ಆರು ಜಾನುವಾರು ಅಕ್ರಮ ಸಾಗಣೆ: ಆರೋಪಿಗಳ ಬಂಧನ

| Published : Jan 13 2025, 12:46 AM IST

ಸಾರಾಂಶ

ಅಕ್ರಮವಾಗಿ ಸಾಗಿಸುತ್ತಿದ್ದ ೬ ಜಾನುವಾರು ರಕ್ಷಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ತಾಲೂಕಿನ ಬೇಗೂರು-ಸೋಮಹಳ್ಳಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಅಕ್ರಮವಾಗಿ ಸಾಗಿಸುತ್ತಿದ್ದ ೬ ಜಾನುವಾರು ರಕ್ಷಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ತಾಲೂಕಿನ ಬೇಗೂರು-ಸೋಮಹಳ್ಳಿಯಲ್ಲಿ ನಡೆದಿದೆ.

ಚಾಮರಾಜನಗರದ ನಿವಾಸಿಗಳಾದ ರಸೀದ್‌, ಉಬೇದ್ ಬಂಧಿತ ಆರೋಪಿಗಳು. ಜಾನುವಾರು ಸಾಗಾಣಿಕೆಯಾಗುವ ಮಾಹಿತಿ ಮೇರೆಗೆ ಸೋಮಹಳ್ಳಿ-ಬೇಗೂರು ರಸ್ತೆಯಲ್ಲಿ ಪೊಲೀಸರು ಕಾದು ನಿಂತಾಗ ಕೆಎ೦೬ ಎಬಿ ೧೭೧೦ ನಂಬರಿನ ಗೂಡ್ಸ್‌ ಆಟೋ ತಡೆದು ತಪಾಸಣೆ ನಡೆಸಿದಾಗ ಐದು ಹಸು ಹಾಗು ಒಂದು ಹಸುವಿನ ಕರು ಪತ್ತೆಯಾಗಿದ್ದು, ಈ ಹಿನ್ನೆಲೆ ಜಾನುವಾರು ಸೇರಿದಂತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಸಿದ್ದತೆ ನಡೆಸಿದ್ದಾರೆ. ರಕ್ಷಿಸಿದ ಆರು ಜಾನುವಾರುಗಳನ್ನು ಮೈಸೂರು ಪಿಂಜರಾ ಪೋಲ್‌ ಅಥವಾ ತಾಲೂಕಿನ ಬರಗಿ ಫಾರಂಗೆ ಬಿಡಲು ಪೊಲೀಸರು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಅಕ್ರಮ ಜಾನುವಾರು ಸಾಗಾಣಿಕೆ ಇನ್ನೂ ಜೀವಂತ?: ಗೋಹತ್ಯೆ ನಿಷೇಧ ರಾಜ್ಯದಲ್ಲಿ ಜಾರಿಯಲ್ಲಿದ್ದರೂ ಕಸಾಯಿ ಖಾನೆಗೆ ಅನುಮತಿ ಇಲ್ಲದೆ ಜಾನುವಾರುಗಳ ಸಾಗಿಸುವ ದಂಧೆ ಇನ್ನೂ ಜೀವಂತವಾಗಿರುವುದಕ್ಕೆ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣವಾಗಿದೆ. ಬೇಗೂರು ಸರ್ಕಲ್‌ ನ ತೆರಕಣಾಂಬಿ ಠಾಣಾ ವ್ಯಾಫ್ತಿಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ತಮಿಳುನಾಡಿಗೆ ಸಾಗಾಣಿಕೆ ಆಗುತ್ತಿದೆ ಎಂಬ ಸಾರ್ವಜನಿಕರ ಆರೋಪಕ್ಕೆ ಜಾನುವಾರುಗಳ ರಕ್ಷಣೆ ಪುಷ್ಠಿ ನೀಡಿದಂತಾಗಿದೆ.