ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ವಿಶ್ವವಿದ್ಯಾನಿಲಯ ನಗರ ಅಂತರ ಕಾಲೇಜುಗಳ ಕರಾಟೆ ಮತ್ತು ಜಿಮ್ನಾಸ್ಟಿಕ್ ಸ್ಪರ್ಧೆಯು ಸಿದ್ದಾರ್ಥನಗರದಲ್ಲಿರುವ ಟೆರೇಶಿಯನ್ ಕಾಲೇಜಿನ ಸಹಯೋಗದೊಂದಿಗೆ ನಡೆದ ಮೈಸೂರು ವಿಶ್ವವಿದ್ಯಾನಿಲಯ ನಗರ ಅಂತರ ಕಾಲೇಜುಗಳ ಕರಾಟೆ ಮತ್ತು ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಜಿಮ್ನಾಸ್ಟಿಕ್ ಮತ್ತು ಕರಾಟೆ ಸ್ಪರ್ಧೆಯಲ್ಲಿ ಮಹಾರಾಣಿ ಮಹಿಳಾ ಕಲಾ ಕಾಲೇಜಿಗೆ 5 ಚಿನ್ನ 2 ಬೆಳ್ಳಿ ಮತ್ತು 1ಕಂಚಿನ ಪದಕ ಗಳಿಸಿದ್ದಾರೆ.ಸ್ಪರ್ಧೆಯಲ್ಲಿ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ವಿದ್ಯಾರ್ಥಿ ಕ್ರೀಡಾಪಟುಗಳಾದ ಎಚ್.ಪಿ. ಸಿಂಚನ - ಪ್ರಥಮ ಬಿಎ ಇವರು ಜಿಮ್ನಾಸ್ಟಿಕ್ ನ ನಾಲ್ಕು ವಿಭಾಗಗಳಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಅಮೋಘ ಸಾಧನೆ ಮಾಡಿದ್ದಾರೆ. ಕರಾಟೆ ಸ್ಪರ್ಧೆಯಲ್ಲಿ ತೇಜಸ್ವಿ ಬೋಜೇಗೌಡ ತೃತೀಯ ಬಿ.ಎ ಇವರು 70 ಕೆಜಿ ವಿಭಾಗದಲ್ಲಿ ಚಿನ್ನದ ಪದಕ , ಮೇಘನ ಪ್ರಥಮ ಬಿಎ 55 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ, ಕೆ. ರೇಖಾ ಪ್ರಥಮ ಬಿಎ 50 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ, ಪ್ರಜ್ಞಾ ಹೇಮಂತ್ ದ್ವಿತೀಯ ಬಿಎ 60 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ಕ್ರೀಡಾಪಟುಗಳ ಸಾಧನೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಎಂ ವಿಜಯಮ್ಮ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಕೆ.ಎಸ್. ಭಾಸ್ಕರ್, ಸಿ.ಎಸ್. ಮೋಹನ್ ಕುಮಾರ್ ಹಾಗೂ ಕಾಲೇಜಿನ ಎಲ್ಲ ಅಧ್ಯಾಪಕ ಮತ್ತು ಅಧ್ಯಾಪಕೇತರ ವರ್ಗದವರು ಹಾಗೂ ವಿದ್ಯಾರ್ಥಿನಿಯರು ಇವರ ಸಾಧನೆ ಪ್ರಶಂಸಿಸಿದ್ದಾರೆ.