ಇಮ್ಮಡಿ ಫುಲಕೇಶಿ ಭಾವಚಿತ್ರ ನೀಡಿ ಬಿವೈವಿಗೆ ಅದ್ಧೂರಿ ಸ್ವಾಗತ

| Published : Jan 01 2024, 01:15 AM IST

ಇಮ್ಮಡಿ ಫುಲಕೇಶಿ ಭಾವಚಿತ್ರ ನೀಡಿ ಬಿವೈವಿಗೆ ಅದ್ಧೂರಿ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಬಾದಾಮಿಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ.

ಕನ್ನಡಪ್ರಭ ವಾರ್ತೆ ಬಾದಾಮಿ

ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಪ್ರಥಮ ಬಾರಿಗೆ ಬಾದಾಮಿಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ನಗರದ ಮುಖ್ಯರಸ್ತೆಗಳಲ್ಲಿ ಅಭಿಮಾನಿಗಳು ಹೂಮಳೆ ಸುರಿಸಿ ಅದ್ಧೂರಿ ಸ್ವಾಗತ ಕೋರಿದರು.

ಅಭಿಮಾನಿಗಳು ಹೂಗಳನ್ನು ಸುರಿಸಿ, ವಿಜಯೇಂದ್ರ ಪರ ಘೋಷಣೆಗಳನ್ನು ಕೂಗಿದರು. ನೂರಾರು ಅಭಿಮಾನಿಗಳು, ಕಾರ್ಯಕರ್ತರು ಆಗಮಿಸಿ ಸ್ವಾಗತಿಸಿ, ಸಂತಸ ವ್ಯಕ್ತಪಡಿಸಿದರು.

ವಿಜಯೇಂದ್ರಗೆ ಸನ್ಮಾನ:

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ತಾಲೂಕು ಬಿಜೆಪಿ ಘಟಕದ ವತಿಯಿಂದ ಶಾಲು ಹೊದಿಸಿ, ಚಾಲುಕ್ಯರ ಗುಹಾಲಯ ಭಾವಚಿತ್ರವಿರುವ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷವನ್ನು ಇನ್ನಷ್ಟು ಸಂಘಟಿಸಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ರಾಜ್ಯದಲ್ಲಿ 28 ಕ್ಕೆ 28 ಸ್ಥಾನ ಬಿಜೆಪಿ ಗೆಲ್ಲಿಸಿ, ಇನ್ನೊಂದು ಬಾರಿ ಮೋದಿಜಿ ಅವರನ್ನು ದೇಶದ ಪ್ರಧಾನಿ ಮಾಡೋಣ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ಪುರಸಭೆ ಸದಸ್ಯರಾದ ನಾಗರಾಜ ಕಾಚೆಟ್ಟಿ, ರೆಹಮಾನ ಕೆರಕಲಮಟ್ಟಿ, ಮುಖಂಡರಾದ ನಾಗರಾಜ ಕಡಗದ, ಮುತ್ತು ಉಳಾಗಡ್ಡಿ, ಶೇಖರಯ್ಯ ಹಿರೇಮಠ, ರಾಘು ದಯಾಪುಲೆ, ಬೇಲೂರಪ್ಪ ವಡ್ಡರ ಸೇರಿದಂತೆ ನೂರಾರು ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ಹಾಜರಿದ್ದರು.