ಸಾರಾಂಶ
ಮೊದಲು ಆಸ್ತಿಗೆ ಸಂಬಂಧಿಸಿದ ದಾಖಲೆಗಳ ಕೈ ಬರವಣಿಗೆಯಲ್ಲಿ ನೀಡುತ್ತಿದ್ದರು ಇದರಿಂದ ಅನೇಕ ಗೊಂದಲಗಳು ಉಂಟಾಗುತ್ತಿದ್ದವು ಆಸ್ತಿಯ ವಿಚಾರದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ 2016ರಿಂದ ಇ-ಆಸ್ತಿ ವ್ಯವಸ್ಥೆ ಜಾರಿಗೆ ತಂದಿದ್ದು ಈ ಯೋಜನೆಯ ಸೌಲಭ್ಯ ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ ಪುರಸಭೆ ಅಧಿಕಾರಿಗಳೇ ನಿಮ್ಮ ಮನೆಗೆ ಬಾಗಿಲಿಗೆ ಬರುತ್ತಿದ್ದು ಪ್ರತಿಯೊಬ್ಬರು ನಿಮ್ಮ ಆಸ್ತಿಯ ವಿವರಗಳ ಇ-ಆಸ್ತಿಯಲ್ಲಿ ನೋಂದಾಯಿಸಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ವ್ಯಾಪ್ತಿಯಲ್ಲಿ ಪುರಸಭೆ ವತಿಯಿಂದ ಇ-ಆಸ್ತಿ ಆಂದೋಲನ ನಡೆಯುತ್ತಿದ್ದು, ಪ್ರತಿಯೊಬ್ಬರು ಇ-ಆಸ್ತಿಯಲ್ಲಿ ತಮ್ಮ ಆಸ್ತಿಗಳ ನೋಂದಾಯಿಸ ಕೊಳ್ಳಬೇಕು ಎಂದು ಪುರಸಭೆ ಸದಸ್ಯ ನಂಜುಂಡಪ್ಪ ಹೇಳಿದರು.ಪಟ್ಟಣದ ಎರಡನೇ ವಾರ್ಡ್‌ನಲ್ಲಿ ಪುರಸಭೆಯಿಂದ ಹಮ್ಮಿಕೊಂಡಿದ್ದ ಇ-ಆಸ್ತಿ ಆಂದೋಲನದ ಮನೆ ಬಾಗಿಲಿಗೆ ಪುರಸಭೆ ಕಾರ್ಯಕ್ರಮದಲ್ಲಿ ಇ-ಆಸ್ತಿ ದಾಖಲೆಗಳ ವಿತರಿಸಿ ಮಾತನಾಡಿ ಮೊದಲು ಆಸ್ತಿಗೆ ಸಂಬಂಧಿಸಿದ ದಾಖಲೆಗಳ ಕೈ ಬರವಣಿಗೆಯಲ್ಲಿ ನೀಡುತ್ತಿದ್ದರು ಇದರಿಂದ ಅನೇಕ ಗೊಂದಲಗಳು ಉಂಟಾಗುತ್ತಿದ್ದವು ಆಸ್ತಿಯ ವಿಚಾರದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ 2016ರಿಂದ ಇ-ಆಸ್ತಿ ವ್ಯವಸ್ಥೆ ಜಾರಿಗೆ ತಂದಿದ್ದು ಈ ಯೋಜನೆಯ ಸೌಲಭ್ಯ ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ ಪುರಸಭೆ ಅಧಿಕಾರಿಗಳೇ ನಿಮ್ಮ ಮನೆಗೆ ಬಾಗಿಲಿಗೆ ಬರುತ್ತಿದ್ದು ಪ್ರತಿಯೊಬ್ಬರು ನಿಮ್ಮ ಆಸ್ತಿಯ ವಿವರಗಳ ಇ-ಆಸ್ತಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ ಮಾತನಾಡಿ ಇ-ಆಸ್ತಿ ದಾಖಲೆ ಪ್ರಮುಖ ದಾಖಲೆಯಾಗಿದ್ದು ಇದನ್ನು ಪಡೆದಲ್ಲಿ ತಮ್ಮ ಆಸ್ತಿಯು ಸುಭದ್ರವಾಗುತ್ತದೆ. ಇಲ್ಲಿಯವರೆಗೂ ಇ-ಆಸ್ತಿ ದಾಖಲೆಗಳ ಪಡೆಯದವರು ನಿಗದಿತ ದಾಖಲೆ ಸಲ್ಲಿಸಿ ಇ-ದಾಖಲೆಗಳ ಪಡೆಯಬಹುದು ಎಂದರು.ಪ್ರತಿ ವರ್ಷ ಮನೆ ಕಂದಾಯ, ನಲ್ಲಿ ಕಂದಾಯಗಳ ನಿಗದಿತ ಸಮಯದಲ್ಲಿ ಪಾವತಿಸಿ ಪಟ್ಟಣದ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದರು.
ಕಂದಾಯ ಅಧಿಕಾರಿ ಮಂಜುನಾಥ್ ಮಾತನಾಡಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಇ-ಆಸ್ತಿ ನೋಂದಣಿ ಕಾರ್ಯಕ್ರಮ ಪಟ್ಟಣದ ಪ್ರತಿ ವಾರ್ಡ್‌ಗಳಲ್ಲಿಯೂ ಹಮ್ಮಿಕೊಳ್ಳಲಿದ್ದು ಇ-ಆಸ್ತಿ ದಾಖಲೆಗಳ ಪಡೆದಲ್ಲಿ ಎಲ್ಲಾ ವ್ಯವಹಾರಗಳಿಗೂ ಅನುಕೂಲವಾಗುವ ಜೊತೆಗೆ ವ್ಯಾಜ್ಯಗಳ ತಡೆಗಟ್ಟಲು ಸಹಕಾರಿಯಾಗಲಿದೆ ಎಂದರು.ಕಾರ್ಯಕ್ರಮದಲ್ಲಿ ಕಚೇರಿ ಸಿಬ್ಬಂದಿಗಳಾದ ಪ್ರಭು, ಸೈಯದ್ ಹುಸೇನ್, ಅನಿಲ್, ಮಧು, ನಾಗರಾಜ್ ಸೇರಿ ಸಾರ್ವಜನಿಕರಿದ್ದರು.