ರಾಜ್ಯಕ್ಕೆ ಯೋಜನೆ ಘೋಷಿಸದೇ ಕಡೆಗಣನೆ

| Published : Feb 02 2025, 01:02 AM IST

ಸಾರಾಂಶ

ಕೇಂದ್ರ ಅರ್ಥ ಸಚಿವೆ ನಿರ್ಮಲ ಸೀತಾರಾಮನ್‌ ಮಂಡಿಸಿರುವ ಕೇಂದ್ರದ ಬಜೆಟ್‌ ಸಂಪೂರ್ಣ ನಿರಾಶಾದಾಯಕವಾಗಿದೆ. ಕರ್ನಾಟಕಕ್ಕೆಂದೇ ಯಾವುದೇ ಯೋಜನೆ, ಅನುದಾನವನ್ನೂ ಘೋಷಿಸದೇ ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದ್ದಾರೆ.

- ದಶಕದಿಂದ ಕೇಂದ್ರ ಸರ್ಕಾರ ಉತ್ತಮ ಬಜೆಟ್ ನೀಡಿಲ್ಲ: ಸಚಿವ ಆರೋಪ

- - - ದಾವಣಗೆರೆ: ಕೇಂದ್ರ ಅರ್ಥ ಸಚಿವೆ ನಿರ್ಮಲ ಸೀತಾರಾಮನ್‌ ಮಂಡಿಸಿರುವ ಕೇಂದ್ರದ ಬಜೆಟ್‌ ಸಂಪೂರ್ಣ ನಿರಾಶಾದಾಯಕವಾಗಿದೆ. ಕರ್ನಾಟಕಕ್ಕೆಂದೇ ಯಾವುದೇ ಯೋಜನೆ, ಅನುದಾನವನ್ನೂ ಘೋಷಿಸದೇ ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದ್ದಾರೆ.

ಕೇಂದ್ರ ಬಿಜೆಪಿ ಸರ್ಕಾರದ 2025- 2026ನೇ ಸಾಲಿನ ಬಜೆಟ್ ಅತ್ಯಂತ ನಿರಾಶಾದಾಯಕ ಆಗಿದೆ. ಬಜೆಟ್‌ನಲ್ಲಿ ರಾಜ್ಯಕ್ಕೆ ತೀವ್ರ ಅನ್ಯಾಯ ಮಾಡಲಾಗಿದೆ. ರಾಜ್ಯದ ರೈತರಿಗೆ ಅನುಕೂಲವಾಗುವ ಯಾವುದೇ ಯೋಜನೆಗಳನ್ನು ಘೋಷಣೆಮಾಡಿಲ್ಲ. ನಿರುದ್ಯೋಗ ಸಮಸ್ಯೆ ದೇಶದಲ್ಲಿ ತಾಂಡವವಾಡುತ್ತಿದ್ದು, ಉದ್ಯೋಗ ಸೃಷ್ಟಿ ಬಗ್ಗೆ ಪ್ರಸ್ತಾಪವಿಲ್ಲ ಎಂದು ದೂರಿದ್ದಾರೆ.

ಕಳೆದೊಂದು ದಶಕದಿಂದಲೂ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಉತ್ತಮ ಬಜೆಟ್ ಮಂಡನೆಯಾಗಿಲ್ಲ. ರಾಜ್ಯವು ದೇಶದಲ್ಲೇ ಎರಡನೇ ಅತಿ ದೊಡ್ಡ ತೆರಿಗೆ ಪಾವತಿಸುವ ರಾಜ್ಯ. ಆದರೂ, ಇಂತಹ ಆದಾಯ ತಂದುಕೊಡುವ ಕರ್ನಾಟಕ ರಾಜ್ಯವನ್ನೇ ಕೇಂದ್ರ ಸರ್ಕಾರ ಮರೆಯುತ್ತಿರುವುದು ಸರಿಯಲ್ಲ. ಬಿಹಾರದ ಮೇಲೆ ತೋರುವ ಪ್ರೀತಿ ಕರ್ನಾಟಕದ ಬಗ್ಗೆ ಕೇಂದ್ರಕ್ಕೆ ಇಲ್ಲ ಎಂದು ಎಸ್‌.ಎಸ್‌. ಮಲ್ಲಿಕಾರ್ಜುನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- - - -1ಕೆಡಿವಿಜಿ3, 4.ಜೆಪಿಜಿ:

ಎಸ್.ಎಸ್.ಮಲ್ಲಿಕಾರ್ಜುನ, ಸಚಿವ, ಗಣಿ-ಭೂ ವಿಜ್ಞಾನ, ತೋಟಗಾರಿಕೆ ಖಾತೆ