ಅಕ್ರಮ ಖಾತೆ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶ

| Published : Jan 09 2024, 02:00 AM IST

ಅಕ್ರಮ ಖಾತೆ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ವರುಣಾ ಉಪನಾಲೆಗೆ ಸೇರಿದ ಜಮೀನನ್ನು ಲೇಔಟ್ ಮಾಡಲು ಸಹಾಯ ಮಾಡಿದ ಆರೋಪ, ಮೂವರು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗುವಂತೆ ಜಿಲ್ಲಾಧಿಕಾರಿ ಆದೇಶ ಜೊತೆಗೆ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ವರುಣಾ ಉಪನಾಲೆಗೆ ಸೇರಿದ 14 ಗುಂಟೆ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿ ಲೇಔಟ್ ನಿರ್ಮಾಣ ಮಾಡಿದ ವೀರಭದ್ರಯ್ಯ, ಅಕ್ರಮ ಖಾತೆಗೆ ಸಹಾಯ ಮಾಡಿದ ಮೂವರು ಅಧಿಕಾರಿಗಳ ಶಿಸ್ತು ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ.

ತಾಲೂಕಿನ ಬೆಳಗೊಳ ಗ್ರಾಮದ ಬಲಮುರಿ ರಸ್ತೆ ಬಳಿ ಇರುವ ವರುಣಾ ಉಪನಾಲೆಗೆ ಸೇರಿದ 14 ಗುಂಟೆ ಜಮೀನಗಳನ್ನು ಅಕ್ರಮವಾಗಿ ಖಾತೆ ಮಾಡಿ ಲೇಔಟ್ ನಿರ್ಮಾಣಕ್ಕೆ ಮುಂದಾಗಿದ್ದ ವೀರಭದ್ರಯ್ಯ ವಿರುದ್ಧ ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ರಾಜಸ್ವ ನಿರೀಕ್ಷಕ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.

ಮೈಸೂರು ಮೂಲದ ವಕೀಲರೊಬ್ಬರು ಲೋಕಾಯುಕ್ತಕ್ಕೆ ಬೆಳಗೊಳ ಗ್ರಾಮದ ಬಳಿ ಸರ್ವೇ ನಂ.44 ರ ಬಳಿ ಹಾದು ಹೋಗಿದ್ದ ವರುಣಾ ಉಪನಾಲೆಗೆ ಭೂ ಸ್ವಾಧಿನವಾಗಿದ್ದ ಜಾಗದಲ್ಲಿ 14 ಗುಂಟೆ ಭೂ ಸ್ವಾಧೀನ ಮಾಡಿ ಹಣ ಪರಿಹಾರ ಪಡೆದ ಜಮೀನು ಮಾಲೀಕರ ನಂತರ ಇದೇ ಜಮೀನನ್ನು ಅಧಿಕಾರಿಗಳ ಜೊತೆ ಶಾಮೀಲಾಗಿ ಮಾಲೀಕರು ಅನ್ಯಕ್ರಾಂತ ಮಾಡಿಸಿಕೊಂಡಿದ್ದಾರೆಂದು ದೂರು ನೀಡಿದ್ದರು.

ಇದರ ಮೇರೆಗೆ ತನಿಖೆ ಮೈಸೂರು ಕಾ.ನೀ.ನಿಗಮದ ವರುಣಾ ನಾಲಾ ಸಹಾಯಕ ಕಾರ್ಯಪಾಲಕ ಅಭಿಯಂತರ ರೊಂದಿಗೆ ಜಿಲ್ಲಾಧಿಕಾರಿಗಳ ನೇಮಿಸಿದ ಅಧಿಕಾರಿಗಳ ತಂಡ ನಾಲಾ ಭೂಸ್ವಾಧೀನವಾಗಿದ್ದ 14 ಗುಂಟೆ ಜಮೀನನ್ನು ಅಕ್ರಮವಾಗಿ ಬೆಳಗೊಳ ಸರ್ವೇ ನಂ.44 ರ ಮಾಲೀಕ ವೀರಭದ್ರಯ್ಯ ರಿಗೆ ಅನ್ಯಕ್ರಾಂತವಾಗಿರುವುದಾಗಿ ನೀಡಿರುವ ಮಾಹಿತಿ ಮೇರೆಗೆ ಜಿಲ್ಲಾಧಿಕಾರಿಗಳು ವೀರಭದ್ರಯ್ಯ ವಿರುದ್ಧ ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಇದಕ್ಕೆ ಸಹಾಯ ಮಾಡಿದ ಅಂದಿನ ಬೆಳಗೊಳ ವ್ಯಾಪ್ತಿಯ ರಾಜಸ್ವ ನಿರೀಕ್ಷಕ ಜಯರಾಮಮೂರ್ತಿ, ಗ್ರಾಮ ಲೆಕ್ಕಿಗ ಪುಟ್ಟಸ್ವಾಮಿ, ನಗರ ಮತ್ತು ಗ್ರಾಮಾಂತರ ಯೋಜನಾ ಶಾಖೆ ಸಹಾಯಕ ನಿರ್ದೇಶಕರ ಬಾಲಗಂಗಾಧರ ವಿರುದ್ಧ ಶಿಸ್ತುಕ್ರಮಕ್ಕಾಗಿ ಅನುಬಂಧ 1-4 ರಂತೆ ದೋಷಾರೋಪಣ ಪಟ್ಟಿ ಸಿದ್ದ ಪಡಿಸಲು ತಹಸೀಲ್ದಾರ್ ಗೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ.