಏನಾದ್ರೂ ಮಾಡುವದಿದ್ರ ಹೇಳ್ರಿ. ಇಲ್ಲದಿದ್ರ ಹೋಗಿಬಿಡ್ರಿ ಎಂದು ಕಡ್ಡಿ ಮುರಿದಂತೆ ನಿರಾಶ್ರಿತರು ಅಧಿಕಾರಿಗಳಿಗೆ ನೇರವಾಗಿ ಮಾತನಾಡಿದಾಗ ಅಧಿಕಾರಿಗಳಿಗೆ ಏನೂ ತೋಚದಂತಾಯಿತು.ಮಂಗಳವಾರ ನಗರದ ಕುಂಬಾರ ಗಲ್ಲಿಯ ಪ್ರವಾಹ ಪೀಡಿತ ಪ್ರದೇಶಕ್ಕೆ ಕಂದಾಯ ಇಲಾಖೆಯ ಹೆಚ್ಚುವರಿ ಆಯುಕ್ತೆ ರಶ್ಮಿ ಮಹೇಶ ಹಾಗೂ ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರು ಭೇಟಿ ನೀಡಿದಾಗ ನಿರಾಶ್ರಿತರು ತಮ್ಮ ಆಕ್ರೋಶವನ್ನು ಅಧಿಕಾರಿಗಳ ಮುಂದೆ ತೋಡಿಕೊಂಡು ಕಣ್ಣೀರು ಹಾಕಿದರು.
ಅಧಿಕಾರಿಗಳು ನಿರಾಶ್ರಿತರನ್ನು ಮಾತನಾಡಿಸಿ ತಮ್ಮ ನೋವು ನಮ್ಗೆ ಅರ್ಥವಾಗಿದೆ. ಈ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ ತಮಗೊಂದು ಶಾಶ್ವತ ಸೂರು ಒದಗಿಸುವ ಭರವಸೆ ನೀಡಿದರು. ತಹಸೀಲ್ದಾರ್ ವಿನೋದ ಹತ್ತಳ್ಳಿ, ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ, ವಾರ್ಡ್ ಸದಸ್ಯರು ಹಾಗೂ ಕಂದಾಯ ಮತ್ತು ನಗರಸಭೆ ಸಿಬ್ಬಂದಿಯವರು ಉಪಸ್ಥಿತರಿದ್ದರು.