ಸಾರಾಂಶ
ಮನುಷ್ಯನ ದೇಹದಲ್ಲಿ ಆರೋಗ್ಯ ಸಮಸ್ಯೆ ಹಾಗೂ ಹೃದಯಾಘಾತ ಹೆಚ್ಚಾಗಲು ಆಹಾರ ಪದ್ದತಿಯೇ ಕಾರಣವಲ್ಲ. ಯಾಕೆಂದರೆ ನಿತ್ಯ ವ್ಯಾಯಾಮ ಮಾಡುವ, ನಿಯಮಿತವಾದ ಸಾತ್ವಿಕ ಆಹಾರವನ್ನೇ ಸೇವಿಸುವವರಿಗೂ ಹೃದಯಾಘಾತವಾಗಿದೆ. ಹೃದಯಾಘಾತಕ್ಕೆ ಮಾನಸಿಕ ಸ್ಥಿತಿ, ದ್ವೇಷ, ಅಹಂಕಾರ, ಅಸೂಯೆಯೂ ಕಾರಣವಾಗಿದೆ ಎಂದು ತಜ್ಞ ವೈದ್ಯರಾದ ವಿವೇಕ ಜಾಗೃತಿ ಬಳಗದ ಡಾ. ಮಾಧವ ಪೈ ತಿಳಿಸಿದರು. ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತಮ ಪಡಿಸಿಕೊಂಡು ಸದಾ ಸಕಾರಾತ್ಮಕ ಚಿಂತನೆಗಳಿಂದ ಮಾತ್ರ ಬದುಕಿರುವವರೆಗೂ ಆರೋಗ್ಯದಿಂದ ಇರಬಹುದು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಮನುಷ್ಯನ ದೇಹದಲ್ಲಿ ಆರೋಗ್ಯ ಸಮಸ್ಯೆ ಹಾಗೂ ಹೃದಯಾಘಾತ ಹೆಚ್ಚಾಗಲು ಆಹಾರ ಪದ್ದತಿಯೇ ಕಾರಣವಲ್ಲ. ಯಾಕೆಂದರೆ ನಿತ್ಯ ವ್ಯಾಯಾಮ ಮಾಡುವ, ನಿಯಮಿತವಾದ ಸಾತ್ವಿಕ ಆಹಾರವನ್ನೇ ಸೇವಿಸುವವರಿಗೂ ಹೃದಯಾಘಾತವಾಗಿದೆ. ಹೃದಯಾಘಾತಕ್ಕೆ ಮಾನಸಿಕ ಸ್ಥಿತಿ, ದ್ವೇಷ, ಅಹಂಕಾರ, ಅಸೂಯೆಯೂ ಕಾರಣವಾಗಿದೆ ಎಂದು ತಜ್ಞ ವೈದ್ಯರಾದ ವಿವೇಕ ಜಾಗೃತಿ ಬಳಗದ ಡಾ. ಮಾಧವ ಪೈ ತಿಳಿಸಿದರು.ಪಟ್ಟಣದ ದೇವಾಂಗ ಬಡಾವಣೆಯ ರಾಮಮಂದಿರದ ದೇವಾಂಗ ಭವನದಲ್ಲಿ ವಿವೇಕ ಜಾಗೃತ ಬಳಗ ಆಯೋಜಿಸಿದ್ದ ಯೋಗಾರೋಗ್ಯ ಆಧ್ಯಾತ್ಮದೊಂದಿಗೆ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯ ಸಿಟ್ಟಾಗಿದ್ದಾಗ ರಕ್ತದೊತ್ತಡ ಹೆಚ್ಚಾಗುವಂತೆ ರಾಗ, ದ್ವೇಷ, ಅಸೂಯೆ ಹಾಗೂ ಅಹಂಕಾರಗಳಿಂದ ದೇಹದೊಳಗಿನ ರಾಸಾಯನಿಕ ಕ್ರಿಯೆಗಳ ಏರುಪೇರುನಿಂದಲೂ ಹೃದಯಾಘಾತ ಆಗುವ ಅಪಾಯವಿದೆ. ಆದ್ದರಿಂದ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತಮ ಪಡಿಸಿಕೊಂಡು ಸದಾ ಸಕಾರಾತ್ಮಕ ಚಿಂತನೆಗಳಿಂದ ಮಾತ್ರ ಬದುಕಿರುವವರೆಗೂ ಆರೋಗ್ಯದಿಂದ ಇರಬಹುದು.
ಉಡುಪಿ ಜಿಲ್ಲೆ ಕೋಟಾದಲ್ಲಿರುವ ಸರ್ವಕ್ಷೇಮ ಆಸ್ಪತ್ರೆಯಲ್ಲಿ ಆಧ್ಯಾತ್ಮಿಕದೊಂದಿಗೆ ಆ ರೋಗ್ಯ ಚಿಕಿತ್ಸೆ, ಯೋಗ ವಿಜ್ಞಾನ, ಆಯುರ್ವೇದ, ಪ್ರಕೃತಿ ಚಿಕಿತ್ಸೆಗಳನ್ನು ನೀಡುತ್ತಿದ್ದು, ಒಮ್ಮೆ ಅಲ್ಲಿಗೆ ಭೇಟಿ ನೀಡಿ ಅಲ್ಲಿನ ವಾತಾವರಣ ನೋಡಿಬನ್ನಿ. ಅಲ್ಲಿ ಮಾನಸಿಕ, ದೈಹಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ತಜ್ಞರಿದ್ದು, ಆ ಕೇಂದ್ರ ಮೂರು ವರ್ಷಗಳ ಹಿಂದೆ ಪ್ರಾರಂಭವಾಗಿದ್ದು, ಇದುವರೆಗೂ೧೫ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸೇವಾ ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದರು. ವಿವೇಕ ಜಾಗೃತಿ ಬಳಗದ ಶ್ವೇತಾ ಕೃಷ್ಣಕಾಂತ್ ಸ್ವಾಗತಿಸಿದರು, ರೂಪಾ ಯೋಗಾನಂದ ವಂದಿಸಿದರು ಹಾಗೂ ಬಳಗದ ವಿಜಯಾ ವೇದಿಕೆಯಲ್ಲಿದ್ದರು.