ಸಾರಾಂಶ
ವಕ್ಫ್ ಆಸ್ತಿ ವಿಚಾರ ಯಾಕೆ ಪ್ರಾರಂಭವಾಯಿತು, ಇಷ್ಟು ದಿನ ಯಾಕೆ ಇರಲಿಲ್ಲ ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ನ ದುರಾಡಳಿತ ಹೊರಬರಲಿಕ್ಕೆ ಪ್ರಾರಂಭವಾಗಿದೆ. ಕಾಂಗ್ರೆಸ್ ನ ಅಕ್ರಮ ಮುಚ್ಚಿಕೊಳ್ಳುವ ಪ್ರಯತ್ನ ಇದಾಗಿದೆ
ಕನ್ನಡಪ್ರಭ ವಾರ್ತೆ ತುಮಕೂರು
ಸರ್ಕಾರವು ಜನರ ಪಲ್ಸ್ ತಿಳಿದುಕೊಳ್ಳುವುದಕ್ಕೆ ಶಕ್ತಿ ಯೋಜನೆ ಪ್ರಾರಂಭ ಮಾಡಿದ್ದು, ಗ್ಯಾರಂಟಿಗಳನ್ನು ಒಂದೊಂದೇ ವಾಪಸ್ ಪಡೆಯುವ ಸಲುವಾಗಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.ಅವರು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಆಡಳಿತ ಯಾವ ರೀತಿ ಇದೆ, ಕಾಂಗ್ರೆಸ್ ನಾಯಕರ ಪರಸ್ಪರ ಕಚ್ಚಾಟ ಯಾವ ರೀತಿ ನಡೀತಾ ಇದೆ ಎಂದು ನಾವು ಹೇಳಬೇಕಾಗಿಲ್ಲ ಎಂದ ಅವರು, ಖರ್ಗೆಯವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರು ನಾಯಕರನ್ನು ಅಕ್ಕ- ಪಕ್ಕ ಕೂರಿಸಿಕೊಂಡು ಉಪದೇಶ ಮಾಡಿ ಸಲಹೆ ನೀಡಿ ಹೋಗಿದ್ದಾರೆ, ನಾವು ಕೊಟ್ಟಿದ್ದೇವಾ ಎಂದು ಪ್ರಶ್ನಿಸಿದರು.ವಕ್ಫ್ ಆಸ್ತಿ ವಿಚಾರ ಯಾಕೆ ಪ್ರಾರಂಭವಾಯಿತು, ಇಷ್ಟು ದಿನ ಯಾಕೆ ಇರಲಿಲ್ಲ ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ನ ದುರಾಡಳಿತ ಹೊರಬರಲಿಕ್ಕೆ ಪ್ರಾರಂಭವಾಗಿದೆ. ಕಾಂಗ್ರೆಸ್ ನ ಅಕ್ರಮ ಮುಚ್ಚಿಕೊಳ್ಳುವ ಪ್ರಯತ್ನ ಇದಾಗಿದೆ ಎಂದರು.
ಕೇಂದ್ರದ ಮೋದಿಯವರ ಕ್ಯಾಬಿನೆಟ್ ನಲ್ಲಿ ವಕ್ಫ್ ಸಂಬಂಧ ಚರ್ಚೆ ಆಗಿದೆ. ಇದೆಲ್ಲವನ್ನು ಅಂತಿಮ ಮಾಡಲಿಕ್ಕೆ ಕಾನೂನು ಬಲಿಷ್ಠ ವಾಗಿದೆ ಎಂದರು.ಬಿಜೆಪಿಯವರು ಸೇರಿ ಎಲ್ಲರೂ ಜೊತೆಗೂಡಿ ಚನ್ನಪಟ್ಟಣ ಸೇರಿದಂತೆ ಮೂರು ಕ್ಷೇತ್ರಗಳ ಕಡೆ ಕೆಲಸ ಮಾಡಲಾಗುತ್ತಿದ್ದೇವೆ ಎಂದರು.
ಅಮಾವಾಸ್ಯೆ ಕಾರಣ ಚುಂಚನಗಿರಿ ಭೇಟಿ ಬಳಿಕ ಸಿದ್ಧಗಂಗಾ ಮಠಕ್ಕೆ ಬಂದು ಆಶೀರ್ವಾದ ಪಡೆದಿದ್ದಾಗಿ ತಿಳಿಸಿದರು.