ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಹಟ್ಟಿ
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಹಾಗೂ ಕೊಟ್ಟ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಿ ನುಡಿದಂತೆ ನಡೆದಿದೆ. ಕೇಂದ್ರದ ಬಿಜೆಪಿ ಸರ್ಕಾರದಿಂದ ಬಡ ಜನರಿಗೆ ಯಾವುದೇ ಅನುಕೂಲಗಳಾಗಿಲ್ಲ ಎಂದು ಹಾವೇರಿ-ಗದಗ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.ಪಟ್ಟಣದ ಮಾಗಡಿ ರಸ್ತೆ ಮೂಲಕ ನೆಹರು ವೃತ್ತ, ಬಸವೇಶ್ವರ ವೃತ್ತ, ಗಾಂಧಿ ವೃತ್ತ, ವಾಲ್ಮೀಕಿ ವೃತ್ತ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಿ ಮಾತನಾಡಿದರು. ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರದ ಸಾಧನೆ ಏನಿದೆ? ಜತೆಗೆ ಹಾವೇರಿ-ಗದಗ ಲೋಕಸಭಾ ಮತಕ್ಷೇತ್ರದಲ್ಲಿ ಈ ಹಿಂದೆ ಇದ್ದ ಸಂಸದರು ಏನು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ ಎಂದು ಕ್ಷೇತ್ರದ ಜನರ ಬಳಿ ಬಂದು ಹೇಳಲಿ ಎಂದರು.
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಮಹಿಳೆಯರಿಗೆ ಗೃಹಲಕ್ಷ್ಮೀ ಜತೆ ಮಹಾಲಕ್ಷ್ಮಿ ಯೋಜನೆ ನಿಶ್ಚಿತ. ಮಹಿಳೆಯರು, ಬಡವರ, ರೈತರ ಹಾಗೂ ಕೂಲಿಕಾರ್ಮಿಕರ ಪರವಾಗಿ ಧ್ವನಿ ಎತ್ತುವ ಏಕೈಕ ಪಕ್ಷ ಕಾಂಗ್ರೆಸ್ ಎಂಬುದನ್ನು ಮತದಾರರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.ಮಾಜಿ ಶಾಸಕ ರಾಮಣ್ಣ ಲಮಾಣಿ, ಕೆಪಿಸಿಸಿ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಡಿ.ಕೆ. ಹೊನ್ನಪ್ಪನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ ಮಾಗಡಿ, ಮಂಜುನಾಥ ಘಂಟಿ, ಶಿವನಗೌಡ ಪಾಟೀಲ, ಮುತ್ತುರಾಜ ಭಾವಿಮನಿ, ಹಮೀದ ಸನದಿ, ಪರಮೇಶ ಪರಬ, ಗುರುನಾಥ ದಾನಪ್ಪನವರ, ರಾಜು ಕುಂಬಿ, ಶರಣು ಗೋಡಿ, ಬುಡನಶ್ಯಾ ಮಕಾನದಾರ, ಎಂ.ಸಿ. ಹಿರೇಮಠ, ಮಂಜುನಾಥ ನಾಯಕ, ಅಜ್ಜು ಪಾಟೀಲ, ಅನಿಲ್ ಮಾನೆ, ಹಸರತ ಡಾಲಾಯತ್, ಮೆಹೆಬೂಸಾಬ್ ಲಕ್ಷ್ಮೇಶ್ವರ, ಮಹಾಂತೇಶ ದಶಮನಿ, ಹೊನ್ನಪ್ಪ ಶಿರಹಟ್ಟಿ, ಜಗದೀಶ ಇಟ್ಟೇಕಾರ ಸೇರಿ ಇತರರು ಇದ್ದರು.