ಸಾಹಿತ್ಯದಲ್ಲಿ ಜೀವನ ಚರಿತ್ರೆಗೆ ಪ್ರಾಮುಖ್ಯತೆ: ನಾಗಭೂಷಣ

| Published : Dec 18 2024, 12:48 AM IST

ಸಾಹಿತ್ಯದಲ್ಲಿ ಜೀವನ ಚರಿತ್ರೆಗೆ ಪ್ರಾಮುಖ್ಯತೆ: ನಾಗಭೂಷಣ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವ್ಯಕ್ತಿಯ ಜೀವನಚರಿತ್ರೆ ಎಂದರೆ ಆತನ ಕಾಲಘಟ್ಟದ ಸಾಮಾಜಿಕ ಪರಿಸರವನ್ನೂ ಒಳಗೊಂಡಂತೆ ಚರಿತ್ರೆಯನ್ನು ಕಟ್ಟಿಕೊಡುವ ಮೈಲುಗಲ್ಲುಗಳಾಗಿ ನಿಲ್ಲುತ್ತವೆ ಎಂದು ಚಿತ್ರದುರ್ಗದ ನಿವೃತ್ತ ತಹಸೀಲ್ದಾರ್‌ ನಾಗಭೂಷಣ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವ್ಯಕ್ತಿಯ ಜೀವನಚರಿತ್ರೆ ಎಂದರೆ ಆತನ ಕಾಲಘಟ್ಟದ ಸಾಮಾಜಿಕ ಪರಿಸರವನ್ನೂ ಒಳಗೊಂಡಂತೆ ಚರಿತ್ರೆಯನ್ನು ಕಟ್ಟಿಕೊಡುವ ಮೈಲುಗಲ್ಲುಗಳಾಗಿ ನಿಲ್ಲುತ್ತವೆ ಎಂದು ಚಿತ್ರದುರ್ಗದ ನಿವೃತ್ತ ತಹಸೀಲದಾರ್‌ ನಾಗಭೂಷಣ ಹೇಳಿದರು.

ನಿವೃತ್ತ ಶಿಕ್ಷಕ ಎ.ವೈ.ಯಾಳಗಿ ರಚಿಸಿದ ಶಿಕ್ಷಕ ಸಾಹಿತಿ, ಆಧ್ಯಾತ್ಮಜೀವಿ ದಿ.ಬಿ.ಜಿ.ಪಾಟೀಲ ಅವರ ಜೀವನ ಮತ್ತು ಸಾಧನೆ ಕುರಿತ ಸಾಧನೆಯ ಸರದಾರ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ದಿ.ಬಿ.ಜಿ.ಪಾಟೀಲರು ಶಿಕ್ಷಕರಾಗಿ, ಶಿಕ್ಷಣ ಪ್ರೇಮಿಗಳಾಗಿ, ಜಾತ್ಯಾತೀತ ತತ್ವಗಳನ್ನು ತಮ್ಮ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದ ಧೀಮಂತ ವ್ಯಕ್ತಿ. ಅವರ ಬಳಿ ಕಲಿತ ವಿದ್ಯಾರ್ಥಿಗಳು ಇಂದು ಆದರ್ಶ ವ್ಯಕ್ತಿಗಳಾಗಿ ರೂಪುಗೊಂಡು ಸುಂದರ ಮತ್ತು ಸೌಹಾರ್ದ ಸಮಾಜದ ಅಭಿವ್ಯಕ್ತಿಗಳಾಗಿ ಬೆಳೆದಿದ್ದಾರೆ. ಇದು ಬಿ.ಜಿ.ಪಾಟೀಲರಿಗೆ ಸಂದ ಗೌರವವಾಗಿದೆ ಎಂದು ಹೇಳಿದರು.

ಲೇಖಕ ಎ.ವೈ.ಯಾಳಗಿ, ನಿವೃತ್ತ ಕೃಷಿ ಅಧಿಕಾರಿ ಎಸ್.ಕೆ.ಸಿಂಗೆ, ನಿವೃತ್ತ ಪ್ರಾಧ್ಯಾಪಕ ಸಾಹೇಬಗೌಡ ಕೊಕಟನೂರ, ಸದ್ಗುರು ಸದಾನಂದ ಟ್ರಸ್ಟ್ ಮುಖ್ಯಸ್ಥ ಡಾ.ಎನ್.ಬಿ.ವಜೀರಕರ, ಅವರು ದಿ.ಬಿ.ಜಿ.ಪಾಟೀಲರ ಜೊತೆಗಿನ ಒಡನಾಟ ಮತ್ತು ಅವರ ವ್ಯಕ್ತಿತ್ವದ ಕುರಿತು ಬಣ್ಣಿಸಿದರು.

ಸಾನಿಧ್ಯವನ್ನು ಶ್ರೀಶೈಲದ ಸುಜಾತಾ ಹಿರೇಮಠ ವಹಿಸಿದ್ದರು. ಡಾ.ಕಾಂತು ಇಂಡಿ ಕೃತಿ ಪರಿಚಯ ಮಾಡಿದರು. ಬಸವರಾಜ ಗಂಗನಗೌಡರ, ರಮೇಶ ಮುಡಿಸೆಣ್ಣವರ, ಕುಮಾರಗೌಡ ಪಾಟೀಲ, ಅನಿಲ ಹೊಸಮನಿ, ಸತೀಶ ಪಾಟೀಲ, ಸುಮಂಗಲಾ ಪಾಟೀಲ, ಸಾಹೇಬಗೌಡ ಪಾಟೀಲ, ಬಾಪುಗೌಡ ಪಾಟೀಲ ಸೇರಿದಂತೆ ಪಾಟೀಲ ಪರಿವಾರದ ಸದಸ್ಯರು ಮತ್ತು ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.