ಡಾ.ಹುನಗುಂಟಿಗೆ ಐಎಂಎ ರಾಜ್ಯ ಪ್ರಶಸ್ತಿ

| Published : Jul 02 2024, 01:34 AM IST

ಸಾರಾಂಶ

ಯಾದಗಿರಿಯ ಡಾ.ಜಿ.ಡಿ. ಹುನಗುಂಟಿ ಅವರಿಗೆ ಐಎಂಎ ರಾಜ್ಯ ಪ್ರಶಸ್ತಿ-24 ಪ್ರದಾನ ಮಾಡಲಾಯಿತು

ಸಚಿವ ಎಚ್‌.ಕೆ. ಪಾಟೀಲ್‌ ಪ್ರಶಸ್ತಿ ಪ್ರದಾನಕನ್ನಡಪ್ರಭ ವಾರ್ತೆ ಯಾದಗಿರಿ

ಭಾರತೀಯ ವೈದ್ಯಕೀಯ ಸಂಘ (ಐಎಂಎ) ರಾಜ್ಯ ವೈದ್ಯರ ದಿನಾಚರಣೆ-2024 ರ ಪ್ರಶಸ್ತಿಯನ್ನು ನಗರದ ಖ್ಯಾತ ವೈದ್ಯ ಡಾ.ಜಿ.ಡಿ. (ಗುರುಬಸಪ್ಪ ದೊಡ್ಡನಗೌಡ) ಹುನಗುಂಟಿಯವರಿಗೆ ಬೆಂಗಳೂರಿನಲ್ಲಿ ಸೋಮವಾರ ಪ್ರದಾನ ಮಾಡಲಾಯಿತು.

ಬೆಂಗಳೂರು ನಗರದ ಕೆಆರ್ ರಸ್ತೆಯಲ್ಲಿರುವ ಬೆಂಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್) ಡಾ. ಬಸವರಾಜೇಂದ್ರ ಸಭಾಂಗಣದಲ್ಲಿ ಜರುಗಿದ ಭವ್ಯ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಸರ್ಕಾರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ಪ್ರಶಸ್ತಿಯನ್ನು ಡಾ. ಹುನಗುಂಟಿ ಅವರಿಗೆ ಪ್ರದಾನ ಮಾಡಿದರು.

ವೈದ್ಯರಾಗಿ ಜೀವಮಾನದ ಸೇವೆ ಸಲ್ಲಿಸಿ ಅಮೂಲ್ಯ ಕೊಡುಗೆ ನೀಡಿದ ಸಾಧಕ ವೈದ್ಯರಿಗೆ ಪ್ರತಿ ವರ್ಷ ಐಎಂಎ ಪ್ರಶಸ್ತಿ ನೀಡಲಾಗುತ್ತಿದ್ದು ಪ್ರಸಕ್ತ ಸಾಲಿನಲ್ಲಿ ಯಾದಗಿರಿಗೆ ಡಾ.ಜಿ.ಡಿ. ಹೊನಗುಂಟಿ ಅವರ ಮೂಲಕ ಪ್ರಶಸ್ತಿ ಬಂದಂದೆ. ಈ ವೇಳೆ ಐಎಂಎ ರಾಜ್ಯಾಧ್ಯಕ್ಷ ಪ್ರೊ. ಡಾ.ಶ್ರೀನಿವಾಸ ಎಸ್, ಸೇರಿದಂತೆ ಭಾರತೀಯ ವೈದ್ಯರ ಸಂಘ (ಐಎಂಎ) ಪದಾಧಿಕಾರಿಗಳು ಇದ್ದರು.