ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು (ಐಎಂಜೆಐಎಸ್‍ಸಿ)ನಲ್ಲಿ ಅಂಗಾಂಗ ದಾನ ದಿನ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಯೂತ್ ರೆಡ್ ಕ್ರಾಸ್ ಮತ್ತು ಸಮುದಾಯ ಸೇವಾ ಸಂಘದ ಜಂಟಿ ಆಶ್ರಯದಲ್ಲಿ ಡಿಜಿಟಲ್ ಪೋಸ್ಟರ್ ರಚನೆ ಮತ್ತು ಪ್ರದರ್ಶನ ಆಯೋಜಿಸಲಾಗಿತ್ತು.
ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು (ಐಎಂಜೆಐಎಸ್‍ಸಿ)ನಲ್ಲಿ ಅಂಗಾಂಗ ದಾನ ದಿನ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಯೂತ್ ರೆಡ್ ಕ್ರಾಸ್ ಮತ್ತು ಸಮುದಾಯ ಸೇವಾ ಸಂಘದ ಜಂಟಿ ಆಶ್ರಯದಲ್ಲಿ ಡಿಜಿಟಲ್ ಪೋಸ್ಟರ್ ರಚನೆ ಮತ್ತು ಪ್ರದರ್ಶನ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕಾಲೇಜಿನ ಒಟ್ಟು 30 ವಿದ್ಯಾರ್ಥಿಗಳು ಭಾಗವಹಿಸಿ, ಅಂಗ ದಾನದ ಮಹತ್ವ ಮತ್ತು ಜೀವ ಉಳಿಸುವಲ್ಲಿ ಅದರ ಪಾತ್ರವನ್ನು ಸಾರುವ ಸೃಜನಶೀಲ ಡಿಜಿಟಲ್ ಪೋಸ್ಟರ್ ಪ್ರದರ್ಶಿಸಿದರು. ಕಲೆ ಮತ್ತು ಸೃಜನಶೀಲತೆ ಮೂಲಕ ಈ ಮಹತ್ಕಾರ್ಯದ ಬಗ್ಗೆ ಜಾಗೃತಿ ಮೂಡಿಸಲು ಈ ಪ್ರದರ್ಶನ ವಿದ್ಯಾರ್ಥಿಗಳಿಗೆ ವೇದಿಕೆಯಾಯಿತು.ಯೂತ್ ರೆಡ್ ಕ್ರಾಸ್ ಸಂಘದ ಉಪನ್ಯಾಸಕ ಸಂಯೋಜಕಿಯರಾದ ಭಾರತಿ ಮತ್ತು ರಕ್ಷಿತಾ ಹಾಗೂ ಸಮುದಾಯ ಸೇವಾ ಸಂಘದ ಉಪನ್ಯಾಸಕ ಸಂಯೋಜಕಿಯರಾದ ಚೈತನ್ಯ ಮತ್ತು ಶ್ವೇತಾ ಅವರು ಮಾರ್ಗದರ್ಶನ ನೀಡಿದರು.