ಸಂಸ್ಥೆಯಲ್ಲಿ ಸಾಲ ಸೌಲಭ್ಯ ಪಡೆದಿರುವ ಮತ್ತು ಹಣಕಾಸು ವ್ಯವಹಾರ ನಡೆಸುವ ಸದಸ್ಯರಿಗೆ ಡಿಜಿಟಲ್ ಬ್ಯಾಂಕಿಂಗ್ ಸೇವೆ ನೀಡುವ ಉದ್ದೇಶದಿಂದ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಡಿಜಿ ಪೇಯನ್ನು ಅಳವಡಿಸಲಾಗಿದೆ. ಈ ಸೇವೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಆಧುನಿಕ ತಂತ್ರಜ್ಞಾನದ ಮೂಲಕ ಸಂಸ್ಥೆಯಲ್ಲಿ ಸದಸ್ಯತ್ವ ಹೊಂದಿರುವ ಗ್ರಾಮೀಣ ಜನರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಡಿಜಿ ಪೇ (ಡಿಜಿಟಲ್ ಸೇವೆ)ಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕು ಯೋಜನಾಧಿಕಾರಿ ದಿವಾಕರ್ ತಿಳಿಸಿದರು.

ತಾಲೂಕಿನ ಬೆಳ್ಳೂರಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾ ಕಚೇರಿಯಲ್ಲಿ ಡಿಜಿ ಪೇ (ಡಿಜಿಟಲ್ ಸೇವೆ)ಗೆ ಸೋಮವಾರ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರೂ ಕೂಡ ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಸ್ವಾವಲಂಬಿ ಬದುಕು ನಡೆಸಬೇಕೆಂಬುದು ಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಆಶಯವಾಗಿದೆ. ಇದಕ್ಕೆ ಪೂರಕವಾಗಿ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ಸೇರಿದಂತೆ ಹಲವು ಜನಪರ ಯೋಜನೆಗಳು ಜಾರಿಯಲ್ಲಿವೆ ಎಂದರು.

ಸಂಸ್ಥೆಯಲ್ಲಿ ಸಾಲ ಸೌಲಭ್ಯ ಪಡೆದಿರುವ ಮತ್ತು ಹಣಕಾಸು ವ್ಯವಹಾರ ನಡೆಸುವ ಸದಸ್ಯರಿಗೆ ಡಿಜಿಟಲ್ ಬ್ಯಾಂಕಿಂಗ್ ಸೇವೆ ನೀಡುವ ಉದ್ದೇಶದಿಂದ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಡಿಜಿ ಪೇಯನ್ನು ಅಳವಡಿಸಲಾಗಿದೆ. ಈ ಸೇವೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ವೇಳೆ ಬೆಳ್ಳೂರಿನ ವರ್ತಕರ ಬ್ಯಾಂಕ್‌ನ ಅಧ್ಯಕ್ಷ ಪದ್ಮನಾಭ (ಪಾಪಣ್ಣ), ಮುಖಂಡ ರವಿ, ಸಂಸ್ಥೆಯ ಹಣಕಾಸು ಪ್ರಬಂಧಕ ನಿತೇಶ್, ನೋಡಲ್ ಅಧಿಕಾರಿ ಮೋಹನ್, ಮೇಲ್ವಿಚಾರಕ ರಕ್ಷಿತ್, ಸೇವಾಪ್ರತಿನಿಧಿಗಳಾದ ಜಯಂತಿ, ಅರ್ಚನ, ವಿಎಲ್‌ಇಗಳಾದ ಹೇಮಲತ, ವಿದ್ಯಾ ಸೇರಿದಂತೆ ಸಂಸ್ಥೆಯ ಸದಸ್ಯರು ಇದ್ದರು.