ಅಕ್ರಮವಾಗಿ ಗೋ ಹತ್ಯೆಗೈದು ಮಾಂಸ ತಯಾರಿ: ಪೊಲೀಸ್‌ ದಾಳಿ

| Published : Sep 22 2024, 01:47 AM IST

ಅಕ್ರಮವಾಗಿ ಗೋ ಹತ್ಯೆಗೈದು ಮಾಂಸ ತಯಾರಿ: ಪೊಲೀಸ್‌ ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಪರಾರಿಯಾಗಿರುವ ಆರೊಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ಪೊಲೀಸರು ಘಟನಾ ಸ್ಥಳದಲ್ಲಿದ್ದ ೯೬ ಕೆ.ಜಿ. ಗೋ ಮಾಂಸ, ಒಂದು ಬೈಕ್ ಹಾಗೂ ಒಂದು ರಿಕ್ಷಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ೩೪ನೇ ನೆಕ್ಕಿಲಾಡಿ ಗ್ರಾಮದ ಆದರ್ಶನಗರದ ಕಜೆ ಎಂಬಲ್ಲಿ ನಿವೇಶನವೊಂದರಲ್ಲಿ ಅಕ್ರಮವಾಗಿ ಗೋ ಹತ್ಯೆಗೈದು ಮಾಂಸ ತಯಾರಿಸುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ ೯೬ ಕೆ ಜಿ ಗೋ ಮಾಂಸ, ೧ ಬೈಕ್ ಹಾಗೂ ಒಂದು ರಿಕ್ಷಾವನ್ನು ವಶಪಡಿಸಿಕೊಂಡ ಘಟನೆ ಶನಿವಾರ ಸಂಭವಿಸಿದೆ. ಕಜೆ ನಿವಾಸಿ ಖತಿಜಮ್ಮ ಎಂಬಾಕೆಯ ಒಡೆತನಕ್ಕೆ ಸೇರಿದ ಈ ನಿವೇಶನದಲ್ಲಿ ಅಕ್ರಮವಾಗಿ ಗೋ ಹತ್ಯೆ ನಡೆಸಲಾಗುತ್ತಿದೆ ಎಂಬ ಖಚಿತ ವರ್ತಮಾನದ ಮೇರೆಗೆ ಉಪ್ಪಿನಂಗಡಿ ಎಸ್‌ಐ ಅವಿನಾಶ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿತ್ತು. ಈ ವೇಳೆ ಸ್ಥಳದಲ್ಲಿದ್ದ ಐವರು ಆರೋಪಿಗಳು ಸಮೀಪದ ಕಾಡಿನತ್ತ ಓಡಿ ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಪರಾರಿಯಾಗಿರುವ ಆರೊಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ಪೊಲೀಸರು ಘಟನಾ ಸ್ಥಳದಲ್ಲಿದ್ದ ೯೬ ಕೆ.ಜಿ. ಗೋ ಮಾಂಸ, ಒಂದು ಬೈಕ್ ಹಾಗೂ ಒಂದು ರಿಕ್ಷಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.