ಬೆಂಗಳೂರು: ‘ನೂರು ಪ್ರಕಾಶ ವರ್ಷಗಳು’ ಎಂಬ ಆಶಯದೊಂದಿಗೆ ಸಮಸ್ತ ಸೆಂಟಿನರಿ ಅಂಗವಾಗಿ ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲಾ ಸಮಿತಿಯ ಸಾಹಿತ್ಯೋತ್ಸವ ವೇದಿಕೆಯಲ್ಲಿ ಇಂಪಾಕ್ಟ್ ಕಾರ್ಯಕ್ರಮ ನಡೆಯಿತು.ಕೆ.ಎಂ.ಜೆ. ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಸಅದಿ ಕಿನ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮುಜೀಬ್ ಸಖಾಫಿ ಉದ್ಘಾಟಿಸಿದರು. ಅನಸ್ ಸಿದ್ದೀಖಿ ಉಸ್ತಾದ್ ತರಗತಿಗೆ ನೇತೃತ್ವ ನೀಡಿದರು. ಶಂಸುದ್ದೀನ್ ಅಝ್‌ಹರಿ ಸ್ವಾಗತಿಸಿದರು.ಸಮುದಾಯದಲ್ಲಿ ನೂತನವಾದಿಗಳ ಪೊಳ್ಳು ವಾದಗಳಿಂದಾಗಿ ಬಿರುಕು ಮೂಡಿಸಲು ನಡೆಸಿದ ಪ್ರಯತ್ನಗಳ ಸಂದರ್ಭದಲ್ಲಿ, ಅವುಗಳ ಕುಟಿಲ ತಂತ್ರಗಳನ್ನು ಬಯಲಿಗೆಳೆದು ಮುಸ್ಲಿಂ ಸಮುದಾಯದ ನಂಬಿಕೆ ಹಾಗೂ ಏಕತೆಯನ್ನು ಸಂರಕ್ಷಿಸುವ ಉದ್ದೇಶದಿಂದ ಸಮಸ್ತ ಸಂಘಟನೆ ರೂಪುಗೊಂಡಿತು. ಅಂದಿನಿಂದ ಇಂದಿನವರೆಗೆ ಸಮಸ್ತ ಕೈಗೊಂಡ ವಿವಿಧ ಕಾರ್ಯತಂತ್ರಗಳು, ಸಮುದಾಯದ ಸೇವೆ ಹಾಗೂ ಸಂಘಟನೆಯ ಶತಮಾನೋತ್ಸವದ ಹಿನ್ನೆಲೆಯನ್ನು ಕಾರ್ಯಕ್ರಮದಲ್ಲಿ ವಿವರಿಸಲಾಯಿತು. ಕಾರ್ಯಕ್ರಮದಲ್ಲಿ ಕೆ.ಎಂ.ಜೆ, ಎಸ್.ವೈ.ಎಸ್, ಎಸ್ಸೆಸ್ಸೆಫ್‌ನ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.
ಸಮಸ್ತ ಸೆಂಟಿನರಿ ಅಂಗವಾಗಿ ಸಾಹಿತ್ಯೋತ್ಸವ ವೇದಿಕೆಯಲ್ಲಿ ಇಂಪಾಕ್ಟ್ ಕಾರ್ಯಕ್ರಮ
ಕೆ.ಎಂ.ಜೆ. ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಸಅದಿ ಕಿನ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮುಜೀಬ್ ಸಖಾಫಿ ಉದ್ಘಾಟಿಸಿದರು. ಅನಸ್ ಸಿದ್ದೀಖಿ ಉಸ್ತಾದ್ ತರಗತಿಗೆ ನೇತೃತ್ವ ನೀಡಿದರು. ಶಂಸುದ್ದೀನ್ ಅಝ್‌ಹರಿ ಸ್ವಾಗತಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.