ಆನಂದಪುರಹೆಬ್ಬೋಡಿ ಗ್ರಾಮದ ಬೂತನ ಕಟ್ಟೆ ರಸ್ತೆಯಲ್ಲಿ ಅಶೋಕ್ ಲೈಲ್ಯಾಂಡ್ ಲಗೇಜ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು 2 ಹೋರಿ, 2 ಆಕಳು, ವಾಹನ ಹಾಗೂ ಆರೋಪಿಗಳನ್ನು ವಶಪಡಿಸಿಕೊಂಡ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಮಾಂಸ ಮಾರಾಟದ ಉದ್ದೇಶದಿಂದ ಸಾಗಾಟ
ಕನ್ನಡಪ್ರಭ ವಾರ್ತೆ ಆನಂದಪುರಹೆಬ್ಬೋಡಿ ಗ್ರಾಮದ ಬೂತನ ಕಟ್ಟೆ ರಸ್ತೆಯಲ್ಲಿ ಅಶೋಕ್ ಲೈಲ್ಯಾಂಡ್ ಲಗೇಜ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು 2 ಹೋರಿ, 2 ಆಕಳು, ವಾಹನ ಹಾಗೂ ಆರೋಪಿಗಳನ್ನು ವಶಪಡಿಸಿಕೊಂಡ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಸರ್ಕಾರದ ಯಾವುದೇ ವರವಾನಿಗೆ ಇಲ್ಲದೆ ಹೆಬ್ಬೋಡಿ ಗ್ರಾಮದ ರೈತನಿಗೆ ಸುಮರು ₹ 29.500 ಹಣ ನೀಡಿ ಖರೀದಿ ಮಾಡಿದ ಆರೋಪಿಗಳು ಜಾನುವಾರುಗಳನ್ನು ಕಡಿದು ಮಾಂಸ ಮಾರಾಟದ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.ಸರ್ಕಾರದ ಯಾವುದೇ ಪರವಾನಿಗೆ ಪಡೆಯದೆ ಹಿಂಸಾತ್ಮಕವಾಗಿ ತುಂಬಿಕೊಂಡು ಅಶೋಕ್ ಲೈಲ್ಯಾಂಡ್ ಲಗೇಜ್ ವಾಹನ ದಲ್ಲಿ ಸಾಗಾಣಿಕೆ ಮಾಡುತ್ತಿದ್ದ 2 ಹೋರಿ, 2 ಆಕಳು ಸಮೇತ ಶಿಕಾರಿಪುರ ತಾಲೂಕಿನ ದಿಂಡದಹಳ್ಳಿ ಗ್ರಾಮದ ಬಸವಣ್ಣಪ್ಪ, ಚಾಲಕ ಜಗದೀಶ್ ಇಬ್ಬರನ್ನು ವಶಪಡಿಸಿಕೊಂಡು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
---ಫೋಟೋ 19 ಎ, ಎನ್, ಪಿ 1
ಆನಂದಪುರ ಸಮೀಪ ಹೆಬ್ಬೋಡಿ ಗ್ರಾಮದಲ್ಲಿ ಅಕ್ರಮ ವಾಗಿ ಜಾನುವಾರುಗಳನ್ನು ವಾಹನದಲ್ಲಿ ಸಾಗಾಟ ಮಾಡುತ್ತಿರುವ ಸಂದರ್ಭದಲ್ಲಿ ಆನಂದಪುರ ಪೊಲೀಸರು ವಾಹನ ಸಹಿತ ಇಬ್ಬರನ್ನು ಬಂಧಿಸಲಾಗಿದೆ.