ಸಾರಾಂಶ
ಜಗತ್ತಿನಲ್ಲಿ ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್‌ಗಳು, ಅಧಿಕಾರಿಗಳ ವರ್ಗಗಳನ್ನು ತಯಾರು ಮಾಡುವಂತವರೇ ಶಿಕ್ಷಕರು. ಶೈಕ್ಷಣಿಕ ಕ್ಷೇತ್ರದಲ್ಲಿ ಗುರು ಪರಂಪರೆ ಪಾತ್ರ ದೊಡ್ಡದು. ಗುರು-ಶಿಷ್ಯರ ಒಡನಾಟಕ್ಕೆ ಶ್ರದ್ಧಾಭಕ್ತಿಯ ಭಾವನೆಯಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಗುರುಕುಲದಿಂದ ಈಗಿನ ಆಧುನಿಕ ಶಿಕ್ಷಣ ಪದ್ಧತಿವರೆಗೂ ಶಿಕ್ಷಕರ ಮಹತ್ವ ಹೆಚ್ಚಾಗುತ್ತಲೇ ಇದೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು ಹೇಳಿದರು.ನಗರದ ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲಾ ಸಭಾಂಗಣದಲ್ಲಿ ಅಸೋಷಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್ ನ್ಯಾಷನಲ್ ಹಾಗೂ ಕೃಷಿಕ ಅಲಯನ್ಸ್, ಸನ್ಮತಿ ಅಲಯನ್ಸ್, ಕಾಂಟ್ರಾಕ್ಟರ್ ಅಲಯನ್ಸ್ ಸಂಸ್ಥೆಗಳು ಕಾರ್ಮೆಲ್ ಕಾನ್ವೆಂಟ್ ವಿದ್ಯಾಸಂಸ್ಥೆ ಸಹಕಾರದೊಂದಿಗೆ ನಡೆದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು.
ಶಿಕ್ಷಕರ ಮಹತ್ವ ಕಡಿಯಾಗುತ್ತಿದೆ ಎಂಬುದು ಸುಳ್ಳು. ಗುರುಕುಲದಿಂದ ಈಗಿನ ಆಧುನಿಕ ಶಿಕ್ಷಣ ಹಾಗೂ ಭವಿಷ್ಯದ ಶಿಕ್ಷಣ ಪದ್ಧತಿವರೆಗೂ ಶಿಕ್ಷಕರ ಮಹತ್ವ ಕಡಿಮೆಯಾಗಲ್ಲ ಎಂದರು.ಜಗತ್ತಿನಲ್ಲಿ ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್‌ಗಳು, ಅಧಿಕಾರಿಗಳ ವರ್ಗಗಳನ್ನು ತಯಾರು ಮಾಡುವಂತವರೇ ಶಿಕ್ಷಕರು. ಶೈಕ್ಷಣಿಕ ಕ್ಷೇತ್ರದಲ್ಲಿ ಗುರು ಪರಂಪರೆ ಪಾತ್ರ ದೊಡ್ಡದು. ಗುರು-ಶಿಷ್ಯರ ಒಡನಾಟಕ್ಕೆ ಶ್ರದ್ಧಾಭಕ್ತಿಯ ಭಾವನೆಯಿದೆ ಎಂದರು.
ಇದೇ ವೇಳೆ ವಿವಿಧ ಶಾಲಾ-ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ಡಿಡಿಪಿಐ ಟಿ.ಶಿವರಾಮೇಗೌಡ, ದಕ್ಷಿಣ ವಲಯ ಬಿಇಒ ಮಹದೇವ್, ವಿಜ್ಞಾನ ವಿಷಯ ನಿವೃತ್ತ ಪರೀಕ್ಷಕ ಸಿಎಲ್ ನಂಜರಾಜ್, ಕಾರ್ಮೆಲ್ ಕಾನ್ವೆಂಟ್ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕಿ ಹಾಗೂ ವ್ಯವಸ್ಥಾಪಕಿ ಸಿಸ್ಟರ್ ಕ್ಲಾಡೀಸ್ ಕ್ಯಾಸ್ಟಲ್ಲಿನೊ, ನಿವೃತ್ತ ಪಿಆರ್‌ಒ ಉಮೇಶ್, ಅಲಯನ್ಸ್ ಸಂಸ್ಥೆ ಅಧ್ಯಕ್ಷೆ ವಿ.ಮಹಾಲಕ್ಷ್ಮಿ, ಕೃಷಿಕ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಎಸ್.ಜೆ.ಮಂಜುನಾಥ್, ಸನ್ಮತಿ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ಸುಜಾತ, ಶುಗರ್ ಸಿಟಿ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಎಸ್.ಎಂ.ಲೋಕೇಶ್, ಕಾಂಟ್ರಾಕ್ಟರ್ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಕುಮಾರಸ್ವಾಮಿ, ಸನ್ಮಾನಿತರಾದ ಸ್ತ್ರೀರೋಗ ತಜ್ಞೆ ಡಾ.ಎಂ.ಎನ್.ಶಿಲ್ಪ, ಡಾ.ಎಚ್.ಸಿ. ಚೌಡೇಗೌಡ, ಪ್ರಾಧ್ಯಾಪಕ ಡಾ.ಜಿ.ವಿ.ನರಸಿಂಹನ್ ಉಪನ್ಯಾಸಕ ಎಂ.ಆರ್. ಮಂಜುನಾಥ್, ಆರ್.ಮಹೇಶ್ವರಿ, ಎಂ.ಸುರೇಂದ್ರ, ಆರ್.ಅನಿತಾ, ಶಿಕ್ಷಕಿ ಕೆ.ಮೈತ್ರಾ ದೇವಿ ಇದ್ದರು.