ಸ್ವಾತಂತ್ರ್ಯ ನಂತರದಲ್ಲಿ ದೇಶದಲ್ಲಿ ಸುಲಲಿತವಾದ ಆಡಳಿತ ನಡೆಸಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟ ಭಾರತ ಸಂವಿಧಾನ ಅಡಿಗಲ್ಲು ಆಗಿದೆ. ಇದರಿಂದ ಧಾರ್ಮಿಕ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ನೆಮ್ಮದಿಯಿಂದ ಎಲ್ಲರೂ ಜೀವನ ನಡೆಸುವಂತಾಗಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಸಂವಿಧಾನದ ಹಕ್ಕು, ಕರ್ತವ್ಯ ಹಾಗೂ ಆಶಯಗಳ ಬಗ್ಗೆ ಮಾತನಾಡುವ ಜತೆಗೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ಪಟ್ಟಣದ ನಿರ್ಮಲಾ ಕಾನ್ವೆಂಟ್ ಶಾಲಾ ಆವರಣದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಡೆದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾಜದ ಎಲ್ಲಾ ಜನಾಂಗದ ಅಭಿವೃದ್ಧಿಗೆ ಪೂರಕವಾದ ಸಂವಿಧಾನ ಕೊಟ್ಟಿದ್ದಾರೆ ಎಂದರು.
ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಮಾತನಾಡಿ, ಸ್ವಾತಂತ್ರ್ಯ ನಂತರದಲ್ಲಿ ದೇಶದಲ್ಲಿ ಸುಲಲಿತವಾದ ಆಡಳಿತ ನಡೆಸಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟ ಭಾರತ ಸಂವಿಧಾನ ಅಡಿಗಲ್ಲು ಆಗಿದೆ. ಇದರಿಂದ ಧಾರ್ಮಿಕ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ನೆಮ್ಮದಿಯಿಂದ ಎಲ್ಲರೂ ಜೀವನ ನಡೆಸುವಂತಾಗಿದೆ ಎಂದರು.ತಾಪಂ ಇಒ ವೀಣಾ ಮಾತನಾಡಿ, ಸಂವಿಧಾನದಲ್ಲಿ ಇರುವ ಪ್ರಜಾಪ್ರಭುತ್ವ, ಮೌಲ್ಯ, ಆಶಯ, ಹಕ್ಕು ಮತ್ತು ಕರ್ತವ್ಯವನ್ನು ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಸಂವಿಧಾನ ದಿನ ಆಚರಣೆ ಮಾಡಲಾಗುತ್ತಿದೆ ಎಂದರು.
ಪ್ರೊ.ಹುಲ್ಕೆರೆ ಮಹದೇವು ಮಾತನಾಡಿ, ಭಾರತ ಸಂವಿಧಾನದಲ್ಲಿ ವಿಶ್ವದ ವಿವಿಧ ದೇಶಗಳ ಸಂವಿಧಾನದ ಹಲವು ಅಂಶಗಳು ಕೂಡಿವೆ. ಜಗತ್ತಿನ ಎಲ್ಲಾ ನೆಲ, ಸಂಸ್ಕೃತಿಯ ಸಾರರೂಪವಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಕೋಮಲ, ನೌ.ಸ.ಅಧ್ಯಕ್ಷ ಕೆಂಪೇಗೌಡ, ದಸಂಸ ಮುಖಂಡರಾದ ಅಲ್ಪಳ್ಳಿ ಗೋವಿಂದಯ್ಯ, ಕಣಿವೆರಾಮು, ಅಂಕಯ್ಯ, ದೇವರಾಜು, ಸಿದ್ದಲಿಂಗ್ಯ, ಟಿಎಪಿಸಿಎಂಎಸ್ ನಿರ್ದೇಶಕ ಹಾಳಯ್ಯ, ಪ್ರಕಾಶ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್, ಹಿಂದುಳಿದ ವರ್ಗಗಳ ಇಲಾಖೆ ಸಹಾಯಕ ನಿರ್ದೇಶಕ ನಂದಕುಮಾರ್, ಸಿಡಿಪಿಒ ಪೂರ್ಣಿಮಾ, ಡಾ.ಅರವಿಂದ್, ಹಂಸವೇಣಿ, ಹುಳಿಗೆರೆ ಮುರಾರ್ಜಿ ಶಾಲೆ ಮುಖ್ಯಶಿಕ್ಷಕ ಮೋಹನ್, ಸೇರಿದಂತೆ ಹಲವರು ಇದ್ದರು.
ಅಲಯನ್ಸ್ ಸಂಸ್ಥೆಯಿಂದ ಭಕ್ತರಿಗೆ ಅನ್ನಸಂತರ್ಪಣೆಮದ್ದೂರು: ಅಲಯನ್ಸ್ ಸಂಸ್ಥೆ ಸಾಮಾಜಿಕ ಸೇವಾ ಕಾರ್ಯಗಳ ಅಂಗವಾಗಿ ಮಳವಳ್ಳಿಯ ಮತ್ತಿತಾಳೇಶ್ವರ ದೇಗುಲದಲ್ಲಿ ಸುಬ್ರಹ್ಮಣ್ಯ ಸೃಷ್ಠಿ ರಥೋತ್ಸವದ ಅಂಗವಾಗಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಸ್ಥೆ ಅಧ್ಯಕ್ಷ ಡಿ.ಕೆ.ಪ್ರಭಾಕರ್ ನೇತೃತ್ವದಲ್ಲಿ ಸದಸ್ಯರು ದೇಗುಲಕ್ಕೆ ಆಗಮಿಸಿದ್ದ ಸುಮಾರು 2 ಸಾವಿರ ಭಕ್ತರಿಗೆ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಬಿ.ಎನ್.ಅಭಿಲಾಶ್, ಅರುಣ್ ರಾಜ್, ಸಂತೋಷ್, ತ್ಯಾಗರಾಜು, ಮಹೇಶ್, ಕೃಷ್ಣ, ಪ್ರಶಾಂತ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.ಇಂದು ಅರಸು ಜ್ಞಾನ ಕೇಂದ್ರ ಉದ್ಘಾಟನೆ
ಮಂಡ್ಯ: ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನ.28ರಂದು ಅರಸು ಜ್ಞಾನ ಕೇಂದ್ರ ಉದ್ಘಾಟನೆ (ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ- ಮಾರ್ಗದರ್ಶನ ಕಾರ್ಯಗಾರ) ಕಾರ್ಯಕ್ರಮವನ್ನು ನಗರದ ಜಿಲ್ಲಾ ಪಂಚಾಯ್ತಿ ಎದುರಿನ ಡಿ.ದೇವರಾಜು ಅರಸು ಕೇಂದ್ರದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನುನ್ನು ಜಿಲ್ಲಾಧಿಕಾರಿ ಡಾ.ಕುಮಾರ ಉದ್ಘಾಟಿಸುವರು. ಅತಿಥಿಗಳಾಗಿ ಜಿಪಂ ಸಿಇಒ ಕೆ.ಆರ್.ನಂದಿನಿ ಹಾಗೂ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಹುಣಸೂರು ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾದ್ಯಾಪಕ ಡಾ.ಪಿ.ಎನ್.ಹೇಮಚಂದ್ರ ಭಾಗವಹಿಸಲಿದ್ದಾರೆ.ನ.29, 30ರಂದು ಖೋಖೋ ಪಂದ್ಯಾವಳಿಮಂಡ್ಯ: ಪಿಇಎಸ್ ಪದವಿ ಪೂರ್ವ ಕಾಲೇಜು ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸಹಯೋಗದಲ್ಲಿ ನ.29 ಮತ್ತು 30ರಂದು ನಗರದ ಕೆ.ವಿ.ಶಂಕರಗೌಡ ರಸ್ತೆಯ ಪಿಇಟಿ ಕ್ರೀಡಾ ಸಮುಚ್ಚಯದಲ್ಲಿ 2025-26ನೇ ಸಾಲಿನ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕ ಮತ್ತು ಬಾಲಕಿಯರ ಖೋ ಖೋ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.