ಡಿಸಿಸಿ ಬ್ಯಾಂಕ್‌ ಚುನಾವಣೇಲಿ ಅಕ್ರಮ: ಮರು ಎಣಿಕೆಗೆ ಹೊನಗೋಡು ಆಗ್ರಹ

| Published : Jul 03 2024, 12:21 AM IST / Updated: Jul 03 2024, 12:22 AM IST

ಡಿಸಿಸಿ ಬ್ಯಾಂಕ್‌ ಚುನಾವಣೇಲಿ ಅಕ್ರಮ: ಮರು ಎಣಿಕೆಗೆ ಹೊನಗೋಡು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ನನ್ನ ವಿರುದ್ಧ ಜಯ ಗಳಿಸಿದ ಕ್ಷೇತ್ರದ ಶಾಸಕ 14 ಮತಗಳನ್ನು ಪಡೆದಿದ್ದಾರೆ. ಇದರಲ್ಲಿ 3 ಮತಗಳು ಅಕ್ರಮ ಮತವಾಗಿ ರುವುದು ಕಂಡು ಬಂದಿದೆ ಎಂದು ರತ್ನಾಕರ ಹೊನಗೋಡು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಆನಂದಪುರ

ಸಹಕಾರಿ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಅಕ್ರಮ ಮತದಾನ ನಡೆದಿದ್ದು, ನಿರ್ದೇಶಕರ ಆಯ್ಕೆ ರದ್ದು ಮಾಡುವಂತೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರತ್ನಾಕರ ಹೊನಗೋಡು ಆಗ್ರಹಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ವಾರ ನಡೆದ ಶಿವಮೊಗ್ಗ ಜಿಲ್ಲಾ ಸಹಕಾರಿ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಅಕ್ರಮ ಮತದಾನ ನಡೆ ದಿದೆ. ಸಹಕಾರಿ ಸಂಘಗಳನ್ನು ಕಟ್ಟಿ ಬೆಳೆಸಿದಂತಹ ವ್ಯಕ್ತಿಗಳು ಸ್ಪರ್ಧೆಯಲ್ಲಿ ಭಾಗವಹಿಸಬೇಕಿತ್ತು. ಆದರೆ. ಮಾಲ್ವಿಯ ಸಹಕಾರಿ ಸಂಘದ ನಿರ್ದೇಶಕರು ಒಬ್ಬರಿಗೆ ರಾಜೀನಾಮೆ ಕೊಡಿಸಿ ಸದಸ್ಯತ್ವವನ್ನು ಪಡೆದ ಶಾಸಕ ಗೋಪಾಲಕೃಷ್ಣ ಬೇಳೂರು ಸಹಕಾರಿ ಸಂಘದ ನಿರ್ದೇಶಕರ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ ಎಂದು ದೂರಿದರು.

ಚುನಾವಣೆಯಲ್ಲಿ ನನಗೆ 13 ಮತಗಳು ಬಂದಿದ್ದು, ನನ್ನ ವಿರುದ್ಧ ಜಯ ಗಳಿಸಿದ ಕ್ಷೇತ್ರದ ಶಾಸಕ 14 ಮತಗಳನ್ನು ಪಡೆದಿದ್ದಾರೆ. ಇದರಲ್ಲಿ 3 ಮತಗಳು ಅಕ್ರಮ ಮತವಾಗಿ ರುವುದು ಕಂಡು ಬಂದಿದೆ. ಮತ ಎಣಿಕೆಯ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದರೂ ಅಧಿಕಾರದ ದರ್ಪದಲ್ಲಿ ವಿರೋಧವನ್ನು ಲೆಕ್ಕಿಸದೆ ಫಲಿತಾಂಶ ಪ್ರಕಟಿಸಿದ್ದರು ಎಂದು ಆರೋಪಿಸಿದರು.

ಮತದಾನದ ಸಮಯದಲ್ಲಿ 3 ಮತಗಳು ಅಕ್ರಮ ಮತವಾಗಿದ್ದು, ಚುನಾವಣೆ ಅಧಿಕಾರಿಗಳು ಈ ಮತಗಳನ್ನು ಅಕ್ರಮ ಮತವೆಂದು ಪರಿಗಣಿಸಿ, ನಿರ್ದೇಶಕರ ಸ್ಥಾನವನ್ನು ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಭರ್ಮಪ್ಪ, ಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಕುಮಾರ್, ರೇವಪ್ಪ ಹೊಸಕೊಪ್ಪ ಇದ್ದರು.