47 ವರ್ಷದ ಹಿಂದೆ ಸರ್ಕಾರಿ ಜಮೀನು ಹಂಚಿಕೆಯಲ್ಲಿ ಅಕ್ರಮ ?

| Published : Nov 08 2024, 12:31 AM IST

47 ವರ್ಷದ ಹಿಂದೆ ಸರ್ಕಾರಿ ಜಮೀನು ಹಂಚಿಕೆಯಲ್ಲಿ ಅಕ್ರಮ ?
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದ ಚಿಕ್ಕಚೆನ್ನಯ್ಯ ಮತ್ತು ರಾಮದಾಸ್ ಅವರ ಅವಧಿಯಲ್ಲಿ (1977-78) ದರಖಾಸ್ತು ಮೂಲಕ ಮಂಜೂರಾಗಿರುವ ಸರ್ಕಾರಿ ಜಮೀನು ಹಂಚಿಕೆಯಲ್ಲಿ ಅಕ್ರಮ ಎಸಗಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ ಅರ್ಹ ರೈತರಿಗೆ ನ್ಯಾಯ ಒದಗಿಸುವಂತೆ ಕಂದಾಯ ಇಲಾಖೆಯ ಉನ್ನತ ಅಧಿಕಾರಿಯ ನೇತೃತ್ವದಲ್ಲಿ ತನಿಖಾ ತಂಡವನ್ನು ರಚನೆ ಮಾಡಲಾಗಿದ್ದು, 15 ದಿನದೊಳಗೆ ಕಡತಗಳ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಸರ್ಕಾರ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಶಿರಾ

ನಗರದಲ್ಲಿ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದ ಚಿಕ್ಕಚೆನ್ನಯ್ಯ ಮತ್ತು ರಾಮದಾಸ್ ಅವರ ಅವಧಿಯಲ್ಲಿ (1977-78) ದರಖಾಸ್ತು ಮೂಲಕ ಮಂಜೂರಾಗಿರುವ ಸರ್ಕಾರಿ ಜಮೀನು ಹಂಚಿಕೆಯಲ್ಲಿ ಅಕ್ರಮ ಎಸಗಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ ಅರ್ಹ ರೈತರಿಗೆ ನ್ಯಾಯ ಒದಗಿಸುವಂತೆ ಕಂದಾಯ ಇಲಾಖೆಯ ಉನ್ನತ ಅಧಿಕಾರಿಯ ನೇತೃತ್ವದಲ್ಲಿ ತನಿಖಾ ತಂಡವನ್ನು ರಚನೆ ಮಾಡಲಾಗಿದ್ದು, 15 ದಿನದೊಳಗೆ ಕಡತಗಳ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಸರ್ಕಾರ ಆದೇಶಿಸಿದೆ.ತನಿಖಾ ತಂಡದ ಅಧ್ಯಕ್ಷರಾಗಿ ವಿಶೇಷ ಜಿಲ್ಲಾಧಿಕಾರಿ ಆರ್.ಜಿ.ಚಂದ್ರಶೇಖರ್, ಸದಸ್ಯರಾಗಿ ಅಪರ ಪ್ರಾದೇಶಿಕ ಆಯುಕ್ತ ಸೀಮಾ ನಾಯಕ್.ಬಿ, ಇಸ್ಲಾವುದ್ದೀನ್ ಜೆ ಗದ್ಯಾಳ, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಮಧುಗಿರಿ ಉಪವಿಭಾಗಾಧಿಕಾರಿ ಶಿವಪ್ಪ ಗೋಟೂರು, ಕೇಂದ್ರೀಯ ಜಾರಿದಳ ತಹಸೀಲ್ದಾರ್ ಗಣಪತಿ ಶಾಸ್ತ್ರಿ, ಗ್ರೇಡ್-2 ತಹಸೀಲ್ದಾರ್ ಭರತ್ ಎಚ್.ಜಿ, ಗ್ರೇಡ್-2 ತಹಸೀಲ್ದಾರ್ ರೇಷ್ಮಾ.ಕೆ.ಎಸ್, ಸಂಜಯ್ ಎಂ. ಇವರನ್ನು ತನಿಖಾ ತಂಡವಾಗಿ ನೇಮಿಸಲಾಗಿದೆ.

ತಾಲೂಕಿನಲ್ಲಿ ಸರ್ಕಾರಿ ಜಮೀನಿನಲ್ಲಿ ಸಾಗುವಳಿಯಲ್ಲಿ ಸಕ್ರಮಗೊಳಿಸಲು 1977-78ನೇ ಸಾಲಿನಲ್ಲಿ ಕಡತಗಳನ್ನು ತಯಾರಿಸುವಾಗ ಮತ್ತು ಮುಂದುವರೆಸುವಾಗ ಆಗಿರುವ ಅಕ್ರಮಗಳ ಬಗ್ಗೆ ಪರಿಶೀಳನೆ ಮಾಡಿ ಅಕ್ರಮವೆಸಗಿವುದು ಕಂಡುಬಂದಲ್ಲಿ ಭಾಗಿಯಾಗಿರುವ ಅಧಿಕಾರಿ ಮತ್ತು ನೌಕರರ ವಿರುದ್ದ ಕರ್ನಾಟಕ ನಾಗರೀಕ ಸೇವಾ ನಿಯಮಗಳ ಅಡಿಯಲ್ಲಿ 1958 ಅನ್ವಯ ದೋಷಾರೋಪ ಪಟ್ಟಿಯನ್ನು ತಯಾರಿಸಲಾಗುವುದು. ತನಿಖಾ ತಂಡವು 15 ದಿನಗಳಲ್ಲಿ ಕಾರ್ಯವನ್ನು ಪೂರ್ಣಗೊಳಿಸಿ ಸ್ಪಷ್ಟ ಶಿಫಾರಸ್ಸಿನೊಂದಿಗೆ ಆಯುಕ್ತರು ಕಂದಾಯ ಆಯುಕ್ತಾಲಯ ಇವರಿಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸರ್ಕಾರ ಆದೇಶಿಸಿದೆ.ಈ ಬಗ್ಗೆ ಶಾಸಕ ಟಿ ಬಿ ಜಯಚಂದ್ರ ಇತ್ತೀಚೆಗೆ ಪತ್ರ ಬರೆದು ಹಿನ್ನೆಲೆ ಸರ್ಕಾರದ ಕಂದಾಯ ಇಲಾಖೆಯ ಉನ್ನತ ಅಧಿಕಾರಿಯ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿದೆ. ಸುಮಾರು 4-5 ದಶಕಗಳ ಈ ಸಮಸ್ಯೆಗೆ ಮುಕ್ತಿ ನೀಡುವಂತೆ ನೂರಾರು ರೈತರು ಟಿ.ಬಿ.ಜಯಚಂದ್ರಗೆ ಮನವಿ ಸಲ್ಲಿಸಿದ್ದರು. ಅನ್ನದಾತನಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದ ಶಾಸಕರು ಈ ಮಹತ್ವದ ಬೆಳೆವಣಿಗೆಗೆ ಕಾರಣರಾಗಿದ್ದಾರೆ.