ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಪಟ್ಟಣದ ಮೈಬೂಬ್‌ ನಗರದಲ್ಲಿ ಪವಿತ್ರ ರಂಜಾನ್‌ ಹಬ್ಬದ ಪ್ರಯುಕ್ತ ಉಪವಾಸ ನಿರತ ಮುಸ್ಲಿಂ ಬಾಂಧವರಿಗಾಗಿ ಅಸ್ಕಿ ಫೌಂಡೇಶನ್‌ ವತಿಯಿಂದ ಇಪ್ತಿಯಾರ್‌ ಕೂಟವನ್ನು ಆಯೋಜಿಸಲಾಗಿದೆ ಎಂದು ಅಸ್ಕಿ ಫೌಂಡೇಶನ್‌ ಮುಖ್ಯಸ್ಥ ಹಾಗೂ ಕಾಂಗ್ರೆಸ್‌ ಮುಖಂಡ ಸಿ.ಬಿ.ಅಸ್ಕಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಸಮಾನತೆ ಮತ್ತು ಪರಸ್ಪರ ಗೌರವ, ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳಿಂದ ರಂಜಾನ್‌ ಪ್ರಯುಕ್ತ ಇಪ್ತಯಾರ್‌ಕೂಟವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಅದರಂತೆ ಆರೋಗ್ಯ ಶಿಬಿರ, ರಕ್ತಾದಾನ ಶಿಬಿರ, ನೇತ್ರ ಉಚಿತ ತಪಾಸಣೆ ಹೀಗೆ ಅನೇಕ ಸಾಮಾಜಿಕ ಕಳಕಳಿ ಜವಾಬ್ದಾರಿಯಿಂದ ಅಸ್ಕಿ ಫೌಂಡೇಶನ್‌ ಮುನ್ನಡೆದುಕೊಂಡು ಬರುತ್ತಿದೆ ಎಂದರು.

ಮೊಲ್ಲಾನಾ ಅಲ್ಲಾಭಕ್ಷ್‌ ಖಾಜಿ ಮಾತನಾಡಿ, ಇಫ್ತಾರ್ ಕೇವಲ ಊಟವಲ್ಲ, ಇದು ಸಮಾಜದ ಬಡವರು, ನಿರ್ಗತಿಕರು ಮತ್ತು ಹಸಿದವರ ಕಷ್ಟವನ್ನು ಅರ್ಥಮಾಡಿಕೊಳ್ಳುವ ಹಾಗೂ ಎಲ್ಲರನ್ನೂ ಒಗ್ಗೂಡಿಸುವ ಸಂದರ್ಭವಾಗಿದೆ. ಇಫ್ತಾರ್ ಕೂಟಗಳು ಕೇವಲ ಮುಸ್ಲಿಮರಲ್ಲದೆ, ಇತರ ಧರ್ಮದವರನ್ನೂ ಆಹ್ವಾನಿಸುವ ಮೂಲಕ ಕೋಮು ಸೌಹಾರ್ದತೆ ಮತ್ತು ಅಂತರ-ಧರ್ಮೀಯ ಸಂಭಾಷಣೆಯನ್ನು ಉತ್ತೇಜಿಸುತ್ತವೆ. ಇಂತಹ ಪವೀತ್ರ ರಂಜಾನ್‌ ಹಬ್ಬದ ಪ್ರಯುಕ್ತ ಎಲ್ಲಡೆ ಇಪ್ತರಾಕೂಟ ಆಯೋಜಿಸಿ ಸಮಾನತೆ ಸೌಹಾರ್ದತೆ ಸಾರುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಿ.ಬಿ.ಅಸ್ಕಿ ಅವರ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದರು.ಪುರಸಭೆ ಮಾಜಿ ಅಧ್ಯಕ್ಷ ಮೈಬೂಬ್‌ ಗೊಳಸಂಗಿ, ಗೋವಾ ಕನ್ನಡಿಗರ ಹೋರಾಟ ಸಮಿತಿ ಅಧ್ಯಕ್ಷ ಸಿದ್ದಣ್ಣ ಮೇಟಿ, ಕಸಾಪ ತಾಲೂಕು ಅಧ್ಯಕ್ಷ ಕಾಮರಾಜ ಬಿರಾದಾರ, ನಾನಾಗೌಡ ಪಾಟೀಲ, ಹುಸೇನ್‌ಮುಲ್ಲಾ ಸಂಗಪ್ಪ ಮೇಲಿಮನಿ, ಮಹಮ್ಮದ್‌ರಫೀಕ ಶಿರೋಳ ಸೇರಿದಂತೆ ಅನೇಕ ರು ಇದ್ದರು.ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ, ಬಡವರಿಗೆ, ಹಸಿದವರಿಗೆ ಸಹಾಯ ಮಾಡುವ ಮೂಲಕ, ಅವರ ನೋವು ಅರಿಯುವ ಪ್ರಯತ್ನ ರಂಜಾನ್ ಹಬ್ಬದ ಉಪವಾಸದ ಮಹತ್ವ ಸಮಾಜದಲ್ಲಿ ಹಸಿದವರಿಗೆ, ಬಡವರಿಗೆ ಸಹಾಯ ಮಾಡುವ ಮೂಲಕ ಅವರನ್ನು ಬಡತನದಿಂದ ಮೇಲೆತ್ತುವ ಕಾರ್ಯ ಮಾಡಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ. ಇದಕ್ಕೆ ಯಾವುದೇ ಲೇಪನ ಬೆರೆಸುವ ಅಗತ್ಯವಿಲ್ಲ.

-ಸಿ.ಬಿ.ಅಸ್ಕಿ,


ಅಸ್ಕಿ ಫೌಂಡೇಶನ್‌ ಮುಖ್ಯಸ್ಥ ಹಾಗೂ ಕಾಂಗ್ರೆಸ್‌ ಮುಖಂಡರು.