ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಗ್ಯಾಸ್ ಸಿಲಿಂಡರ್ ಸ್ಪೋಟಗೊಂಡರೆ ಹೇಗೆ ನಿಯಂತ್ರಸಬೇಕು. ಮನೆ ಬೆಂಕಿ ಹೊತ್ತಿಕೊಂಡರೆ ನಿಯಂತ್ರಿಸುವುದು ಹೇಗೆ? ಅಗ್ನಿ ಅವಘಡ ನಡೆದಾಗ ಅಗ್ನಿ ಶಾಮಕದಳ ಹೇಗೆ ಸ್ಪಂದಿಸುತ್ತದೆ ಎಂಬ ಪಾಠವನ್ನು ಕಾಶ್ಮೀರಿ ವಿದ್ಯಾರ್ಥಿಗಳಿಗೆ ಬೋಧಿಸಲಾಯಿತು.ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಜಿಲ್ಲಾ ನೆಹರು ಯುವ ಕೇಂದ್ರದ ಸಹಯೋಗದಲ್ಲಿ 14ರವರೆಗೆ ನಗರದ ರಾಜ್ಯ ಮುಕ್ತ ವಿವಿ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿರುವ ಕಾಶ್ಮೀರಿ ಯುವಜನ ವಿನಿಮಯ ಕಾರ್ಯಕ್ರಮದಲ್ಲಿ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಮೈಸೂರು ಅಗ್ನಿಶಾಮಕ ದಳದವರು ಪ್ರಾತ್ಯಕ್ಷಿಕೆ ಮೂಲಕ ಪಾಠ ಹೇಳಿದರು.ಹೆಬ್ಬಾಳದ ಮೈಸೂರು ಅಗ್ನಿಶಾಮಕ ದಳದ ಠಾಣಾಧಿಕಾರಿ ಎಚ್.ಎಸ್. ಸಂತೋಷ್ ಅವರು, ಅಗ್ನಿ ಅವಘಡಗಳು ಸಂಭವಿಸುವುದು ಹೇಗೆ? ಅವುಗಳನ್ನು ನಿಯಂತ್ರಿಸುವ ಪರಿ ಹೇಗೆಂದು ವಿವರಿಸಿದರು. ಹಾಗೊಂದು ವೇಳೆ ಬೆಂಕಿ ಹೊತ್ತಿಕೊಂಡರೆ ಅದರಿಂದ ಹೊರ ಬರುವುದು ಹೇಗೆ ಎಂಬೆಲ್ಲಾ ಅಂಶಗಳನ್ನು ಸವಿವರಾಗಿ ತಿಳಿಸಿಕೊಟ್ಟರು.ವಿವಿಧ ಜಿಲ್ಲಾ ಯುವಜನ ಸಮನ್ವಯಾಧಿಕಾರಿಗಳಾದ ಅಭಿಷೇಕ್ ಎಸ್. ಚವರೆ, ಮೊಂಟು ಪತಾರ್, ಸುಷ್ಮಾಗವಾಲಿ, ಸಂಜೀವ್, ಅಧಿಕಾರಿ ಇಮ್ರಾನ್ ಅಹಮದ್. ಸತೀಶ್ ಪಡೋಡೆ ಮೊದಲಾದವರು ಇದ್ದರು.