ಬಾಗಲಕೋಟೆ ಜಿಲ್ಲೆಯಲ್ಲಿ 2025-26ನೇ ಸಾಲಿನ ಏಪ್ರಿಲ್‌ನಿಂದ ಇಲ್ಲಿಯವರೆಗೆ 27 ಪ್ರಕರಣ ದಾಖಲಿಸಿ 1200.74 ಕ್ವಿಂಟಾಲ್ ಅಕ್ಕಿ ಹಾಗೂ 15 ವಾಹನ ಜಪ್ತಿ ಮಾಡಿ 46 ಜನ ಆರೋಪಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯಲ್ಲಿ 2025-26ನೇ ಸಾಲಿನ ಏಪ್ರೀಲ್ ದಿಂದ ಇಲ್ಲಿಯವರೆಗೆ 27 ಪ್ರಕರಣ ದಾಖಲಿಸಿ 1200.74 ಕ್ವಿಂಟಾಲ್ ಅಕ್ಕಿ ಹಾಗೂ 15 ವಾಹನ ಜಪ್ತಿ ಮಾಡಿ 46 ಜನ ಆರೋಪಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.2024-25ನೇ ಸಾಲಿನಲ್ಲಿ ಅನಧಿಕೃತವಾಗಿ ಪಡಿತರ ಅಕ್ಕಿ ಸಾಗಾಣಿಕೆ ಹಾಗೂ ದಾಸ್ತಾನು ಮಾಡಿದವರ ಮೇಲೆ ಅವಶ್ಯಕ ವಸ್ತುಗಳ ಕಾಯ್ದೆಯಡಿ 16 ಪ್ರಕರಣ ದಾಖಲಿಸಿ, 1020.32 ಕ್ವಿಂಟಾಲ್ ಅಕ್ಕಿ ಹಾಗೂ 12 ವಾಹನ ಜಪ್ತಿ ಮಾಡಿ 26 ಜನ ಆರೋಪಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.ಪಡಿತರ ಧಾನ್ಯಗಳ ಮಾರಾಟ ಮತ್ತು ಖರೀದಿ ಕುರಿತು ದೂರುಗಳಿದ್ದಲ್ಲಿ ಪೊಲೀಸ್ ಇಲಾಖೆಯ ಸಹಾಯವಾಣಿ ಸಂ:112, ಮೊಬೈಲ್ ಸಂ: 9480803900 ಹಾಗೂ ಆಹಾರ ಇಲಾಖೆಯ ಸಹಾಯವಾಣಿ ಸಂ:1967 ಮೊನಂ. 9448992015 ಹಾಗೂ ದೂ.ಸಂ. 08354-235094ಗೆ ಕರೆ ಮಾಡಿ ದೂರು ಸಲ್ಲಿಸಬಹುದು. ಇಲ್ಲವೇ ಸಂಬಂಧಿಸಿದ ತಾಲೂಕಿನ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ, ದೂರು ಸಲ್ಲಿಸಬಹುದು. ದೂರು ನೀಡಿದವರ ಮಾಹಿತಿ ಗುಪ್ತವಾಗಿಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕಠಿಣ ಕ್ರಮ: ಪಡಿತರ ಚೀಟಿದಾರ, ಸದಸ್ಯರು ತಮಗೆ ಹಂಚಿಕೆಯಾದ ಆಹಾರಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡುಬಂದಲ್ಲಿ 6 ತಿಂಗಳ ಅವಧಿಗೆ ಪಡಿತರ ಚೀಟಿ ಅಮಾನತುಪಡಿಸುವುದು ಮತ್ತು ಮುಕ್ತ ಮಾರುಕಟ್ಟೆಯ ದರದಂತೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.