ಅಕ್ರಮ ಗೋವಾ ಮದ್ಯ ವಶ, ಆರೋಪಿ ಬಂಧನ

| Published : Sep 19 2024, 01:49 AM IST

ಸಾರಾಂಶ

ಒಟ್ಟು 31 ಲೀಟರ್‌ ಗೋವಾ ರಾಜ್ಯದ ಮದ್ಯವನ್ನು ಸಾಗಾಟ ಮಾಡುತ್ತಿದ್ದ ಅನಂತ ದೇವದಾಸ ಪ್ರಭು ಎಂಬಾತನನ್ನು ದಸ್ತಗಿರಿ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಇಂದ್ರಾಳಿ ರೈಲ್ವೆ ಸ್ಟೇಷನ್‌ನಿಂದ ಮಣಿಪಾಲಕ್ಕೆ ಹೋಗುವ ಮಾರ್ಗದಲ್ಲಿ ಸೆ. 17 ರಂದು ಅಕ್ರಮವಾಗಿ ಗೋವಾ ಮದ್ಯವನ್ನು ದ್ವಿಚಕ್ರ ವಾಹನದಲ್ಲಿ ದುಬಾರಿ ದರದ ವಿವಿಧ ಬ್ರ್ಯಾಂಡ್‌ನ ಅಂದಾಜು 1,42,798 ರು. ಮೌಲ್ಯದ ಒಟ್ಟು 31 ಲೀಟರ್ ಗೋವಾ ರಾಜ್ಯದ ಮದ್ಯವನ್ನು ಸಾಗಾಟ ಮಾಡುತ್ತಿದ್ದ ಅನಂತ ದೇವದಾಸ ಪ್ರಭು ಎಂಬಾತನನ್ನು ಅಬಕಾರಿ ನಿರೀಕ್ಷಕರ ನೇತೃತ್ವದಲ್ಲಿ ದಸ್ತಗಿರಿ ಮಾಡಿದ್ದಾರೆ.

ಅಲ್ಲದೆ ಆತನಿಂದ ವಾಹನವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಅಬಕಾರಿ ನಿರೀಕ್ಷಕರಾದ ಶುಭದಾ ಸಿ.ನಾಯಕ್, ಅಬಕಾರಿ ಉಪ ನಿರೀಕ್ಷಕರಾದ ದಿವಾಕರ ಹಾಗೂ ಶಿವಶಂಕರ ಯು, ಕಾನ್ಸ್ಟೇಬಲ್‌ಗಳಾದ ಪ್ರಹ್ಲಾದ ಮತ್ತು ಪರಸಪ್ಪ ಇಂಗಳಗಿ, ಹಿರಿಯ ವಾಹನ ಚಾಲಕರಾದ ಸುಧಾಕರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.