ಸಾರಾಂಶ
ತಾಯಿಯ ಎದೆ ಹಾಲು ಮಗುವಿನ ದೈಹಿಕ ಆರೋಗ್ಯ ಬೆಳವಣಿಗೆಗೆ ಹೆಚ್ಚು ಶಕ್ತಿದಾಯಕ ಮತ್ತು ಹೆಚ್ಚು ಪರಿಣಾಮಕಾರಿ. ಮಾರಕ ರೋಗಗಳಿಗೆ ನೀಡುವಂತಹ ಚುಚ್ಚುಮದ್ದು ಲಿಸಿಕೆ ತಪ್ಪದೆ ಮಗುವಿಗೆ ಕೊಡಿಸಬೇಕು
ಗದಗ: ಮಕ್ಕಳಿಗೆ ಮಾರಕ ರೋಗ ಬರದಂತೆ ಮಕ್ಕಳ ಬೆಳವಣಿಗೆಗೆ ತಾಯಿಯ ಎದೆಹಾಲು ಅಮೃತ ಸಮಾನಾಗಿದೆ. ಅದು ರಕ್ಷಾ ಕವಚವಾಗಿದ್ದು ರೋಗ ನಿರೋಧಕ ಶಕ್ತಿ ಒಳಗೊಂಡಿದೆ ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಸಿದ್ದಪ್ಪ.ಎನ್. ಲಿಂಗದಾಳ ಹೇಳಿದರು.
ಅವರು ತಾಲೂಕಿನ ಅಡವಿಸೋಮಾಪುರ ಗ್ರಾಮದ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಐಎಪಿ ಸಹಯೋಗದೊಂದಿಗೆ ಗರ್ಭೀಣಿ, ಬಾಣಂತಿಯರಿಗೆ ಸ್ತನ್ಯಪಾನದ ಆ.1 ರಿಂದ 7ರವರೆಗೆ ನಡೆಯುವ ಸಪ್ತಾಹದ ಮಹತ್ವದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಾಂಗರೂ ವಿಧಾನ ಅನುಸರಿಸಿ ತಾಯಿ ಮಗು ರಕ್ಷಣೆ ಮಾಡಬೇಕು. ತಾಯಿಯ ಎದೆ ಹಾಲು ಮಗುವಿನ ದೈಹಿಕ ಆರೋಗ್ಯ ಬೆಳವಣಿಗೆಗೆ ಹೆಚ್ಚು ಶಕ್ತಿದಾಯಕ ಮತ್ತು ಹೆಚ್ಚು ಪರಿಣಾಮಕಾರಿ. ಮಾರಕ ರೋಗಗಳಿಗೆ ನೀಡುವಂತಹ ಚುಚ್ಚುಮದ್ದು ಲಿಸಿಕೆ ತಪ್ಪದೆ ಮಗುವಿಗೆ ಕೊಡಿಸಬೇಕು ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಬಿ. ಗಡಾದ ಮಾತನಾಡಿ, ಮಗುವಿನ ಆರೋಗ್ಯದ ಬೆಳವಣಿಗೆ ಸತತವಾಗಿ 6 ತಿಂಗಳುವರೆಗೆ ಎದೆ ಹಾಲುಣಿಸಬೇಕು. ತಾಯಂದಿರು ಮಗುವಿನ ಬೆಳವಣಿಗೆಗೆ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು ಎಂದರು.ಈ ವೇಳೆ ಪಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸವಿತಾ ಪವಾರ ಮಾತನಾಡಿದರು. ಸ್ತನ್ಯಪಾನ ಬೆಂಬಲಿಸುವ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಸಮುದಾಯ ಆರೋಗ್ಯಾಧಿಕಾರಿ ಲೂದಿಯಾ.ಕೆ.,ಶಶಿಕಲಾ ಹಡಪದ ಸೇರಿದಂತೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.