2024ರಲ್ಲಿ ಮತ್ತೆ ಮೋದಿ ಪ್ರಧಾನಿ ಶತಸಿದ್ಧ: ಕೋನೇರ್‌

| Published : Feb 17 2024, 01:19 AM IST

ಸಾರಾಂಶ

ಬಿಜೆಪಿ ಗಾಂವ್ ಚಲೋ ಅಭಿಯಾನ ಪ್ರಾರಂಭಿಸಿದೆ. ತಳಮಟ್ಟದಿಂದ ಆರಂಭಿಸಿ ಪ್ರತಿ ಬೂತ್ ಅನ್ನು ಸಬಲೀಕರಣಗೊಳಿಸುವುದು ಪ್ರಾಥಮಿಕ ಉದ್ದೇಶ

ಕನ್ನಡಪ್ರಭ ವಾರ್ತೆ ಶಹಾಪುರ

ಕ್ಷೇತ್ರ ಭದ್ರಪಡಿಸಿಕೊಳ್ಳಲು ಬಿಜೆಪಿಯು ಚುನಾವಣಾ ಧ್ಯೇಯವಾಕ್ಯದೊಂದಿಗೆ ‘ಗಾಂವ್ ಚಲೋ’ ಅಭಿಯಾನ ಪ್ರಾರಂಭಿಸಿದೆ. 2024ರಲ್ಲಿ ಮತ್ತೆ ಮೋದಿ ಪ್ರಧಾನಿಯಾಗುವದು ಶತಸಿದ್ಧ. ಆದ್ದರಿಂದ ಕಾರ್ಯಕರ್ತರು ಹುಮ್ಮಸ್ಸಿನಿಂದ ಅಭಿಯಾನವನ್ನು ಚಾಲೆಂಜ್ ಆಗಿ ತೆಗೆದುಕೊಂಡು ಬೂತ್ ಮಟ್ಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಬಿಜೆಪಿ ಗೆಲ್ಲಿಸಬೇಕು ಎಂದು ನಗರ ಮಂಡಲ ಅಧ್ಯಕ್ಷ ದೇವೇಂದ್ರ ಕೋನೇರ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ನಗರದ ವಾರ್ಡ್ ನಂಬರ್ 10ರ ಬೂತ್ ಸಂಖ್ಯೆ 174, 175, ಚಾಮುಂಡೇಶ್ವರಿ ನಗರದಲ್ಲಿ ಬಿಜೆಪಿ ಗಾಂವ್ ಚಲೋ, ಮತ್ತು ಗೋಡೆ ಬರಹ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಕುರಿತು ಮನೆ ಮನೆಗೆ ಕರಪತ್ರ ವಿತರಿಸಿ ಮಾತನಾಡಿದರು.

ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಅಂತರ ಕಡಿಮೆ ಮಾಡಲು ಬಿಜೆಪಿ ಗಾಂವ್ ಚಲೋ ಅಭಿಯಾನ ಪ್ರಾರಂಭಿಸಿದೆ. ತಳಮಟ್ಟದಿಂದ ಆರಂಭಿಸಿ ಪ್ರತಿ ಬೂತ್ ಅನ್ನು ಸಬಲೀಕರಣಗೊಳಿಸುವುದು ಪ್ರಾಥಮಿಕ ಉದ್ದೇಶವಾಗಿದೆ. ಎಲ್ಲ 28 ಕ್ಷೇತ್ರಗಳಲ್ಲೂ ಗೆಲ್ಲುವ ಅಂತಿಮ ಗುರಿಯೊಂದಿಗೆ ಪ್ರಚಾರ ಯಶಸ್ವಿಗೊಳಿಸಲು ಪಕ್ಷ ತೀರ್ಮಾನಿಸಿದೆ. ಇದಕ್ಕೆ ಕಾರ್ಯಕರ್ತರೇ ಪಕ್ಷದ ಗೆಲುವಿಗೆ ಶಕ್ತಿ ತುಂಬಲಿದ್ದಾರೆ ಎಂದರು.

ಬಿಜೆಪಿ ಮುಖಂಡ ಅಡಿವೆಪ್ಪ ಜಾಕಾ ಮಾತನಾಡಿ, ಅಭಿಯಾನದ ಅಡಿಯಲ್ಲಿ ಪಕ್ಷದ ಕಾರ್ಯಕರ್ತರು ಏಳು ಲಕ್ಷ ಹಳ್ಳಿಗಳಿಗೆ ಹೋಗುತ್ತಾರೆ ಮತ್ತು ಎಲ್ಲಾ ನಗರ ಬೂತ್‌ಗಳು ಕೇಂದ್ರ ಸರ್ಕಾರ ಮಾಡಿದ ಕೆಲಸವನ್ನು ಕೊನೆಯ ವ್ಯಕ್ತಿಗೆ ಕೊಂಡೊಯ್ಯಲಿವೆ. 30 ಲಕ್ಷಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ದೇವಿಂದ್ರಪ್ಪ ಕೊನೇರ, ಹಿರಿಯ ಸತೀಶ್ ತೋನಸನಳ್ಳಿ, ದೇವೇಂದ್ರಪ್ಪ ನಾಸಿ, ಸಾಯಿಬಣ್ಣ ನಾಸಿ, ವಿಶ್ವನಾಥ ಗೌಡಗಾಂವ, ಉಮೇಶ ಮಾಹಮನಿ, ಸೀನಪ್ಪ ನಾಶಿ, ಹನುಮಂತ ನಾಸಿ, ಶಿವಪ್ಪ ನಾಸಿ, ಭೀಮರಾಯ ಉಪ್ಪಾರ ಇತರರಿದ್ದರು.