ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಿತ ಸೇವೆ ಸಲ್ಲಿಸುವವರಿಗೆ ಮಹತ್ವ-ಕೆ. ವಿನಯಕುಮಾರ

| Published : May 17 2024, 12:34 AM IST

ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಿತ ಸೇವೆ ಸಲ್ಲಿಸುವವರಿಗೆ ಮಹತ್ವ-ಕೆ. ವಿನಯಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿದ್ದು, ಪರಿಣಿತ ಸೇವೆ ಸಲ್ಲಿಸುವವರಿಗೆ ಇಲ್ಲಿ ಹೆಚ್ಚು ಮಹತ್ವವಿದೆ ಎಂದು ಹುಬ್ಬಳ್ಳಿಯ ವಿಘ್ನೇಶ್ವರ ನರ್ಸಿಂಗ ವಿದ್ಯಾಸಂಸ್ಥೆಯ ನಿರ್ದೇಶಕ ಕೆ.ವಿನಯಕುಮಾರ ತಿಳಿಸಿದರು.

ಹಾನಗಲ್ಲ: ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿದ್ದು, ಪರಿಣಿತ ಸೇವೆ ಸಲ್ಲಿಸುವವರಿಗೆ ಇಲ್ಲಿ ಹೆಚ್ಚು ಮಹತ್ವವಿದೆ ಎಂದು ಹುಬ್ಬಳ್ಳಿಯ ವಿಘ್ನೇಶ್ವರ ನರ್ಸಿಂಗ ವಿದ್ಯಾಸಂಸ್ಥೆಯ ನಿರ್ದೇಶಕ ಕೆ.ವಿನಯಕುಮಾರ ತಿಳಿಸಿದರು.ಹಾನಗಲ್ಲಿನ ಗುರುಭವನದಲ್ಲಿ ಹ್ಯುಮ್ಯಾನಿಟಿ ಫೌಂಡೇಶನ್‌ನ ಪರಿವರ್ತನ ಕಲಿಕಾ ಕೇಂದ್ರದಲ್ಲಿ ಆಯೋಜಿಸಿದ ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪ್ರತಿಭೆ ಆಧಾರಿತವಾದ ಉದ್ಯೋಗಾವಕಾಶಗಳಿಗೆ ಮಾತ್ರ ಈಗ ಮನ್ನಣೆ ಇದೆ. ನಮ್ಮ ಓದು ನಿರ್ದಿಷ್ಟ ಉದ್ಯೋಗದ ಪರಿಣಿತಿಗೆ ಸಂಬಂಧಿಸಿರಬೇಕು. ಉತ್ತಮ ಅಧ್ಯಯನದಿಂದ ಉತ್ತಮ ಉದ್ಯೋಗಾವಕಾಶಗಳು ಸಾಧ್ಯ. ಖಾಸಗಿ ಸಂಸ್ಥೆಗಳನ್ನು ಅತ್ಯುತ್ತಮ ಸಂಬಳ ನೀಡಿ ಸೇವೆ ಪಡೆಯುವ ಹೆಚ್ಚು ಅವಕಾಶಗಳಿವೆ. ಅದಕ್ಕಾಗಿ ಪರಿಶ್ರಮ ಬೇಕು. ಸರಕಾರಿ ಉದ್ಯೋಗವನ್ನೇ ಅವಲಂಬಿಸಲಾಗದು. ವೈದ್ಯಕೀಯ ಕ್ಷೇತ್ರದಲ್ಲಿ ನರ್ಸಿಂಗ ಸೇರಿದಂತೆ ಹತ್ತು ಹಲವು ಉದ್ಯೋಗಗಳಿವೆ. ಅದಕ್ಕಾಗಿ ಪರಿಣಿತಿ ಪಡೆದರೆ ದೇಶ ವಿದೇಶದಲ್ಲಿಯೂ ಉದ್ಯೋಗ ಪಡೆಯಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಖಾಸಗಿ ಕ್ಷೇತ್ರದಲ್ಲಿನ ಉದ್ಯೋಗಗಳಿಗೆ ಉತ್ತಮ ಬೆಲೆಯೂ ಇದೆ ಎಂದರು.ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿ, ಗ್ರಾಮೀಣ ಮಕ್ಕಳ ಶೈಕ್ಷಣಿಕ ಹಿತಕ್ಕೆ ಹೆಚ್ಚು ಸಂಘ ಸಂಸ್ಥೆಗಳು ಜಾಗೃತಿ ಮೂಡಿಸುತ್ತಿವೆ. ಪ್ರತಿಭೆಯುಳ್ಳವರಿಗೆ ಹಳ್ಳಿ ಪಟ್ಟಣ ಎಂಬ ಭೇದವಿರಲಾರದು. ನಮ್ಮ ಇಚ್ಛಿತ ಉದ್ಯೋಗಕ್ಕಾಗಿ ಬೇಕಾಗುವ ಶಿಕ್ಷಣವನ್ನು ಶ್ರದ್ಧೆಯಿಂದ ಪಡೆಯುವಲ್ಲಿ ಹಿಂದೆ ಬೀಳಬಾರದು ಎಂದರು.ಪರಿವರ್ತನಾ ಕಲಿಕಾ ಕೇಂದ್ರದ ನಿರ್ದೆಶಕ ಸಂತೋಷ ಅಪ್ಪಾಜಿ ಈ ಸಂದರ್ಭದಲ್ಲಿದ್ದರು.