ಸಾರಾಂಶ
ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ನೂತನ ಜನಸಂಪರ್ಕ ಕಚೇರಿ ನಗರದ ಜಿಲ್ಲಾಡಳಿತ ಭವನದಲ್ಲಿ ಭಾನುವಾರ ಉದ್ಘಾಟನೆಗೊಂಡಿತು.
- ಜಿಲ್ಲಾಡಳಿತ ಭವನದಲ್ಲಿ ನೂತನ ಕಚೇರಿ ಉದ್ಘಾಟಿಸಿ ಸಂಸದೆ ಡಾ.ಪ್ರಭಾ ಮನವಿ
- ಸಂವಿಧಾನ ಪುಸ್ತಕ, ಶ್ರೀ ವಿಘ್ನೇಶ್ವರ ಸೇರಿದಂತೆ ಧಾರ್ಮಿಕ ಆಚರಣೆಗಳೊಂದಿಗೆ ಪೂಜೆ- - - ಕನ್ನಡಪ್ರಭ ವಾರ್ತೆ, ದಾವಣಗೆರೆದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ನೂತನ ಜನಸಂಪರ್ಕ ಕಚೇರಿ ನಗರದ ಜಿಲ್ಲಾಡಳಿತ ಭವನದಲ್ಲಿ ಭಾನುವಾರ ಉದ್ಘಾಟನೆಗೊಂಡಿತು.
ನಗರದ ಜಿಲ್ಲಾಡಳಿತ ಭವನದ ಕೊಠಡಿ ಸಂಖ್ಯೆ-21 ಮತ್ತು 32ರಲ್ಲಿ ಬೆಳಗ್ಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಕ್ಕಳಾದ ಸಮರ್ಥ ಎಂ. ಶಾಮನೂರು, ಶ್ರೇಷ್ಠ ಎಂ. ಶಾಮನೂರು ಅವರೊಂದಿಗೆ ಸಂವಿಧಾನ ಪುಸ್ತಕ, ಶ್ರೀ ವಿಘ್ನೇಶ್ವರ ಸೇರಿದಂತೆ ಧಾರ್ಮಿಕ ಆಚರಣೆಗಳೊಂದಿಗೆ ಪೂಜೆ ಸಲ್ಲಿಸಿ, ಕಚೇರಿಗೆ ಉದ್ಘಾಟಿಸಿದರು.ಸಂಸದೆ ಡಾ.ಪ್ರಭಾ ಮಾತನಾಡಿ, ದಾವಣಗೆರೆ ಲೋಕಸಭಾ ಕ್ಷೇತ್ರದ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು, ಅಹವಾಲುಗಳನ್ನು ಸಲ್ಲಿಸಲು ಸಂಸದರ ಜನಸಂಪರ್ಕ ಕಚೇರಿಗೆ ಬರಬಹುದು. ಜನರ ಸಮಸ್ಯೆ, ಅಹವಾಲುಗಳಿಗೆ ತಕ್ಷಣಕ್ಕೆ ಸ್ಪಂದಿಸುವ ಸದುದ್ದೇಶದಿಂದ ಜಿಲ್ಲಾಡಳಿತ ಭವನದಲ್ಲೇ ಜನಸಂಪರ್ಕ ಕಚೇರಿ ಆರಂಭಿಸಿದ್ದೇವೆ ಎಂದರು.
ಜಿಲ್ಲಾಧಿಕಾರಿ ಕಚೇರಿ ಸಮುಚ್ಛಯದಲ್ಲೇ ಬಹುತೇಕ ಎಲ್ಲ ಇಲಾಖೆ ಕಚೇರಿಗಳು, ಅಧಿಕಾರಿಗಳು ಲಭ್ಯ ಇರುತ್ತಾರೆ. ಸಾರ್ವಜನಿಕರು ತಮ್ಮ ದೂರು, ಅಹವಾಲು ಸಲ್ಲಿಸಲು ಬಂದಾಗ ತ್ವರಿತವಾಗಿ ಸ್ಪಂದಿಸಲು ತಾವು ಸಹ ಇದೇ ಕಚೇರಿಯಲ್ಲಿ ಲಭ್ಯವಿರುತ್ತೇನೆ. ನಮ್ಮ ಸಿಬ್ಬಂದಿ ಸಹ ಸದಾ ಹಾಜರಿರುತ್ತಾರೆ. ಸಾರ್ವಜನಿಕರು ತಮ್ಮ ಅಹವಾಲು, ದೂರುಗಳನ್ನು ಇಲ್ಲಿಗೆ ತಲುಪಿಸಿ, ಪರಿಹಾರ ಕಂಡುಕೊಳ್ಳುವಂತೆ ಅವರು ಮನವಿ ಮಾಡಿದರು.ಈಗಾಗಲೇ ದಾವಣಗೆರೆ ಜಿಲ್ಲೆ ಹಾಗೂ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇವೆ. ಬಹು ವರ್ಷಗಳ ಕಾಲದಿಂದ ಬಗೆಹರಿಯದ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಸಂಸದೆ ತಿಳಿಸಿದರು.
ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್, ಕಾಂಗ್ರೆಸ್ ಮುಖಂಡರಾದ ಹಿರಿಯ ವಕೀಲ ಪ್ರಕಾಶ ಪಾಟೀಲ್, ಅಯೂಬ್ ಪೈಲ್ವಾನ್, ಶ್ರೀನಿವಾಸ ನಂದಿಗಾವಿ, ಪಾಲಿಕೆ ಸದಸ್ಯರಾದ ಜಿ.ಎಸ್. ಮಂಜುನಾಥ ಗಡಿಗುಡಾಳ, ಕೆ.ಚಮನ್ ಸಾಬ್, ಎಲ್.ಡಿ. ಗೋಣೆಪ್ಪ, ಕೆ.ಜಿ.ಶಿವಕುಮಾರ, ಚಂದ್ರು ಡೋಲಿ, ಮಟ್ಟಿಕಲ್ಲು ವೀರಭದ್ರಸ್ವಾಮಿ, ಪಿ.ಸಿ.ರಾಮನಾಥ, ಲಿಂಗರಾಜ, ಶುಭಮಂಗಳ, ಕವಿತಾ ಇತರರು ಇದ್ದರು.- - - -1ಕೆಡಿವಿಜಿ4, 5:
ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ನೂತನ ಜನಸಂಪರ್ಕ ಕಚೇರಿ ಉದ್ಘಾಟನೆಗೆ ಮುನ್ನ ಮಕ್ಕಳಾದ ಸಮರ್ಥ, ಶ್ರೇಷ್ಠ ಜೊತೆಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪೂಜೆ ಸಲ್ಲಿಸಿದರು.