- ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ- ಮೈಸೂರು ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಕ್ಯಾಲೆಂಡರ್ ಬಿಡುಗಡೆ
- ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
- ಮೈಸೂರು ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಕ್ಯಾಲೆಂಡರ್ ಬಿಡುಗಡೆಕನ್ನಡಪ್ರಭ ವಾರ್ತೆ ಮೈಸೂರುಪತ್ರಿಕಾ ಛಾಯಾಗ್ರಾಹಕರು ತೆಗೆಯುವ ಚಿತ್ರಗಳು ಜನರ ಮನಸ್ಸು ಬದಲಿಸುವಲ್ಲಿ ಪ್ರಭಾವಶಾಲಿ ಆಗಿವೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಮೈಸೂರು ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ 2024ನೇ ಸಾಲಿನ ವರ್ಣರಂಜಿತ ಕ್ಯಾಲೆಂಡರ್ ಅನ್ನು ಸೋಮವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಮಾಜಮುಖಿ ಆಲೋಚನೆಯೊಂದಿಗೆ ಚಿತ್ರ ತೆಗೆಯಲಾಗುತ್ತದೆ ಎಂದರು.ಅಸಾಧಾರಣ ಶಕ್ತಿಯ ಮೂಲಕ ವಿಷಯ, ಸಮಸ್ಯೆ ಗುರುತಿಸಿ, ಚಿತ್ರಗಳ ಮೂಲಕವೇ ಪರಿವರ್ತನೆ ತರಲು ಶ್ರಮಿಸುವುದು ಶ್ಲಾಘನಿಯ. ಕ್ಯಾಲೆಂಡರ್ ನಲ್ಲಿನ ಛಾಯಾಚಿತ್ರಗಳು ಉತ್ತಮವಾಗಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಎಸ್. ತಿಪ್ಪೇಸ್ವಾಮಿ ಮತ್ತು ಹಿರಿಯ ಪತ್ರಕರ್ತ ಬಿ.ಎಸ್. ಪ್ರಭುರಾಜನ್ ಅವರನ್ನು ಅಭಿನಂದಿಸಲಾಯಿತು.ಮತ್ತೊಂದು ದಿನಚರಿಯನ್ನು ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಬಿಡುಗಡೆಗೊಳಿಸಿದರು. ವಿಧಾನಪರಿಷತ್ತು ಸದಸ್ಯ ಡಾ.ಡಿ. ತಿಮ್ಮಯ್ಯ, ಲಾ ಗೈಡ್ ಗೌರವ ಸಂಪಾಕ ಎಚ್.ಎನ್. ವೆಂಕಟೇಶ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಮೈಸೂರು ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಪ್ರಗತಿ ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಎಂ.ಎನ್. ಲಕ್ಷ್ಮಿನಾರಾಯಣ ಯಾದವ್, ಉಪಾಧ್ಯಕ್ಷ ಎಸ್.ಆರ್. ಮಧುಸೂದನ್, ಖಜಾಂಚಿ ಎ. ನಂದನ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಚ್. ಚಂದ್ರು, ಎಸ್. ಉದಯಶಂಕರ್, ಹಂಪಾ ನಾಗರಾಜು, ಟಿ. ಅನೂಪ್ ರಾಘ, ಸದಸ್ಯರಾದ ಅನುರಾಗ್ ಬಸವರಾಜ್, ಶ್ರೀರಾಮ, ಎ. ಕೃಷ್ಣೋಜಿರಾವ್, ಗವಿಮಠ ರವಿ, ನಾಗೇಶ್ ಪಾಣತ್ತಲೆ ಇದ್ದರು.