ಸಾರಾಂಶ
ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ರೈತರ ಬೇಡಿಕೆಗಳಾದ ದೇವನಹಳ್ಳಿ ಬಳಿಯ ರೈತರ 1777 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ರಾಜ್ಯ ಸರ್ಕಾರ ಕೈ ಬಿಟ್ಟಿದೆ, ಕೂಡಲೇ ಗೆಜೆಟ್‌ನಲ್ಲಿ ಪ್ರಕಟಣೆ ಹೊರಡಿಸಬೇಕು. ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಮುಂಬರುವ ಅಧಿವೇಶನದಲ್ಲಿ ವಾಪಸ್ ಪಡೆಯಬೇಕು. ಎಪಿಎಂಸಿ ಕಾಯ್ದೆಗಳನ್ನು ಮತ್ತಷ್ಟು ರೈತ ಪರ ಗಟ್ಟಿಗೊಳಿಸಬೇಕು. ಕಾರ್ಮಿಕ ತಿದ್ದುಪಡಿ ಕೋಡ್‌ಗಳನ್ನು ರಾಜ್ಯದಲ್ಲಿ ಜಾರಿ ಮಾಡಬೇಕು. ಕೇಂದ್ರ ನ್ಯಾಷನಲ್ ಕೃಷಿ ಮಾರುಕಟ್ಟೆ ಪ್ರೇಮ್ ವರ್ಕ್ ನೀತಿಯನ್ನು ತಿರಸ್ಕರಿಸಬೇಕು. ವಿದ್ಯುತ್ ಖಾಸಗೀಕರಣವನ್ನು ರಾಜ್ಯದಲ್ಲಿ ಜಾರಿಗೊಳಿಸಬಾರದು. ತಾಲೂಕಿನಲ್ಲಿ 1962 ರಿಂದ 2024 ರ ವರೆಗೆ ರೈತರಿಗೆ ನೀಡಿರುವ ಸಾಗುವಳಿ ಜಮೀನನ್ನು ತಕ್ಷಣ ದುರಸ್ಥಿ ಮತ್ತು ಪೋಡ್ ಮಾಡಬೇಕು. ಕಾಡು ಪ್ರಾಣಿಗಳಿಂದಾಗುವ ಬೆಳೆ ನಷ್ಟವನ್ನು ತಕ್ಷಣ ತುಂಬಿ ಕೊಡಬೇಕು. ಗ್ರಾಪಂನಲ್ಲಿ 9 ಮತ್ತು 11 ಮತ್ತು 11 ಬಿ ಇ೦ಸ್ವತ್ತನ್ನು ತಕ್ಷಣ ಹಾಗು ತುರ್ತಾಗಿ ನೀಡಬೇಕು. ಹುತ್ತೂರು ಕೆರೆಯಿಂದ ಮುಂದಿನ 8 ಕೆರೆಗಳಿಗೆ ನೀರು ತುಂಬಿಸಬೇಕು. 2025-26 ನೇ ಸಾಲಿನಲ್ಲಿ ರೈತ ಬಾಳೆ ಬೆಳೆ ಪ್ರಕೃತಿ ವಿಕೋಪಕ್ಕೆ ನಷ್ಟವಾಗಿದೆ ತಕ್ಷಣ ಪರಿಹಾರ ನೀಡಬೇಕು ಎಮದು ಒತ್ತಾಯಿಸಿದರು,ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಮಹದೇವಪ್ಪ ಹಂಗಳ,ತಾಲೂಕು ಅಧ್ಯಕ್ಷ ದಿಲೀಪ್ ಹಂಗಳ,ಪ್ರಧಾನ ಕಾರ್ಯದರ್ಶಿ ಶಿವಣ್ಣ,ಯುವ ಘಟಕದ ಅಧ್ಯಕ್ಷ ಭರತ್,ನಾಗರಾಜು,ರವಿಚಂದ್ರ,ಪರಶಿವಶೆಟ್ಟಿ,ಮಹೇಶ್,ಜವರಶೆಟ್ಟಿ,ಗೌರಮ್ಮ ಸೇರಿದಂತೆ ಹಲವರಿದ್ದರು.