ಸಾರಾಂಶ
ಹೊಟ್ಟೆಪಾಡಿಗಾಗಿ ದುಡಿಯುವುದು ಸಾಮಾನ್ಯ. ಅದರ ಜೊತೆ ಜೊತೆಗೆ ಸಾಮಾಜಿಕ ಕಳಕಳಿ ಮೈಗೂಡಿಸಿಕೊಳ್ಳಬೇಕು. ಸಮಾಜ ಸೇವೆ ಮಾಡಿದರೆ ಜೀವನಕ್ಕೆ ಸಾರ್ಥಕತೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಜೀವನೋತ್ಸಾಹ ಚಿರವಾಗಿ ಇರಬೇಕೆಂದರೆ ಇತರರನ್ನು ಖುಷಿಯಾಗಿ ಇಡುವಂತಹ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹರಿಹರ ಎಂಕೆಇಟಿ ಶಾಲೆಯ ಡೀನ್ ಡಾ.ಬಿ.ಟಿ.ಅಚ್ಯುತ್ ಹೇಳಿದರು.ನಗರದ ಸದ್ಯೋಜಾತ ಹಿರೇಮಠದಲ್ಲಿ ಅನಂತ ಚೇತನ ಪರಿವಾರ ಸಂಘಟನೆ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ನಮ್ಮ ಏಳಿಗೆ ಸಹಿಸದೇ ಕೊರಗುವವರೇ ಹೆಚ್ಚು. ಅಂಥವರನ್ನು ಕಡೆಗಣಿಸಿ, ನಿಮ್ಮಷ್ಟಕ್ಕೆ ನೀವು ಮುಂದೆ ಸಾಗುತ್ತಿರಬೇಕು ಎಂದರು.
ಕಲಾಕುಂಚ ಸಂಸ್ಥಾಪಕ ಗಣೇಶ್ ಶೆಣೈ ಮಾತನಾಡಿ, ಸಂಸ್ಥೆ ಕಟ್ಟುವವರು ಆರಂಭಶೂರತ್ವ ಮೆರೆಯಬಾರದು. ಅದನ್ನು ನಿರಂತರ, ಕ್ರಿಯಾಶೀಲವಾಗಿ ನಡೆಸಿಕೊಂಡು ಹೋಗಬೇಕು. ಹೊಟ್ಟೆಪಾಡಿಗಾಗಿ ದುಡಿಯುವುದು ಸಾಮಾನ್ಯ. ಅದರ ಜೊತೆ ಜೊತೆಗೆ ಸಾಮಾಜಿಕ ಕಳಕಳಿ ಮೈಗೂಡಿಸಿಕೊಳ್ಳಬೇಕು. ಸಮಾಜ ಸೇವೆ ಮಾಡಿದರೆ ಜೀವನಕ್ಕೆ ಸಾರ್ಥಕತೆ ಬರಲಿದೆ ಎಂದರು.ಪರಿವಾರದ ಸಂಸ್ಥಾಪಕಿ ಡಾ.ಆರತಿ ಸುಂದರೇಶ್ ಅಧ್ಯಕ್ಷತೆ ವಹಿಸಿ, ಚೈತನ್ಯ ಎಂಬುದು ಒಂದು ದಿನಕ್ಕೆ ಸೀಮಿತವಾಗಿದೆ, ಜೀವನದ ಕೊನೆಯವರೆಗೂ ಇರಬೇಕು. ಎಲ್ಲರಿಗೂ ಜೀವನದ ಬಗ್ಗೆ ಒಲವಿರಬೇಕು. ನಮ್ಮೆಲ್ಲರಲ್ಲಿ ಜೀವನೋತ್ಸಾಹ ಚಿರವಾಗಿರಲೆಂದೇ ಅನಂತ ಪರಿವಾರವನ್ನು ಆರಂಭಿಸಿದ್ದೇವೆ. ಎಲ್ಲರೂ ಒಂದಾಗಿ ಪಾಲ್ಗೊಳ್ಳಿರಿ ಎಂದರು.
ಕಾರ್ಯಕ್ರಮದಲ್ಲಿ ಪರಿವಾರದ ಅಧ್ಯಕ್ಷೆ, ಸುಮಾ ಸದಾನಂದ್, ಪ್ರಧಾನ ಕಾರ್ಯದರ್ಶಿ ನೀಲಮ್ಮ ಬೆಳ್ಳೂಡಿ, ಖಜಾಂಚಿ ಚೇತನ ಚಿದಂಬರಂ, ಸುನಂದಾ, ಉಷಾ ಲಿಂಗರಾಜ, ಉಮಾ ಯಲ್ಲಪ್ಪ, ಸುಮಾ ಸದಾನಂದ, ಸರಳ ಶಾಂತಿನಾಥ, ಚಂದನ ವಿಜಯಕುಮಾರ, ಸುಕನ್ಯಾ ಬೆಳ್ಳುಡಿ, ಶಾಂತಾ ತಿಪ್ಪಣ್ಣ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಪರಿವಾರ ಸದಸ್ಯರು ಭಾಗವಹಿಸಿದ್ದರು.ಭವಾನಿ ಶಂಭುಲಿಂಗಪ್ಪ ಪ್ರಾರ್ಥಿಸಿದರೆ, ಪುಟಾಣಿ ಮಾನ್ವಿತ ಗಣೇಶನನ್ನು ಸ್ತುತಿಸಿದರು. ವಾತಾಪಿ ಗಣಪತಿ ಸ್ತುತಿಗೆ ನವ್ಯ ರಾಯ್ಕರ್ ನೃತ್ಯ ಪ್ರದರ್ಶಿಸಿದರು.