ಸರ್ಕಾರದ ಎಲ್ಲಾ ಕಾರ್ಯಯಕ್ರಮ, ಯೋಜನೆ ಅನುಷ್ಠಾನಗೊಳಿಸಿ: ಕೆ.ಆರ್.ನಂದಿನಿ

| Published : Feb 14 2025, 12:31 AM IST

ಸರ್ಕಾರದ ಎಲ್ಲಾ ಕಾರ್ಯಯಕ್ರಮ, ಯೋಜನೆ ಅನುಷ್ಠಾನಗೊಳಿಸಿ: ಕೆ.ಆರ್.ನಂದಿನಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಪಂ ಅಧ್ಯಕ್ಷರು, ಅಧಿಕಾರಿಗಳು ತಿಂಗಳಿಗೊಂದು ಸಭೆ ನಡೆಸಿ ಚರ್ಚಿಸಿ ಸರ್ಕಾರ ಸೌಲಭ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದರೆ ಸಾರ್ವಜನಿಕರಿಗೂ ಸಹ ನಿಮ್ಮಗಳ ಮೇಲೆ ನಂಬಿಕೆ, ಗೌರವ ಬೆಳೆಯುತ್ತದೆ. ಪ್ರತಿ ಗ್ರಾಪಂಗಳಲ್ಲೂ ಕಸ ವಿಲೇವಾರಿ ಸಮರ್ಪಕವಾಗಿ ನಡೆಯಬೇಕು, ಮನೆಮನೆಗಳಿಗೆ ತೆರಳಿ ಕಸ ಸಂಗ್ರಹಿಸಿ ವಿಲೇವಾರಿ ಮಾಡಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸರ್ಕಾರಗಳು ನೀಡುತ್ತಿರುವ ಎಲ್ಲಾ ಕಾರ್ಯಯಕ್ರಮ, ಯೋಜನೆಗಳನ್ನು ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಜನರಿಗೆ ಅರಿವು ಮೂಡಿಸಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕೆಲಸ ಮಾಡಬೇಕು ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಹೇಳಿದರು.

ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ಗ್ರಾಪಂನಿಂದ ನಡೆದ ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ಆಹವಾಲು ಸ್ವೀಕರಿಸಿ ಮಾತನಾಡಿ, ಗ್ರಾಪಂ ಹಂತದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಹೋದಾಗ ಹಲವು ಅಡೆತಡೆಗಳು ಬರುವುದು ಸಹಜ. ಆದರೆ, ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಒಟ್ಟಾಗಿ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರಿ ಕಾರ್‍ಯಕ್ರಮಗಳನ್ನು ಅನುಷ್ಠಾನಗೊಳಿಸುವ ಕೆಲಸ ಮಾಡಬೇಕು ಎಂದರು.

ಗ್ರಾಪಂ ಹಂತದಲ್ಲಿ ಪರಿಹರಿಸಬಹುದಾದ ಸಮಸ್ಯೆಗಳನ್ನು ಇಲ್ಲಿಯೇ ಪರಿಹರಿಸಬೇಕು. ಮನಸ್ತಾಪ, ವೈರತ್ವದಿಂದ ಸಮಸ್ಯೆಗಳನ್ನು ದೊಡ್ಡದಾಗಿ ಮಾಡಬಾರದು. ಅಧಿಕಾರಿಗಳು, ಜನಪ್ರತಿನಿಧಿಗಳು, ಗ್ರಾಮದ ಮುಖಂಡರು ಎಲ್ಲರು ಒಟ್ಟಾಗಿ ಕುಳಿತು ಚರ್ಚಿಸಿ ಕೆಲಸ ಮಾಡಿದರೆ ಸಮಸ್ಯೆಗಳ ಪರಿಹಾರ ನೀಡಬಹುದು. ಜೊತೆಗೆ ಯೋಜನೆ, ಸಲವತ್ತುಗಳನ್ನು ಜನರಿಗೆ ತಲುಪಿಸಬಹುದು ಎಂದರು.

ಗ್ರಾಪಂ ಅಧ್ಯಕ್ಷರು, ಅಧಿಕಾರಿಗಳು ತಿಂಗಳಿಗೊಂದು ಸಭೆ ನಡೆಸಿ ಚರ್ಚಿಸಿ ಸರ್ಕಾರ ಸೌಲಭ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದರೆ ಸಾರ್ವಜನಿಕರಿಗೂ ಸಹ ನಿಮ್ಮಗಳ ಮೇಲೆ ನಂಬಿಕೆ, ಗೌರವ ಬೆಳೆಯುತ್ತದೆ. ಪ್ರತಿ ಗ್ರಾಪಂಗಳಲ್ಲೂ ಕಸ ವಿಲೇವಾರಿ ಸಮರ್ಪಕವಾಗಿ ನಡೆಯಬೇಕು, ಮನೆಮನೆಗಳಿಗೆ ತೆರಳಿ ಕಸ ಸಂಗ್ರಹಿಸಿ ವಿಲೇವಾರಿ ಮಾಡಬೇಕು ಎಂದರು.

ಬಳ್ಳಾರಿ ಜಿಲ್ಲೆಯಲ್ಲಿ ಕಸದ ವಾಹನಗಳನ್ನು ಓಡಿಸಲು ಮಹಿಳಾ ಚಾಲಕಿಯರೇ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇಲ್ಲೂ ಸಹ ಮಹಿಳೆರಿಗೆ ವಾಹನ ಓಡಿಸುವ ಬಗ್ಗೆ ತರಬೇತಿ ನೀಡಿ ಮಹಿಳೆಯೂ ಸಹ ಕಸ ವಿಲೇವಾರಿ ಕಾರ್‍ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದರು.

ಇಒ ಲೋಕೇಶ್‌ಮೂರ್ತಿ ಮಾತನಾಡಿ, ಸುಂಕಾತೊಣ್ಣೂರು ಗ್ರಾಪಂ ಶಿಸ್ತುಬದ್ಧವಾಗಿ ನಡೆಯುತ್ತಿದೆ. ಪಂಚಾಯ್ತಿ ಕಂದಾಯ ವಸೂಲಾತಿ, ನರೇಗಾ ಕಾರ್ಯಯಕ್ರಮ ಅನುಷ್ಠಾನದಲ್ಲಿ ಶೇ.100 ಗುರಿ ಸಾಧನೆ ಮಾಡಿದೆ. ಗ್ರಾಮಗಳಲ್ಲಿ ಮೂಲ ಸೌಕರ್ಯ ಒದಗಿಸಿಕೊಡುವ ಜೊತೆಗೆ ಪಂಚಾಯ್ತಿಗೆ ಬರುವ ಸಾರ್ವಜನಿಕರೊಂದಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದರು.

ಈ ವೇಳೆ ಸಿಇಒ ಕೆ.ಆರ್.ನಂದಿನಿ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಸಾರ್ವಜನಿಕರಿಗೆ ಇ-ಸ್ವತ್ತ ವಿತರಣೆ ಮಾಡಿದರು. ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಕಾರ್‍ಯಾದೇಶ ವಿತರಣೆ ಮಾಡಿದರು. ಜಲಜೀವನ್ ಯೋಜನೆ ಹಾಗೂ ನರೇಗಾ ಯೋಜನೆಯ ಹಲವು ಕಾಮಗಾರಿ ವೀಕ್ಷಣೆ ಮಾಡಿದರು. ಸುಂಕಾತೊಣ್ಣೂರು, ಈರೇಗೌಡನಕೊಪ್ಪಲು ಶಾಲೆಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು.

ಸಮಾರಂಭದಲ್ಲಿ ಜಿಪಂ ಸಹಾಯಕ ಕಾರ್ಯಯದರ್ಶಿ ಚಂದ್ರು, ಗ್ರಾಪಂ ಅಧ್ಯಕ್ಷೆ ಮಮತ, ಉಪಾಧ್ಯಕ್ಷ ಹೇಮಂತ್‌ಕುಮಾರ್, ಮಾಜಿ ಅಧ್ಯಕ್ಷ ಜೆ.ದೇವೇಗೌಡ, ಸದಸ್ಯರಾದ ಸುರೇಶ್, ಭಾಗ್ಯಮ್ಮ, ಕನ್ಯಮ್ಮ, ರಾಧಾಮಣಿ, ಪುಟ್ಟಸ್ವಾಮೀಗೌಡ, ಜಯಶೀಲ, ಕೇಶವಮೂರ್ತಿ, ಶಿವಕುಮಾರ್, ಹೇಮಂತ್‌ಕುಮಾರ್, ಪುಟ್ಟಮ್ಮ, ನಳಿನಾಕ್ಷಿ, ಸರೋಜಮ್ಮ, ಹೇಮಕುಮಾರ್, ನಾಗರಾಜು, ರಾಜಮ್ಮ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಭಾಗವಹಿಸಿದ್ದರು.