ಸಾರಾಂಶ
ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಲಲಿತ ಕಲಾ ಸಂಘದ ಆಶ್ರಯದಲ್ಲಿ ‘ಗಣೇಶ ಉತ್ಸವ-2ಕೆ25’ ಅಂಗವಾಗಿ ಕುಣಿತ ಭಜನೆ ಕಾರ್ಯಕ್ರಮವು ಭಕ್ತಿ, ಸೃಜನಶೀಲತೆ ಮತ್ತು ಸಾಂಸ್ಕೃತಿಕ ವೈಭವದಿಂದ ಜರುಗಿತು.
ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಲಲಿತ ಕಲಾ ಸಂಘದ ಆಶ್ರಯದಲ್ಲಿ ‘ಗಣೇಶ ಉತ್ಸವ-2ಕೆ25’ ಅಂಗವಾಗಿ ಕುಣಿತ ಭಜನೆ ಕಾರ್ಯಕ್ರಮವು ಭಕ್ತಿ, ಸೃಜನಶೀಲತೆ ಮತ್ತು ಸಾಂಸ್ಕೃತಿಕ ವೈಭವದಿಂದ ಜರುಗಿತು.ಗಣೇಶ ಉತ್ಸವದ ಮೂರನೇ ದಿನದಂದು ವಿದ್ಯಾರ್ಥಿಗಳೇ ಅಲಂಕರಿಸಿದ ವಿಶಿಷ್ಟ ವೇದಿಕೆಯಲ್ಲಿ ಈ ಕುಣಿತ ಭಜನಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಪ್ರಾರಂಭಿಸಲಾಯಿತು.
ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಭಜನೆ ಹಾಗೂ ಶ್ಲೋಕಗಳ ಗಾಯನದ ಮೂಲಕ ಕುಣಿತ ಭಜನೆಯ ಪ್ರದರ್ಶನ ನಡೆಸಲಾಯಿತು. ನಂತರ ಚಂಡೆಯ ವಾದನ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಗಣೇಶನ ವಿಸರ್ಜನಾ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರು, ಬ್ರ್ಯಾಂಡ್ ಬಿಲ್ಡಿಂಗ್ ಡೈರೆಕ್ಟರ್, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಲಲಿತಕಲಾ ಸಂಘದ ಸಂಯೋಜಕರು ಹಾಗೂ ವಿದ್ಯಾರ್ಥಿ ಸಂಯೋಜಕರು, ಸಂಸ್ಥೆಯ ಪ್ರಾಧ್ಯಾಪಕ ವೃಂದದವರು, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತೃತೀಯ ಬಿಸಿಎ ವಿದ್ಯಾರ್ಥಿನಿ ಕು. ಸನ್ನಿಧಿ ಪಿ. ವೈ ನಿರೂಪಿಸಿದರು.