Illegal rice transport: Vehicle seized, case registered.
-ಆಹಾರ ಇಲಾಖೆ, ಪೋಲೀಸ್ ಇಲಾಖೆಯ ಸಿಬ್ಬಂದಿ ಜಂಟಿ ದಾಳಿ
--ಕನ್ನಡಪ್ರಭ ವಾರ್ತೆ ಯಾದಗಿರಿ
ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಫಲಾನುಭವಿಗಳಿಗೆ ವಿತರಿಸಲಾಗುವ ಅಕ್ಕಿಯನ್ನು ಅಕ್ರಮವಾಗಿ ಕಳ್ಳಸಂತೆಯಲ್ಲಿ ಸಾಗಿಸಲು ಯತ್ನಿಸುತ್ತಿದ್ದ ವಾಹನವನ್ನು ಆಹಾರ ಇಲಾಖೆ ಹಾಗೂ ಪೋಲೀಸ್ ಇಲಾಖೆಯ ಸಿಬ್ಬಂದಿ ಜಂಟಿ ದಾಳಿ ನಡೆಸಿ ಜಪ್ತಿ ಮಾಡಿಕೊಂಡಿದ್ದಾರೆ.ಗುರುಮಠಕಲ್ ಗಡಿ ಭಾಗದಲ್ಲಿರುವ ''''ಯೂಥ್ ಫಾರ್ ಆ್ಯಕ್ಷನ್'''' ಕಟ್ಟಡದ ಹತ್ತಿರ ಗುರುಮಠಕಲ್–ಗಾಜರಕೋಟೆ ಮುಖ್ಯ ರಸ್ತೆಯಲ್ಲಿ ಅಕ್ಕಿಯನ್ನು ಅಕ್ರಮವಾಗಿ ಲೋಡ್ ಮಾಡಿ ನಿಲ್ಲಿಸಲಾಗಿರುವ ಕುರಿತು ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿಯನ್ನಾಧರಿಸಿ ಆಹಾರ ನಿರೀಕ್ಷಕರು ಹಾಗೂ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದಾರೆ.
* ಜಪ್ತಿಯಾದ ಸ್ವತ್ತುಗಳು : ಅಕ್ಕಿ ಅಂದಾಜು ₹ 1,29,750 ಮೌಲ್ಯದ 37.50 ಕ್ವಿಂಟಲ್ ಅಕ್ಕಿ ಜೊತೆಗೆ ವಾಹನ ಅಂದಾಜು ರೂ. 2,50,000 ಮೌಲ್ಯದ ಬಿಳಿ ಬಣ್ಣದ ಮಹೀಂದ್ರಾ ಬೊಲೆರೊ ಪಿಕ್-ಅಪ್ ಗೂಡ್ಸ್ ಕ್ಯಾರಿಯರ್ ವಾಹನ (ಸಂಖ್ಯೆ: ಕೆಎ-32-ಎಂಎ-2217).ಈ ಕುರಿತು ಅ. 02 ರಂದು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ವಾಹನ ಚಾಲಕನ ವಿರುದ್ಧ ''''ಅಗತ್ಯ ವಸ್ತುಗಳ ಕಾಯ್ದೆ 1955'''' ರ ಕಲಂ 3 ಮತ್ತು 7 ರಡಿ ಪ್ರಕರಣ (ಪ್ರಕರಣ ಸಂಖ್ಯೆ: 206/2026) ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಸೋಮಶೇಖರ ಬಿರಾದರ್ ತಿಳಿಸಿದ್ದಾರೆ.
-3ವೈಡಿಆರ್7 : ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಫಲಾನುಭವಿಗಳಿಗೆ ವಿತರಿಸಲಾಗುವ ಅಕ್ಕಿಯನ್ನು ಅಕ್ರಮವಾಗಿ ಕಳ್ಳಸಂತೆಯಲ್ಲಿ ಸಾಗಿಸಲು ಯತ್ನಿಸುತ್ತಿದ್ದ ವಾಹನವನ್ನು ಆಹಾರ ಇಲಾಖೆ ಹಾಗೂ ಪೋಲೀಸ್ ಇಲಾಖೆಯ ಸಿಬ್ಬಂದಿಗಳು ಜಂಟಿ ದಾಳಿ ನಡೆಸಿ ಜಪ್ತಿ ಮಾಡಿಕೊಂಡಿದ್ದಾರೆ.