ಪಡಿತರ ಅಕ್ರಮ ದಾಸ್ತಾನು: ಪ್ರಕರಣ ದಾಖಲು

| Published : Jul 27 2025, 12:00 AM IST

ಸಾರಾಂಶ

ಅಕ್ರಮವಾಗಿ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಶಿರಸ್ತೆದಾರ್ ಶಿವರಾಜು ಗ್ರಾಮಾಂತರ ಪೊಲೀಸರ ಜತೆಗೂಡಿ ದಾಳಿ ನಡೆಸಿದರು.

ಚನ್ನಪಟ್ಟಣ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ರಟ್ಟಿನ ಫ್ಯಾಕ್ಟರಿ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ಜತೆಗೂಡಿ ದಾಳಿ ನಡೆಸಿದ ಗ್ರಾಮಾಂತರ ಪೊಲೀಸರು 22 ಚೀಲ ರಾಗಿ ಹಾಗೂ 8 ಚೀಲ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.ತಾಲೂಕಿನ ವಂದಾರಗುಪ್ಪೆ ಬಳಿಯ ಯಲಚಿಪಾಳ್ಯ ರಸ್ತೆಯಲ್ಲಿರುವ ರಟ್ಟಿನ ಫ್ಯಾಕ್ಟರಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಶಿರಸ್ತೆದಾರ್ ಶಿವರಾಜು ಗ್ರಾಮಾಂತರ ಪೊಲೀಸರ ಜತೆಗೂಡಿ ದಾಳಿ ನಡೆಸಿದರು. ಈ ವೇಳೆ 8 ಚೀಲಗಳಲ್ಲಿ ತುಂಬಿದ್ದ 7,766 ರು. ಮೌಲ್ಯದ 353 ಕೆ.ಜಿ. ಅಕ್ಕಿ ಹಾಗೂ 22 ಚೀಲಗಳಲ್ಲಿ ಶೇಖರಿಸಿದ್ದ 23,652 ರು. ಮೌಲ್ಯದ 561 ಕೆ.ಜಿ.ರಾಗಿಯನ್ನು ವಶಕ್ಕೆ ಪಡೆಯಲಾಗಿದೆ. ಹಣ ಮಾಡುವ ಉದ್ದೇಶಕ್ಕೆ ಪಡಿತರವನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಮುಜಾಯಿದ್ ಮೇಲೆ ಪ್ರಕರಣ ದಾಖಲಿಸಲಾಗಿದೆ.