ಗೆಲ್ಲಿಸಿದರೇ ಕಾರ್ಮಿಕನಂತೆ ಕಾರ್ಯ

| Published : Apr 11 2024, 12:45 AM IST

ಗೆಲ್ಲಿಸಿದರೇ ಕಾರ್ಮಿಕನಂತೆ ಕಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಮತದಾರರು ನನ್ನನ್ನು ಗೆಲ್ಲಿಸಿದರೇ ಬೆಳಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ಕಾರ್ಮಿಕನಂತೆ ಕಾರ್ಯ ಮಾಡುತ್ತೇನೆ ಎಂದು ಬೆಳಗಾವಿ ಲೋಕಸಭೆ ಪ್ರಜಾಕೀಯ ಅಭ್ಯರ್ಥಿ ಪ್ರೇಮ್ ಚೌಗಲೆ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿಲೋಕಸಭೆ ಚನಾವಣೆಯಲ್ಲಿ ಮತದಾರರು ನನ್ನನ್ನು ಗೆಲ್ಲಿಸಿದರೇ ಬೆಳಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ಕಾರ್ಮಿಕನಂತೆ ಕಾರ್ಯ ಮಾಡುತ್ತೇನೆ ಎಂದು ಬೆಳಗಾವಿ ಲೋಕಸಭೆ ಪ್ರಜಾಕೀಯ ಅಭ್ಯರ್ಥಿ ಪ್ರೇಮ್ ಚೌಗಲೆ ಭರವಸೆ ನೀಡಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಕೀಯ ಪಕ್ಷದಿಂದ ಆಯ್ಕೆಯಾಗಿ ಬೇರೆ ಪಕ್ಷಕ್ಕೆ ಹೋದರೆ ಆಗಲೂ ನನ್ನ ರಾಜೀನಾಮೆ ಪಡೆಯುವ ಹಕ್ಕು ಜನರಿಗಿದೆ. ಒಂದು ವೇಳೆ ನಾನು ಅಧಿಕಾರದಿಂದ ಕೆಳಗಿಳಿಯದಿದ್ದರೇ ಪಕ್ಷದ ಮುಖಂಡರು, ಅಧ್ಯಕ್ಷರು ನಮ್ಮ ಮನೆಗೆ ಬಂದು ನನ್ನನ್ನು ಕೆಳಗಿಳಿಸುತ್ತಾರೆ. ಈ ರೀತಿ ಯಾವುದೇ ಪಕ್ಷದಲ್ಲಿ ನೋಡಲು ಸಾಧ್ಯವಿಲ್ಲ. ಯಾರಿಗೂ ದುಡ್ಡು ಕೊಡುವಂತಿಲ್ಲ, ಸುಳ್ಳು ಭರವಸೆ ನೀಡುವಂತಿಲ್ಲ. 5 ವರ್ಷಕ್ಕೆ ಒಬ್ಬ ಎಂಪಿಗೆ ಬರುವ ₹25 ಕೋಟಿ ಅನುದಾನದಲ್ಲಿ ಬೇಕಾದಷ್ಟು ಅಭಿವೃದ್ಧಿ ಮಾಡಬಹುದು. ಲೆಕ್ಕ ಕೊಡುವ ಎಂಪಿ ಬೇಕಾ? ಇಲ್ಲಾ ವೈಟ್ ಶರ್ಟ್ ಹಾಕಿಕೊಂಡು ಲೆಕ್ಕ ಮುಚ್ಚಿಡುವ ಎಂಪಿ‌ ಬೇಕಾ? ಎಂಬುವುದನ್ನು ಜನರೇ ನಿರ್ಧರಿಸಲಿ ಎಂದರು.

6 ತಿಂಗಳ ಬಳಿಕ ಮತ್ತೆ ಪೋಲಿಂಗ್ ಆಗುತ್ತದೆ. ಆಗ ಶೇ.50ಕ್ಕಿಂತ ಕಡಿಮೆ ಮತಗಳು ಬಂದರೆ ಸಂಸದರಾಗಿ ಮುಂದುವರಿಯಲು ಒಮ್ಮೆ ಮಾತ್ರ ಅವಕಾಶ ಇದೆ. 2ನೇ ಬಾರಿಯೂ ಶೇ.50ಕ್ಕಿಂತ ಕಡಿಮೆ ಮತಗಳು ಬಂದರೆ ಸಂಸತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಯಾವುದೇ ವಾರ್ಡ್‌ಗಳಲ್ಲಿ ಸ್ಥಳೀಯರ ಅನುಮತಿ ಪಡೆದು ಕಾಮಗಾರಿ ಆರಂಭಿಸಲಾಗುತ್ತದೆ ಎಂದು ತಿಳಿಸಿದರು.ಮತದಾನ ನಿಮ್ಮ ಮನೆ ಮಗಳಿದ್ದಂತೆ ಅದನ್ನು ಮಾರಾಟ ಮಾಡಿಕೊಳ್ಳಬೇಡಿ. ಯಾವ ಪಕ್ಷ, ಅಭ್ಯರ್ಥಿಗೆ ಮತ ಹಾಕಿದರೆ ದೇಶ, ರಾಜ್ಯ ಮತ್ತು ನಮ್ಮ ಸ್ಥಿತಿ ಸುಧಾರಿಸುತ್ತದೆಯೋ, ಅವರಿಗೆ ನಿಮ್ಮ ಅಮೂಲ್ಯವಾದ ಮತ ಹಾಕಬೇಕು. ವಿಚಾರ ಮಾಡಿ ವೋಟ್ ಹಾಕದಿದ್ದರೆ 5 ವರ್ಷ ಸಂಕಷ್ಟ ಅನುಭವಿಸಬೇಕಾಗುತ್ತದೆ.

ಪ್ರೇಮ್ ಚೌಗಲೆ, ಬೆಳಗಾವಿ ಲೋಕಸಭೆ ಪ್ರಜಾಕೀಯ ಅಭ್ಯರ್ಥಿ.