ಸಾರಾಂಶ
ಅಟಲ್ ಪೆನ್ಶನ್ ಯೋಜನೆ ಅಸಂಘಟಿತ ಕಾರ್ಮಿಕ ವರ್ಗಕ್ಕೆ ವರದಾನ. ನಿರ್ದಿಷ್ಟಪಡಿಸಿದ ಕಂತನ್ನು ಪಾವತಿಸಿ 61ನೇ ವರ್ಷದಿಂದ ₹1ರಿಂದ ₹ 5 ಸಾವಿರ ಮಿತಿಯಲ್ಲಿ ಪಿಂಚಣಿ ಪಡೆಯಬಹುದಾಗಿದೆ.
ಧಾರವಾಡ:
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಟಲ್ ಪಿಂಚಣಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿ 2023-24ರ ಅವಧಿಯಲ್ಲಿ ಮಾಡಿದ ಸಾಧನೆಗೆ ರಾಷ್ಟ್ರಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.ಶುಕ್ರವಾರ ನವದೆಹಲಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಎಂ. ಭಂಡಿವಾಡ ಅವರು ಕೇಂದ್ರ ಹಣಕಾಸು ವಿಭಾಗದ ಕಾರ್ಯದರ್ಶಿ ಡಾ. ವಿವೇಕ ಜೋಶಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ದೀಪಕ ಮೊಹಾಂತಿ, ಕೆನರಾ ಬ್ಯಾಂಕಿನ ಮಹಾ ಪ್ರಬಂಧಕ ಭಾಸ್ಕರ ಚಕ್ರವರ್ತಿ ಮತ್ತಿತರ ಗಣ್ಯರು ಇದ್ದರು.
ಪ್ರಶಸ್ತಿ ಸ್ವೀಕರಿಸಿ ಬ್ಯಾಂಕ್ ಅಧ್ಯಕ್ಷ, ಶ್ರೀಕಾಂತ ಭಂಡಿವಾಡ, ಅಟಲ್ ಪೆನ್ಶನ್ ಯೋಜನೆ ಅಸಂಘಟಿತ ಕಾರ್ಮಿಕ ವರ್ಗಕ್ಕೆ ವರದಾನ. ನಿರ್ದಿಷ್ಟಪಡಿಸಿದ ಕಂತನ್ನು ಪಾವತಿಸಿ 61ನೇ ವರ್ಷದಿಂದ ₹1ರಿಂದ ₹ 5 ಸಾವಿರ ಮಿತಿಯಲ್ಲಿ ಪಿಂಚಣಿ ಪಡೆಯಬಹುದಾಗಿದೆ. ಬ್ಯಾಂಕ್ ಈ ವರೆಗೆ 4,27,736 ಅಟಲ್ ಪಿಂಚಣಿ ಖಾತೆ ಮಾಡಿಸಿದೆ. ಈ ದಾಖಲೆಗಿಂತ ರೈತರು, ರೈತ ಕಾರ್ಮಿಕರು, ಕಾರ್ಖಾನೆಗಳಲ್ಲಿ ದುಡಿಯುವವರು, ನಿಶ್ಚಿತ ಪಿಂಚಣಿ ಇಲ್ಲದ ಶ್ರಮಿಕರು ತಮ್ಮ 60ನೇ ವರ್ಷದ ನಂತರ ನಿಶ್ಚಿಂತ ಬದುಕು ಸಾಗಿಸಲು ಅನುಕೂಲವಾಗಲಿದೆ ಎಂಬುದೇ ಸಮಾಧಾನದ ಸಂಗತಿ ಎಂದರು.