ಸಾರಾಂಶ
ಭಟ್ಕಳ:
ಪಟ್ಟಣದ ತೆಂಗಿನಗುಂಡಿ ಕ್ರಾಸ್‌ನಲ್ಲಿ ಸೋಮವಾರ ಬೆಳಗಿನ ಜಾವ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಕಂಟೈನರ್‌ನಲ್ಲಿ ಜಾನುವಾರು ಸಾಗಾಟವನ್ನು ಪತ್ತೆ ಹಚ್ಚಿದ ನಗರ ಠಾಣೆಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಮೈಸೂರು ಜಿಲ್ಲೆಯ ಕೆ.ಆರ್. ನಗರ ನಿವಾಸಿ ರಾಘವೇಂದ್ರ ನಾಗೇಂದ್ರ(30) ಹಾಗೂ ಪಿರಿಯಾಪಟ್ಟಣ ನಿವಾಸಿ ಆಯೂಬ್ ಅಹ್ಮದ(40) ಬಂಧಿತ ಆರೋಪಿತರು. ಇವರು ವಧೆ ಮಾಡುವ ಉದ್ದೇಶದಿಂದ ₹5.50 ಲಕ್ಷ ಮೌಲ್ಯದ 11 ಕೋಣಗಳು ಹಾಗೂ ₹2.50 ಲಕ್ಷ ಮೌಲ್ಯದ 5 ಎಮ್ಮೆಗಳನ್ನು ಪರವಾನಗಿ ಇಲ್ಲದೇ ಕಂಟೈನರ್‌ನಲ್ಲಿ ಹಿಂಸಾತ್ಮಕ ರೀತಿಯಲ್ಲಿ ಹಗ್ಗಗಳಿಂದ ಕಟ್ಟಿ ಸಾಗಾಟ ಮಾಡುತ್ತಿರುವಾಗ ಪಟ್ಟಣದ ತೆಂಗಿನಗುಂಡಿ ಕ್ರಾಸ್ ಬಳಿ ನಗರ ಠಾಣೆಯ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಧಿಕೃತ ವಿಹಾರಾರ್ಥಿ ಬೋಟ್‌ಗಳಿಗೆ ಅನುಮತಿ ನೀಡದಿರಿಕಾರವಾರ: ಗೋಕರ್ಣದ ಭಾಗದಲ್ಲಿ ಅನಧಿಕೃತವಾಗಿ ವಿಹಾರಾರ್ಥಿ ಬೊಟ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದು, ಅನುಮತಿ ಪಡೆದವರಿಗೆ ತೊಂದರೆಯಾಗುತ್ತಿದೆ. ಜತೆಗೆ ಅವಘಡಗಳು ನಡೆಯಲು ಕಾರಣವಾಗುತ್ತಿದೆ. ಹೀಗಾಗಿ ಅನಧಿಕೃತ ಬೋಟ್‌ಗಳಿಗೆ ಅನುಮತಿ ನೀಡಬಾರದು ಎಂದು ಗೋಕರ್ಣ ಓಂ ಬೀಚ್ ರೆಸಾರ್ಟ್ ಅಸೋಸಿಯೇಶನ್ ಅಧ್ಯಕ್ಷ ಚಿದಾನಂದ ಲಕ್ಕುಮನೆ ಆಗ್ರಹಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಹಾರಾರ್ಥಿ ಬೋಟ್ ಎಂದರೆ ಪ್ರವಾಸಿಗರನ್ನು ಸಮುದ್ರದಲ್ಲಿ ಸುತ್ತಾಡಿಸುವ ಬೋಟ್‌ಗಳಾಗಿದ್ದು, ೨೦೨೩ರ ನವೆಂಬರ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಟೆಂಡರ್‌ದಾರರ ಹಾಗೂ ಅನಧಿಕೃತವಾಗಿ ಪ್ರವಾಸಿಗರನ್ನು ಹೊತ್ತೊಯ್ಯುವ ಬೋಟುದಾರರ ಮಧ್ಯೆ ಏರ್ಪಡಿಸಿದ ಸಂಧಾನದಲ್ಲಿ ಟೆಂಡರುದಾರಲ್ಲದವರಲ್ಲಿ ೭ ಬೋಟ್‌ಗಳಿಗೆ ನದಿಯ ಹಿನ್ನೀರಿನ ಪ್ರದೇಶದಲ್ಲಿ ಮಾತ್ರ ವಿಹಾರಾರ್ಥಿಗಳನ್ನು ಒಯ್ಯಬಹುದೇ ಹೊರತು ಟೆಂಡರ್ ಪಡೆದವರ ವ್ಯಾಪ್ತಿಯಲ್ಲಿರುವ ಪ್ಯಾರಡೈಸ್, ಹಾಫ್‌ಮೂನ್, ಓಂ, ಕುಡ್ಲೆ ಹಾಗೂ ಗೋಕರ್ಣ ಕಡಲ ತೀರದಲ್ಲಿ ಪ್ರವಾಸಿಗರನ್ನು ಒಯ್ಯುವಂತಿಲ್ಲ.ಒಂದು ವೇಳೆ ಅನಧಿಕೃತ ಬೋಟುಗಳು ಟೆಂಡರ್‌ದಾರರ ವ್ಯಾಪ್ತಿಗೆ ಬಂದರೆ ಅಂತಹ ಬೋಟುಗಳನ್ನು ಸೀಜ್ ಮಾಡುವುದೆಂದು ನಿರ್ಧರಿಸಲಾಗಿತ್ತು. ಆದರೆ ಅನಧಿಕೃತ ಬೋಟಿಂಗ್ ನಿಂತಿಲ್ಲ ಎಂದು ಆರೋಪಿಸಿದರು.ಅನಧಿಕೃತ ವಿಹಾರಾರ್ಥಿ ಬೋಟಿನ ಸಂಖ್ಯೆ ೩೦ರಷ್ಟು ಆಗಿದ್ದು, ಅನಧಿಕೃತ ಬೋಟುಗಳ ಅಧಿಕ ಸಂಖ್ಯೆಯಿಂದ ಸ್ಪರ್ಧೆ ಏರ್ಪಟ್ಟು ಹೆಚ್ಚಿನ ಆದಾಯ ಸಂಪಾದಿಸಲು ತಮ್ಮ ಕಾರ್ಯದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದಿಲ್ಲ. ೧೫ ಜನ ಪ್ರಯಾಣ ಮಾಡಬಹುದಾದ ಬೋಟುಗಳಲ್ಲಿ ೩೦- ೪೦ರಷ್ಟು ಪ್ರವಾಸಿಗರನ್ನು ಕರೆದುಕೊಂಡು ಅಪಾಯಕಾರಿ ಸ್ಥಿತಿಯಲ್ಲಿ ಬೋಟಿಂಗ್ ನಡೆಸುತ್ತಿದ್ದಾರೆ ಎಂದು ದೂರಿದರು.
ಚಂದ್ರಕಾಂತ ಹರಿಕಂತ್ರ, ಸಂತೋಷ ಹರಿಕಂತ್ರ, ನಾಗರಾಜ ಹರಿಕಂತ್ರ, ಉಸ್ಮಾನ್ ಅಬ್ದುಲ್ ರೆಹಮಾನ, ಚಂದ್ರಕಾಂತ ಅಂಬಿಗ, ದೇವಾನಂದ ನಾಯಕ ಮೊದಲಾದವರು ಇದ್ದರು.