ಸಾರಾಂಶ
ಲಿಯೊ ಸುಮಾರು 380 ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಕೊಡಗಿನಲ್ಲಿ ಸಂಭವಿಸಿದ ಭೂ ಕುಸಿತ ಸಂದರ್ಭ ನಾಲ್ಕು ಮೃತ ದೇಹ ಪತ್ತೆ ಹಚ್ಚಿತ್ತು. ಕರ್ತವ್ಯ ಪರತೆಗೆ ಐದು ಪದಕ ಕೂಡ ಪಡೆದುಕೊಂಡಿತ್ತು.
ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡಗು ಜಿಲ್ಲಾ ಪೊಲೀಸ್ ಶ್ವಾನದಳದಲ್ಲಿ 11 ವರ್ಷ ಸೇವೆ ಸಲ್ಲಿಸಿದ್ದ ಗಂಡು ಶ್ವಾನ ಲಿಯೊ ಕೆಲ ದಿನಗಳ ಅನಾರೋಗ್ಯದಿಂದ ಮೃತಪಟ್ಟಿದೆ.
ಲಿಯೊ ಸುಮಾರು 380 ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಕೊಡಗಿನಲ್ಲಿ ಸಂಭವಿಸಿದ ಭೂ ಕುಸಿತ ಸಂದರ್ಭ ನಾಲ್ಕು ಮೃತ ದೇಹ ಪತ್ತೆ ಹಚ್ಚಿತ್ತು. ಕರ್ತವ್ಯ ಪರತೆಗೆ ಐದು ಪದಕ ಕೂಡ ಪಡೆದುಕೊಂಡಿತ್ತು. ಶ್ವಾನದಳ ಸಿಬ್ಬಂದಿ ಮನಮೋಹನ್ ಗರಡಿಯಲ್ಲಿ ಲಿಯೊ ಪಳಗಿತ್ತು. ಲಿಯೊ ಅಗಲಿಕೆಗೆ ಪೊಲೀಸ್ ಇಲಾಖೆ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ. ನಗರದ ಡಿಆರ್ ಪೊಲೀಸ್ ಆವರಣದಲ್ಲಿ ಗುರುವಾರ ಅಂತ್ಯಕ್ರಿಯೆ ನಡೆಯಿತು.