ಸಾರಾಂಶ
ಆನಂದಪುರ: ಜಾನಪದ ಕಲೆಗಳು ಉಳಿಯಬೇಕಾದರೆ ಪ್ರಾಥಮಿಕ ಶಿಕ್ಷಣದಿಂದಲೇ ಮಕ್ಕಳಿಗೆ ಜಾನಪದ ಪಠ್ಯ ಪುಸ್ತಕ ಅಳವಡಿಕೆಯಾಗಬೇಕು ಎಂದು ಸರ್ಕಾರಕ್ಕೆ ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ಬಿ.ಟಾಕಪ್ಪ ಕಣ್ಣೂರ್ ಆಗ್ರಹಿಸಿದರು.
ಆನಂದಪುರ: ಜಾನಪದ ಕಲೆಗಳು ಉಳಿಯಬೇಕಾದರೆ ಪ್ರಾಥಮಿಕ ಶಿಕ್ಷಣದಿಂದಲೇ ಮಕ್ಕಳಿಗೆ ಜಾನಪದ ಪಠ್ಯ ಪುಸ್ತಕ ಅಳವಡಿಕೆಯಾಗಬೇಕು ಎಂದು ಸರ್ಕಾರಕ್ಕೆ ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ಬಿ.ಟಾಕಪ್ಪ ಕಣ್ಣೂರ್ ಆಗ್ರಹಿಸಿದರು.
ಇಲ್ಲಿಗೆ ಸಮೀಪದ ಚನ್ನಶೆಟ್ಟಿಕೊಪ್ಪ ಗ್ರಾಮದಲ್ಲಿ ನಡೆದ 9ನೇ ಜಿಲ್ಲಾ ಜಾನಪದ ಸಮ್ಮೇಳನದ ಸಮಾರೋಪ ಸಮಾರಂಭದ ಸರ್ವಾಧ್ಯಕ್ಷರ ನುಡಿಯನ್ನಡಿ, ಗ್ರಾಮೀಣ ಭಾಗದ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಾಥಮಿಕ ಶಿಕ್ಷಣದಿಂದಲೇ ಮಕ್ಕಳಿಗೆ ಜಾನಪದ ಕಲೆಗಳ ಬಗ್ಗೆ ಪಠ್ಯ ಪುಸ್ತಕ ಒಂದನ್ನು ತರಬೇಕೆಂದು ಒತ್ತಾಯಿಸಿದರು.ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಮಂಜುನಾಥ್ ಮಾತನಾಡಿ, ನಮ್ಮ ಗ್ರಾಮೀಣ ಭಾಗದ ಕಲೆಗಳನ್ನು ಉಳಿಸಿ ಬೆಳೆಸಬೇಕಾದರೆ ಜಾನಪದ ಸಮ್ಮೇಳನಗಳು ಅತ್ಯವಶ್ಯಕ. ಹಾಗೆ ಜಾನಪದ ಕಲಾವಿದರು ಅವಕಾಶ ಸಿಕ್ಕಲ್ಲಿ ತಮ್ಮ ಕಲೆಗಳನ್ನು ಪ್ರದರ್ಶನ ಮಾಡಬೇಕು. ಅಲ್ಲದೆ ಜಾನಪದ ಕಲೆಯನ್ನು ಕಲಿಯುವ ಆಸಕ್ತಿಯುಳ್ಳವರು ಇದ್ದರೆ ಅಂತಹ ಕಲಾವಿದರಿಗೆ ಜಿಲ್ಲಾಮಟ್ಟದಲ್ಲಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಜಾನಪದ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಗುಡುವಿ ಸ್ವಾಮಿ, ತಾಲೂಕು ಅಧ್ಯಕ್ಷ ಸತ್ಯನಾರಾಯಣ ಸಿರವಂತೆ, ಮಧುಸೂದನ್ ಜೋಯ್ಸ್, ದಿನೇಶ್, ಲೋಕೇಶ್, ನಾಗರಾಜು ಜೋಗಿ, ಜ್ಯೋತಿ ಕೋವಿ, ಶರತ್ ನಾಗಪ್ಪ, ಚೌಡಪ್ಪ, ಎಚ್.ಕೆ.ನಾಗಪ್ಪ ಅನೇಕರು ಉಪಸ್ಥಿತರಿದ್ದರು.