ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿ: ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ

| Published : Nov 08 2024, 12:40 AM IST

ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿ: ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಯುವಕರು ಕೃಷಿಯತ್ತ ವಾಲಬೇಕಾಗಿದೆ. ಹೊಸ ಹೊಸ ತಂತ್ರಜ್ಞಾನಗಳು ಇಂದಿನ ಕೃಷಿಯಲ್ಲಿ ಬರುತ್ತಿವೆ. ನೀರು ಮತ್ತು ಮಣ್ಣು ಪ್ರಕೃತಿಯ ಸಂಪತ್ತಾಗಿದ್ದು, ಉಳಿಸಿಕೊಂಡು ಹೋಗುವ ಕೆಲಸ ನಮ್ಮದಾಗಬೇಕು

ಕನ್ನಡಪ್ರಭ ವಾರ್ತೆ ಬೀಳಗಿ

ಇಂದು ಹೊಸ ತಂತ್ರಜ್ಞಾನಗಳಿಂದ ರೈತನ ಬದುಕು ಬಂಗಾರವಾಗಬೇಕು. ಅದಕ್ಕಾಗಿ ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ ಅವಶ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.

ಪಟ್ಟಣದ ನಿರಾಣಿ ಸ್ವಗೃಹ ಕಚೇರಿಯಲ್ಲಿ ನಡೆದ ಎಮ್.ಆರ್.ಎನ್.ನಿರಾಣಿ ಉದ್ಯಮ ಸಮೂಹ ಸಂಸ್ಥೆ ಕೆರಕಲಮಟ್ಟಿ ನಿರಾಣಿ ಸಕ್ಕರೆ ಕಾರ್ಖಾನೆ ಘಟಕ-4ರ ಕಬ್ಬಿನ ಬೆಳವಣಿಗೆಯಲ್ಲಿ ತಾಂತ್ರಿಕತೆ ಕುರಿತು ವಿಚಾರ ಸಂಕಿರ್ಣದಲ್ಲಿ ಮಾತನಾಡಿದ ಅವರು, ಯಾವುದೇ ಶಿಕ್ಷಣ ಪಡೆದರು ಇಂದಿನ ಯುವಕರು ಕೃಷಿಯತ್ತ ವಾಲಬೇಕಾಗಿದೆ. ಹೊಸ ಹೊಸ ತಂತ್ರಜ್ಞಾನಗಳು ಇಂದಿನ ಕೃಷಿಯಲ್ಲಿ ಬರುತ್ತಿವೆ. ನೀರು ಮತ್ತು ಮಣ್ಣು ಪ್ರಕೃತಿಯ ಸಂಪತ್ತಾಗಿದ್ದು, ಉಳಿಸಿಕೊಂಡು ಹೋಗುವ ಕೆಲಸ ನಮ್ಮದಾಗಬೇಕು ಎಂದರು.

ಡಾ.ರವಿಶಂಕರ್ ಮಾತನಾಡಿ, ಕಬ್ಬಿನ ಬೆಳವಣಿಗೆಯಲ್ಲಿ ತಾಂತ್ರಿಕ ಪ್ರಗತಿ ಹಾಗೂ ಹೊಸದಾಗಿ ಬಂದ ತಂತ್ರಜ್ಞಾನಗಳು ರೈತರಿಗೆ ತಲುಪುತ್ತಿಲ್ಲ ಮತ್ತು ಕೆಲ ರೈತರು ಆಸಕ್ತಿ ತೋರಿಸುತ್ತಿಲ್ಲ. ಸುಧಾರಿತ ಬೆಳೆ ಮತ್ತು ಬೆಳೆ ಆರೋಗ್ಯ, ಹೆಚ್ಚಿನ ಬೆಳೆ ಇಳುವರಿ, ಹೊಲದ ಯಾವ ಭಾಗದಲ್ಲಿ ನಿಖರವಾದ ಉತ್ಪಾದಕತೆ ಒಳ ನೋಟ, ನೀರಾವರಿ ಸಮಸ್ಯೆಗಳ ಕುರಿತು ನೂತನ ಆ್ಯಪ್‌ನಲ್ಲಿ ತಿಳಿಯಬಹುದು ಎಂದರು.

ಎಂ.ಆರ್.ಎನ್ ಉದ್ಯಮ ಸಮೂಹ ಸಂಸ್ಥೆ ನಿರಾಣಿ ಸಕ್ಕರೆ ಕಾರ್ಖಾನೆ ಘಟಕ 4 ಕೆರಕಲಮಟ್ಟಿ ನೇತೃತ್ವದಲ್ಲಿ ಕಬ್ಬು ಬೆಳೆಯುವ ರೈತರಿಗಾಗಿ ಕಬ್ಬಿನಲ್ಲಿ ಹೆಚ್ಚು ಲಾಭದಾಯಕ ಹಾಗೂ ಗರಿಷ್ಠ ಉತ್ಪಾದನೆ, ತಾಂತ್ರಿಕ ಪ್ರಗತಿಯಿಂದ ಆಗಿರುವ ಬದಲಾವಣೆಯನ್ನು ಸಂಸ್ಥೆಯ ಮೂಲಕ ರೈತರಿಗೆ ತಲುಪಿಸಲಾಗುತ್ತಿದೆ. ನಿರಾಣಿ ಸಂಸ್ಥೆ ಮೂಲಕ ಒಂದೇ ವೇದಿಕೆಯಲ್ಲಿ 1 ಲಕ್ಷಕ್ಕೂ ಅಧಿಕ ರೈತರಿಗೆ ಮಾಹಿತಿ ತಲುಪಿಸಬಹುದು ಎಂಬ ಉದ್ದೇಶದಿಂದ, ಮುಧೋಳ, ಜಮಖಂಡಿ, ಬಾದಾಮಿ, ಬೀಳಗಿಯಲ್ಲಿ ಕಬ್ಬು ಬೆಳವಣಿಗೆ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ವಿಜ್ಞಾನಿ ಭರತ ಅವರು ಮಾತನಾಡಿ, ಹೈಪರ್ ಸ್ಥಳೀಯ ಹವಾಮಾನ ಮುನ್ಸೂಚನೆ ತಮ್ಮ ಹೊಲದ ಒಳನೋಟ ಮತ್ತು ಅದರ ಮೇಲ್ವಿಚಾರಣೆಯನ್ನು ಸುಲಭ ಮಾಡುತ್ತದೆ. ಅಗ್ರಿಟೆಕ್‌ನಲ್ಲಿನ ಅತ್ಯಾಧುನಿಕ ತಂತ್ರಜ್ಞಾನದ ಅಂಚು ಮತ್ತು ಜಮೀನದ ಮೇಲಿನ ವಾಸ್ತವತೆ ಈ ಎರಡರ ನಡುವೆ ಸೇತುವೆಯಾಗಲು ಬಯಸುತ್ತೇವೆ. ತಳಮಟ್ಟದಲ್ಲಿ ಮಧ್ಯಪ್ರವೇಶಿಸಿ ಬದಲಾವಣೆ ತರುವುದು, ಸಮಸ್ಯೆಗಳನ್ನು ಆಳವಾಗಿ ನೋಡಿಕೊಂಡು ಪರಿಹಾರ ಕಂಡುಕೊಳ್ಳುವದು ಹೊಸ ಮೊಬೈಲ್ ಆ್ಯಪ್ ಸಹಾಯಕವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಮುಧೋಳ ಎಮ್.ಆರ್.ಎನ್.ಸಕ್ಕರೆ ಕಾರ್ಖಾನೆಯ ಜಿಎಂ ಗಂಗಾಧರ ಹುಕ್ಕೆರಿ, ಪ್ರಗತಿಪರ ರೈತ ರಾಮಣ್ಣ ಕಾಳಪ್ಪಗೋಳ, ಮಲ್ಲಪ್ಪ ಶಂಭೋಜಿ ಶ್ರೀಶೈಲ ಯಂಕಂಚಿಮಠ ಮತ್ತಿತರರು ಇದ್ದರು.