ಸಾರಾಂಶ
ಪ್ರತಿವರ್ಷವೂ ಶ್ರದ್ಧಾ, ಭಕ್ತಿಯಿಂದ ಶ್ರೀ ಗಣೇಶನನ್ನು ಪೂಜಿಸಿದರೆ ಎಲ್ಲಾ ಸಮಸ್ಯೆಗಳಿಂದ ನಾವು ಮುಕ್ತಿ ಪಡೆಯಬಹುದಾಗಿದೆ. ಪ್ರತಿಯೊಂದು ಹಂತದಲ್ಲೂ ದೇವರ ಮೊರೆಹೋಗುವುದು ಸ್ವಾಭಾವಿಕ. ವಿಘ್ನವಿನಾಶಕ ಗಣೇಶನಿಂದ ಮಾತ್ರ ಸಂಕಷ್ಟಗಳ ಪರಿಹಾರ ಸಾಧ್ಯ. ನಾವೆಲ್ಲರೂ ಭಕ್ತಿಶ್ರದ್ಧೆಯಿಂದ ಗಣೇಶನ ಪೂಜೆಯನ್ನು ಮಾಡೋಣ. ಉತ್ತಮ ಬದುಕನ್ನು ಕಂಡುಕೊಳ್ಳೋಣವೆಂದು ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ. ಅನಂತರಾಮ್‌ಗೌತಮ್ ತಿಳಿಸಿದರು.
ಕನ್ನಡಪ್ರಭವಾರ್ತೆ ಚಳ್ಳಕೆರೆ
ಪ್ರತಿವರ್ಷವೂ ಶ್ರದ್ಧಾ, ಭಕ್ತಿಯಿಂದ ಶ್ರೀ ಗಣೇಶನನ್ನು ಪೂಜಿಸಿದರೆ ಎಲ್ಲಾ ಸಮಸ್ಯೆಗಳಿಂದ ನಾವು ಮುಕ್ತಿ ಪಡೆಯಬಹುದಾಗಿದೆ. ಪ್ರತಿಯೊಂದು ಹಂತದಲ್ಲೂ ದೇವರ ಮೊರೆಹೋಗುವುದು ಸ್ವಾಭಾವಿಕ. ವಿಘ್ನವಿನಾಶಕ ಗಣೇಶನಿಂದ ಮಾತ್ರ ಸಂಕಷ್ಟಗಳ ಪರಿಹಾರ ಸಾಧ್ಯ. ನಾವೆಲ್ಲರೂ ಭಕ್ತಿಶ್ರದ್ಧೆಯಿಂದ ಗಣೇಶನ ಪೂಜೆಯನ್ನು ಮಾಡೋಣ. ಉತ್ತಮ ಬದುಕನ್ನು ಕಂಡುಕೊಳ್ಳೋಣವೆಂದು ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ. ಅನಂತರಾಮ್‌ಗೌತಮ್ ತಿಳಿಸಿದರು.ಅವರು, ಗಾಯಿತ್ರಿ ಕಲ್ಯಾಣ ಮಂಟಪದ ಮಹಿಳಾ ಸಾಂಸ್ಕೃತಿಕ ಭವನದಲ್ಲಿ ತಾಲೂಕು ಬ್ರಾಹ್ಮಣ ಸಂಘ ಹಾಗೂ ವಿಪ್ರ ಗಾಯಿತ್ರಿ ಮಹಿಳಾ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಣೇಶನ ವಿಸರ್ಜನಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತಿವರ್ಷವೂ ಗಣೇಶನ ಹಬ್ಬ ವೈಭವದಿಂದ ನಡೆಯುತ್ತಾ ಬಂದಿದೆ. ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಈ ಹಬ್ಬವನ್ನು ಸಾಮೂಹಿಕವಾಗಿ ಎಲ್ಲರೂ ಆಚರಿಸುತ್ತಾರೆ. ಗಣೇಶನ ಪೂಜೆಯಿಂದ ಎಲ್ಲರಿಗೂ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ನಾವೆಲ್ಲರೂ ಪ್ರತಿವರ್ಷ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಗಣೇಶನ ನಾಮಸ್ಮರಣೆಯಿಂದ ನಮ್ಮೆಲ್ಲರ ಬದುಕು ಪಾವನವಾಗಲಿದೆ ಎಂದರು.ಪೂಜಾ ಕಾರ್ಯಕ್ರಮದಲ್ಲಿ ವಿಪ್ರಗಾಯಿತ್ರಿ ಮಹಿಳಾ ಮಂಡಳಿ ಅಧ್ಯಕ್ಷ ಸೀತಾಲಕ್ಷ್ಮೀ ವಾದಿರಾಜ್, ಕಾರ್ಯದರ್ಶಿ ಮಧುಮತಿ ವಾಸುದೇವರಾವ್, ಜಯಲಕ್ಷ್ಮೀ ಸುಬ್ಬಣ್ಣ, ಲಲಿತಧನ್ಯ, ಶೈಲಜಾ ಗೋಪಿನಾಥ, ಭಾರ್ಗವಿ ಸತ್ಯನಾರಾಯಣ, ಪಂಕಜ ಗೌತಮ್, ಗೀತಾ, ಕಾರ್ಯದರ್ಶಿ ಎಂ.ಸತ್ಯನಾರಾಯಣರಾವ್, ನಿರ್ದೇಶಕರಾದ ಜೆ.ಎಸ್. ಶ್ರೀನಾಥಶರ್ಮ, ಎಸ್.ವೈ. ಮುರುಳಿಕೃಷ್ಣ, ಸಿ.ಎಸ್. ಗೋಪಿನಾಥ, ಜಿ. ಕೃಷ್ಣಮೂರ್ತಿ, ಪ್ರಹ್ಲಾದ್ ಮುಂತಾದವರು ಭಾಗವಹಿಸಿದ್ದರು.