ರಾಬರ್ಟ್‌ಸನ್‌ಪೇಟೆಯ ಎಂ.ಐ ರಸ್ತೆಯಲ್ಲಿರುವ ನೌಷದ್ ಎಂಟರ್ ಪ್ರೈಸಸ್ ಅಂಗಡಿಯಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಭರ್ತಿ ಮಾಡುತ್ತಿದ್ದರ ಬಗ್ಗೆ ದಾಳಿ ಮಾಡಿತ್ತು.
ಕೆಜಿಎಫ್:ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಭರ್ತಿ ಮಾಡುತ್ತಿದ್ದ ಅಂಗಡಿ ಮೇಲೆ ಪೊಲೀಸರು ಆಹಾರ ನಿರೀಕ್ಷಕರು ಕೆಜಿಎಫ್ ತಾಲೂಕು ಅವರೊಂದಿಗೆ ಜಂಟಿ ಕಾರ್ಯಚರಣೆ ನಡೆಸಿ ಅಕ್ರಮ ಸಿಲಿಂಡರ್ ಭರ್ತಿ ಮಾಡುತ್ತಿದ್ದರ ಮೇಲೆ ದಾಳಿ ಮಾಡಿ ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ₹9,650 ಮೌಲ್ಯದ ಸಿಲೆಂಡರ್‌ನ್ನು ವಶಪಡಿಸಿಕೊಂಡಿದ್ದಾರೆ.ರಾಬರ್ಟ್‌ಸನ್‌ಪೇಟೆಯ ಎಂ.ಐ ರಸ್ತೆಯಲ್ಲಿರುವ ನೌಷದ್ ಎಂಟರ್ ಪ್ರೈಸಸ್ ಅಂಗಡಿಯಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಭರ್ತಿ ಮಾಡುತ್ತಿದ್ದರ ಬಗ್ಗೆ ಬಂದ ಖಚಿತ ಮಾಹಿತಿಯನ್ವಯ ಜ. 15 ರಂದು ಪಿಎಸ್ಐ ಮಾಹೇಶ್ ಮಾಳಿ ಮತ್ತು ಸಿಬ್ಬಂದಿ ಹಾಗೂ ಕೆಜಿಎಫ್ ಆಹಾರ ನಿರೀಕ್ಷಕರು ವಿ.ರಘು ಅವರೊಂದಿಗೆ ಜಂಟಿ ಕಾರ್ಯಚರಣೆ ಮೂಲಕ ದಾಳಿ ನಡೆಸಿ ಅಕ್ರಮವಾಗಿ ಗ್ಯಾಸ್ ಭರ್ತಿ(ರೀಫಿಲ್ಲಿಂಗ್) ಮಾಡುತ್ತಿದ್ದ ಆರೋಪಿ ಎಂ. ನೌಷಾದ್ ಪಾಷ ಅವರನ್ನು ವಶಕ್ಕೆ ಪಡೆದುಕೊಂಡು ಅಲ್ಲಿದ್ದಂತಹ 9650 ಮೌಲ್ಯದ ಒಂದು ಗ್ಯಾಸ್ ರಿಫಿಲ್ಲಿಂಗ್ ಮಾಡುವ ಪೈಫ್, ಒಂದು ತೂಕದ ಯಂತ್ರ, 12 ಕೆ.ಜಿ ತೂಕದ ಎರಡು ಇಂಡೋ ಗ್ಯಾಸ್ ಸಿಲಿಂಡರ್, 8 ಕೆ.ಜಿ ತೂಕದ ಒಂದು ಇಂಡೆನ್ ಖಾಲಿ ಸಿಲಿಂಡರ್, 2 ಕೆ.ಜಿ ತೂಕದ ಒಂದು ಖಾಲಿ ಸಿಲಿಂಡರ್ ವಶಪಡಿಸಿಕೊಂಡಿದ್ದಾರೆ. ೧೬ ಕೆಜಿಎಫ್೫
ವಶÀಪಡಿಸಿಕೊಂಡ ಸಿಲೆಂಡರ್‌ನೊಮದಿಗೆ ರಾಬರ್ಟ್ಸನ್‌ಪೇಟೆ ಪೊಲೀಸರು.