ಸಾರಾಂಶ
ಕನ್ನಡಪ್ರಭ ವಾರ್ತೆ, ಕೊಪ್ಪ
ಬಿಜೆಪಿಯವರು ಲೋಕಾಯುಕ್ತರಲ್ಲಿ ದೂರು ದಾಖಲಿಸಿರುವ ಹಿನ್ನೆಲೆಯಲ್ಲಿ ಶಾಸಕ ರಾಜೇಗೌಡರ ಪಾರದರ್ಶಕ ವ್ಯವಹಾರಗಳ ದಾಖಲೆಗಳನ್ನು ಬಿಡುಗಡೆಗೊಳಿಸುತ್ತಿದ್ದೇನೆ ಎಂದು ಕೆಪಿಸಿಸಿ ವಕ್ತಾರ, ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ತಿಳಿಸಿದರು. ದಾಖಲೆ ಪತ್ರವನ್ನು ಭಾನುವಾರ ಬಾಳಗಡಿ ಪ್ರವಾಸಿ ಮಂದಿರದಲ್ಲಿ ಬಿಡುಗಡೆಗೊಳಿಸಿ ಮಾತನಾಡಿ ಶಬಾನಾ ರಂಜಾನ್ ಪಾರ್ಟರ್‌ಶಿಪ್ ಫರ್ಮ್ನಲ್ಲಿ ₹೧೨೦ ಕೋಟಿ ಪಾವತಿಯಾಗಿರುವುದು ಶಾಸಕ ಟಿ.ಡಿ. ರಾಜೇಗೌಡರ ಖಾತೆಯಿಂದಲ್ಲ. ಅವರ ಪತ್ನಿ ಡಿ.ಕೆ. ಪುಷ್ಪ, ಪುತ್ರ ರಾಜ್‌ದೇವ್ ಖಾತೆಯಿಂದಲೂ ಅಲ್ಲ ಎಂಬುದನ್ನು ಪ್ರಕರಣದ ದೂರುದಾರ ಬಿಜೆಪಿಗರು ಅರ್ಥ ಮಾಡಿಕೊಳ್ಳಬೇಕು. ಜೀವರಾಜ್ ಅವರಿಗೂ ಈ ದಾಖಲೆಗಳನ್ನು ಕಳುಹಿಸಲಾಗುವುದು. ಅವರು ಪರಿಶೀಲಿಸಿ ಅರ್ಥ ಮಾಡಿ ಕೊಳ್ಳುವ ಪ್ರಯತ್ನ ಮಾಡಲಿ ಬಿಜೆಪಿಯವರು ಅವರ ಕಾರ್ಯಕರ್ತರಿಗೆ ನಾನು ಬೆದರಿಕೆ ಹಾಕಿದ್ದೇನೆ ಎಂದು ಆಪಾದಿಸುತ್ತಿದ್ದಾರೆ.ನಾನು ಬೆದರಿಕೆ ಹಾಕಿದ್ದಲ್ಲಿ ದೂರು ದಾಖಲಿಸದೆ ಏಕೆ ಸುಮ್ಮನಿದ್ದಾರೆ? ಅವರು ದೂರು ದಾಖಲಿಸಲಿ. ಬಿಜೆಪಿ ಕಾರ್ಯಕರ್ತರೊಂದಿಗೆ ನಾನು ಸುಮಾರು ೨೦ ನಿಮಿಷಗಳ ಕಾಲ ಮಾತನಾಡಿದ್ದು (ಎಡಿಟ್ ಮಾಡದ ನೈಜತೆಯಿಂದ ಕೂಡಿದ ನನ್ನದೇ ಧ್ವನಿ ಇರುವ) ಆಡಿಯೋ ರೆಕಾರ್ಡ್ ಇದ್ದಲ್ಲಿ ಅದನ್ನು ಬಿಡುಗಡೆ ಮಾಡಲಿ, ಆ ಪ್ರತೀ ಪದಕ್ಕೂ ನಾನು ಬದ್ಧ. ಈ ಸಂಬಂಧ ಪೊಲೀಸರಲ್ಲಿ ದೂರು ದಾಖಲಿಸಬಹುದು ಎಂದರು.ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಕುಕ್ಕುಡಿಗೆ, ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಭಟ್, ನ.ರಾ.ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರುಬೈಲು ನಟರಾಜ್, ಕೆಪಿಸಿಸಿ ಸದಸ್ಯ ಸದಾಶಿವ, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಜಿತ್, ಹರಿಹರಪುರ ಹೋಬಳಿ ಘಟಕದ ಅಧ್ಯಕ್ಷ ಮಿತ್ರ ಕೋಡ್ತಾಳ್, ಕಸಬಾ ಹೋಬಳಿ ಘಟಕದ ಅಧ್ಯಕ್ಷ ಪ್ರಕಾಶ್ ಪೂಜಾರಿ, ಕೊಪ್ಪ ಎಪಿಎಂಸಿ ಅಧ್ಯಕ್ಷ ರಾಜೇಂದ್ರ, ಮುಖಂಡರಾದ ಸುಂದರೇಶ್, ನವೀನ್ ಮಾವಿನಕಟ್ಟೆ, ಬಿ.ಕೆ.ನಾರಾಯಣ ಸ್ವಾಮಿ, ನುಗ್ಗಿ ಮಂಜುನಾಥ್, ಎಂ.ಆರ್. ರವಿಶಂಕರ್, ದುರ್ಗಾಚರಣ್, ನವೀನ್ ಕರುವಾನೆ, ಅನಿಲ್ ಹೊಸಕೊಪ್ಪ, ವಕೀಲ ರಜಿತ್, ಅಸಗೋಡು ನಾಗೇಶ್ ಮುಂತಾದವರು ಇದ್ದರು.
)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))