ಸಾರಾಂಶ
ಗಂಗಾವತಿಯಿಂದಲೇ ದುಬೈಗೆ ಅಕ್ಕಿ ಅಕ್ರಮ ಸಾಗಾಣಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ್ದ ತಹಸೀಲ್ದಾರ್ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಉಗ್ರಾಣ ವ್ಯವಸ್ಥಾಪಕ ಸೋಮಶೇಖರ ಮೇಲೆ ಪ್ರಕರಣ ದಾಖಲಿಸಿದ್ದರಿಂದ ಅಮಾನತುಗೊಂಡಿದ್ದರು.
ಗಂಗಾವತಿ:
ಒಂದು ವಾರದ ಹಿಂದೆ ಆಹಾರ ಇಲಾಖೆಯ ಸರ್ಕಾರಿ ಉಗ್ರಾಣದಿಂದಲೇ ಅಕ್ಕಿ ದುಬೈಗೆ ಅಕ್ರಮ ಸಾಗಾಣಿಕೆ ಮಾಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರಾಣದ ಸಹಾಯಕ ಜುಬೇರಾ ಮತ್ತು ಗೌರಿಶಂಕರ ರೈಸ್ ಮಿಲ್, ಉಮಾಶಂಕರ ಅಗ್ರೋ ಫುಡ್ಸ್‌ನ ಉಮೇಶ ಸಿಂಗನಾಳ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಹೆಚ್ಚುವರಿಯಾಗಿ ದೂರು ಸಲ್ಲಿಸಿದ್ದಾರೆ.ಗಂಗಾವತಿಯಿಂದಲೇ ದುಬೈಗೆ ಅಕ್ಕಿ ಅಕ್ರಮ ಸಾಗಾಣಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ್ದ ತಹಸೀಲ್ದಾರ್ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಉಗ್ರಾಣ ವ್ಯವಸ್ಥಾಪಕ ಸೋಮಶೇಖರ ಮೇಲೆ ಪ್ರಕರಣ ದಾಖಲಿಸಿದ್ದರಿಂದ ಅಮಾನತುಗೊಂಡಿದ್ದರು. ಅಲ್ಲದೇ ಅಕ್ಕಿ ಸಾಗಾಣಿಕೆಯ ಪ್ರಮುಖರ ಮೇಲೆ ಪ್ರಕರಣ ದಾಖಲಿಸದೆ ಉಮಾಶಂಕರ ಅಗ್ರೋ ಫುಡ್ಸ್ ಎನ್ನುವ ಹೆಸರು ಪ್ರಸ್ತಾಪ ಮಾಡಿದ್ದರು. ತನಿಖೆ ಚುರುಕುಗೊಳ್ಳುತ್ತಿದ್ದಂತೆಯೇ ಅಧಿಕಾರಿಗಳು ಉಗ್ರಾಣದ ಸಹಾಯಕ ಜುಬೇರಾ ಮತ್ತು ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರೂ ಆಗಿರುವ ಉಮೇಶ ಸಿಂಗನಾಳ ಅವರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಗರಣದ ಬಗ್ಗೆ ತನಿಖೆ ಮುಂದುವರಿದಿದ್ದು, ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಹಾರ ಇಲಾಖೆಯ ಡಿಪ್ಯೂಟಿ ಡೈರೆಕ್ಟರ್ ಸಿದ್ದರಾಮೇಶ್ ತಿಳಿಸಿದ್ದಾರೆ.